Get Updates
Get notified of breaking news, exclusive insights, and must-see stories!

ಬುಡಕಟ್ಟು ಜನರ ಕಾಡಿನಿಂದ ತೆರವುಗೊಳಿಸುವ ತನ್ನದೇ ಆದೇಶಕ್ಕೆ ಸುಪ್ರಿಂ ತಡೆ

ನವದೆಹಲಿ, ಫೆಬ್ರವರಿ 28: ಹದಿನೇಳು ರಾಜ್ಯಗಳ ಬುಡಕಟ್ಟುವಾಸಿಗಳನ್ನು ಅರಣ್ಯ ಪ್ರದೇಶದಿಂದ ಹೊರಗಟ್ಟುವಂತೆ ಆದೇಶ ಹೊರಡಿಸಿದ್ದ ಸುಪ್ರಿಂ ಕೋರ್ಟ್‌ ತನ್ನ ಆದೇಶಕ್ಕೆ ತಾನೇ ತಡೆಯಾಜ್ಞೆ ನೀಡಿದೆ.

ಹಕ್ಕುಪತ್ರದ ಮನವಿ ಅರ್ಜಿ ತಿರಸ್ಕೃತಗೊಂಡಿರುವ 10 ಲಕ್ಷಕ್ಕೂ ಅಧಿಕ ಬುಡಕಟ್ಟು ಹಾಗೂ ಅರಣ್ಯ ನಿವಾಸಿಗಳನ್ನು ಅರಣ್ಯದಿಂದ ತೆರವುಗೊಳಸಿಕೊಳ್ಳಬೇಕು ಎಂದು ಸುಪ್ರಿಂಕೋರ್ಟ್‌ ಫೆಬ್ರವರಿ 13 ರಂದು 17 ರಾಜ್ಯಗಳಿಗೆ ಆದೇಶ ಹೊರಡಿಸಿತ್ತು.

ರಾಜ್ಯಗಳು ಬುಡಕಟ್ಟು, ಅರಣ್ಯ ವಾಸಿಗಳನ್ನು ತೆರವುಗೊಳಿಸುವ ಹಾಗೂ ಭೂಮಿ ಸ್ವಾಧೀನ ಪ್ರಕ್ರಿಯೆಯ ಬಗ್ಗೆ ಸ್ಪಷ್ಟನೆ ನೀಡುವಂತೆ ರಾಜ್ಯಗಳಿಗೆ ಸುಪ್ರಿಂಕೋರ್ಟ್‌ ಸೂಚಿಸಿದೆ. ಆ ವರೆಗೂ ತೆರವು ಆದೇಶ ತಡೆಯಲ್ಲಿರಲಿದೆ.

Supreme Court puts on hold order evicting forest families

ಮುಂದಿನ ವಿಚಾರಣೆಯನ್ನು ಜುಲೈ 10 ಕ್ಕೆ ಮುಂದೂಡಲಾಗಿದ್ದು, ಆ ಒಳಗಾಗಿ ರಾಜ್ಯಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಿದೆ. ಅರಣ್ಯ ಒತ್ತುವರಿಯನ್ನು ಸಹಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.

ಫಪೆಬ್ರವರಿ 13 ರ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂದು ಕೆಲವು ರಾಜ್ಯಗಳು ಮನವಿ ಸಲ್ಲಿಸಲಿದ್ದವು ಅಂತೆಯೇ ಸುಪ್ರಿಂಕೋರ್ಟ್ ತನ್ನ ಆದೇಶಕ್ಕೆ ತಡೆ ನೀಡಿದೆ.

ಬುಡಗಟ್ಟು ಮತ್ತು ಅರಣ್ಯವಾಸಿಗಳನ್ನು ಕಾಡಿನಿಂದ ತೆರವು ಗೊಳಿಸುವ ಆದೇಶಕ್ಕೆ ದೇಶದಾದ್ಯಂತ ಭಾರಿ ವಿರೋಧ ವ್ಯಕ್ತವಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+