Get Updates
Get notified of breaking news, exclusive insights, and must-see stories!

ಭ್ರಷ್ಟಾಚಾರದಲ್ಲಿ ಕೆಐಎಡಿಬಿ ಅತ್ಯಂತ ಕೆಟ್ಟ ಪ್ರಾಧಿಕಾರ: ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ

ವಿಭಾಗೀಯ ಪೀಠವು ಕೈಗಾರಿಕಾ ಪ್ಲಾಟ್ ಹಂಚಿಕೆಗೆ ಸಂಬಂಧಿಸಿದಂತೆ ಭೋರುಕಾ ಸ್ಟೀಲ್ಸ್ ಮತ್ತು ಸರ್ವೀಸ್ ಲಿಮಿಟೆಡ್ ಸಲ್ಲಿಸಿದ ಎಸ್‌ಎಲ್‌ಪಿಯನ್ನು ವಿಚಾರಣೆ ನಡೆಸುತ್ತಿದೆ

ನವದೆಹಲಿ, ಮಾರ್ಚ್. 22: ಭ್ರಷ್ಟಾಚಾರದ ವಿಷಯದಲ್ಲಿ ಈಗಾಗಲೇ ಕರ್ನಾಟಕ ಹಲವು ಬಾರಿ ಸುದ್ದಿಯಾಗಿದೆ. ಸರ್ಕಾರಗಳು ಬೇರೆ ಬೇರೆ ರಾಜ್ಯಗಳಲ್ಲಿಯೂ ಕರ್ನಾಟಕದ ಮಾನವನ್ನು ಕಳೆದಿವೆ, ಈಗ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ದೇಶದ ಎದುರು ರಾಜ್ಯದ ಮಾನ ಹರಾಜು ಹಾಕುತ್ತಿದೆ.

ಭ್ರಷ್ಟಾಚಾರದಲ್ಲಿ ಅತೀ ಕೆಟ್ಟ ಪ್ರಾಧಿಕಾರವೇ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಎಂದು ಸುಪ್ರೀಂ ಕೋರ್ಟ್ ನ್ಯಾಯಾಮೂರ್ತಿ ಎಂ.ಆರ್.ಶಾ ತರಾಟೆಗೆ ತೆಗೆದುಕೊಂಡಿದ್ದಾರೆ. ಭ್ರಷ್ಟಾಚಾರದ ವಿಷಯದಲ್ಲಿ ರಾಜ್ಯದಲ್ಲಿಯೇ ಈ ಮಂಡಳಿ ಅತೀ "ಕೆಟ್ಟದಾಗಿದೆ" ಎಂದು ಮಂಗಳವಾರ ಅಭಿಪ್ರಾಯಪಟ್ಟಿದ್ದಾರೆ.

Supreme Court Judge Slams Karnataka Industrial Areas Development Board For Corruption

"ಕರ್ನಾಟಕದಲ್ಲಿ ಭ್ರಷ್ಟಾಚಾರದ ವಿಷಯದಲ್ಲಿ ಇದು ಅತ್ಯಂತ ಕೆಟ್ಟ ಪ್ರಾಧಿಕಾರವಾಗಿದೆ. ಎಷ್ಟು ಪ್ರಕರಣಗಳಲ್ಲಿ ಭೂಮಿ ಮಂಜೂರು ಮಾಡಲಾಗಿದೆ..?" ಎಂದು ಪ್ರಶ್ನಿಸಿರುವ ಅವರು, ನಾವು ಈ ಬಗ್ಗೆ ಅಭಿಪ್ರಾಯ ತಿಳಿಸಿಲ್ಲ. ಆದರೂ, ನಾವು ಇದನ್ನು ಏಕೆ ಹೇಳುತ್ತಿದ್ದೇವೆ ಎಂದರೆ, ಈ ಬಗ್ಗೆ ಕರ್ನಾಟಕದಿಂದ ಹಲವಾರು ಪ್ರಕರಣಗಳಿವೆ. ನನ್ನ ವೃತ್ತಿಜೀವನದ ನಾವು ಎಷ್ಟೋ ಪ್ರಕರಣಗಳನ್ನು ನೋಡಿದ್ದೇವೆ" ಎಂದು ನ್ಯಾಯಮೂರ್ತಿ ಟೀಕಿಸಿದ್ದಾರೆ.

ನ್ಯಾಯಮೂರ್ತಿ ಸಿ.ಟಿ.ರವಿಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಕೈಗಾರಿಕಾ ಪ್ಲಾಟ್ ಹಂಚಿಕೆಗೆ ಸಂಬಂಧಿಸಿದಂತೆ ಭೋರುಕಾ ಸ್ಟೀಲ್ಸ್ ಮತ್ತು ಸರ್ವೀಸ್ ಲಿಮಿಟೆಡ್ ಸಲ್ಲಿಸಿದ ಎಸ್‌ಎಲ್‌ಪಿಯನ್ನು ವಿಚಾರಣೆ ನಡೆಸುತ್ತಿದೆ. ಸರ್ಕಾರಿ ಪ್ರಾಧಿಕಾರಕ್ಕೆ ವಿವೇಚನಾ ಅಧಿಕಾರವನ್ನು ನೀಡಿದಾಗ ಅದು ಭ್ರಷ್ಟಾಚಾರಕ್ಕೆ 'ಜಂಪ್ ಆಫ್' ಪಾಯಿಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಎಂದು ಪೀಠವು ಹೇಳಿದೆ.

Supreme Court Judge Slams Karnataka Industrial Areas Development Board For Corruption

"ಸರ್ಕಾರಿ ಪ್ರಾಧಿಕಾರಕ್ಕೆ ವಿವೇಚನಾ ಅಧಿಕಾರವನ್ನು ನೀಡಿದಾಗ, ಅದು ಭ್ರಷ್ಟಾಚಾರದ ಪ್ರಾರಂಭದ ಹಂತವಾಗಿದೆ. ವಿವೇಚನಾ ಕೋಟಾದ ನೆಪದಲ್ಲಿ ಕಿಡಿಗೇಡಿತನವಿದೆ" ಎಂದು ವಿಭಾಗೀಯ ಪೀಠ ಹೇಳಿದೆ. ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿ ಪರವಾಗಿ ಹಾಜರಾದ ವಕೀಲರು ಅದು ಹಾಗಲ್ಲ ಎಂದು ಹೇಳಿ, "ನಾನು ಈ ವಿಷಯದಲ್ಲಿ ಬೇರೆ ರೀತಿಯಲ್ಲಿ ಇರಲು ಬಯಸುತ್ತೇನೆ" ಎಂದಿದ್ದಾರೆ.

ಇದಕ್ಕೆ ಉತ್ತರಿಸಿದ ನ್ಯಾಯಪೀಠ, "ನೀವು ಭಿನ್ನವಾಗಿರಬಹುದು ಆದರೆ ನಮ್ಮ ತೀರ್ಪು ಭಿನ್ನವಾಗಿರುವುದಿಲ್ಲ" ಎಂದು ನ್ಯಾಯಮೂರ್ತಿ ಶಾ ಪ್ರತಿಕ್ರಿಯಿಸಿದ್ದಾರೆ. ಸ್ಕ್ರೀನಿಂಗ್ ಕಮಿಟಿ, ಕ್ಲಿಯರೆನ್ಸ್ ಕಮಿಟಿ ಮುಂತಾದ ಹಲವು ಸಮಿತಿಗಳಿದ್ದು, ಅಗತ್ಯ ಭೂಮಿ ಮಂಜೂರು ಮಾಡುವ ಮುನ್ನ ಹೆಚ್ಚಿನ ಪ್ರಮಾಣದ ಗ್ರೌಂಡ್ ವರ್ಕ್ ಮಾಡಲಾಗುತ್ತದೆ ಎಂದು ವಕೀಲರು ತಿಳಿಸಿದ್ದಾರೆ.

ಈ ವೇಳೆ "ಹಾಗಾದರೆ, ಯಾರಾದರೂ ಹೋಗಿ ನನಗೆ ಈ ಕೈಗಾರಿಕಾ ಪ್ಲಾಟ್ ಬೇಕು ಎಂದು ಹೇಳಬಹುದೇ?" ಎಂದು ನ್ಯಾಯಮೂರ್ತಿ ಶಾ ಪ್ರಶ್ನಿಸಿದ್ದಾರೆ. ಇದಕ್ಕೆ ನಿವೇಶನ ಲಭ್ಯವಿದೆಯೇ ಅಥವಾ ಇಲ್ಲವೇ ಎಂಬುದನ್ನು ದೃಢೀಕರಿಸಲು ತಳ ಮಟ್ಟದಲ್ಲಿ ಕೆಲಸ ಮಾಡಲಾಗಿದೆ" ಎಂದು ವಕೀಲರು ಪ್ರತಿಕ್ರಿಯಿಸಿದ್ದಾರೆ. ಜಮೀನು ಮಂಜೂರಾತಿಗೂ ಮುನ್ನ 14 ಇಲಾಖೆಗಳು ಈ ಬಗ್ಗೆ ಕೆಲಸ ಮಾಡುತ್ತವೆ ಎಂದು ನ್ಯಾಯಪೀಠದ ಮುಂದೆ ಪುನರುಚ್ಚರಿಸಿದ್ದಾರೆ. ಇನ್ನು, ನ್ಯಾಯಾಲಯವು ಮಾರ್ಚ್ 22 ರಂದು ಪ್ರಕರಣದ ವಿಚಾರಣೆಯನ್ನು ಮುಂದುವರೆಸಲಿದೆ.

ಕೈಗಾರಿಕೆಗಳ ತ್ವರಿತ ಮತ್ತು ಕ್ರಮಬದ್ಧ ಅಭಿವೃದ್ಧಿಯನ್ನು ಉತ್ತೇಜಿಸಲು ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕಾಯಿದೆಯ ವ್ಯಾಪ್ತಿಯಲ್ಲಿ ಸರ್ಕಾರದ ನೀತಿಗಳ ಅನುಷ್ಠಾನದಲ್ಲಿ ಸಹಾಯ ಮಾಡಲು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯನ್ನು ಅನ್ನು ಕರ್ನಾಟಕದಲ್ಲಿ ಸ್ಥಾಪಿಸಲಾಗಿದೆ. ಆದರೆ, ಹಲವು ಪ್ರಕರಣಗಳಲ್ಲಿ ಭ್ರಷ್ಟಾಚಾರ ನಡೆಸುತ್ತಿದೆ ಎಂದು ಹಲವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+