ವಿದ್ಯಾರ್ಥಿ ಕಣ್ಣಿಗೆ ಗಾಯ: ರಾಜ್ಯದ ಶಾಲಾ ಶಿಕ್ಷಕನಿಗೆ ಶಿಕ್ಷೆ ವಿಧಿಸಿದ ಸುಪ್ರೀಂಕೋರ್ಟ್

ನವದೆಹಲಿ, ಸೆಪ್ಟೆಂಬರ್ 9: ಎರಡನೆಯ ತರಗತಿ ವಿದ್ಯಾರ್ಥಿಗೆ ಥಳಿಸಿ ಆತನ ಎಡಗಣ್ಣಿನ ದೃಷ್ಟಿ ಕಳೆದುಕೊಳ್ಳಲು ಕಾರಣರಾಗಿದ್ದ ರಾಜ್ಯದ ಶಿಕ್ಷಕರಿಗೆ ಸುಪ್ರೀಂಕೋರ್ಟ್‌ನ ಮಹಿಳಾ ಪೀಠ ಶಿಕ್ಷೆ ವಿಧಿಸಿದೆ.

ನ್ಯಾಯಮೂರ್ತಿಗಳಾದ ಆರ್. ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರಿದ್ದ ನ್ಯಾಯಪೀಠ, ಎರಡನೆಯ ತರಗತಿ ವಿದ್ಯಾರ್ಥಿ ಮೇಲೆ ಹಲ್ಲೆ ನಡೆಸಿ ಆತನ ದೃಷ್ಟಿ ಕಳೆದುಕೊಳ್ಳಲು ಕಾರಣರಾದ ಪ್ರಕರಣದ ವಿಚಾರಣೆ ನಡೆಸಿತು.

ಸಮವಸ್ತ್ರದ ಶೂಗಳನ್ನು ಧರಿಸಿದ ಕಾರಣಕ್ಕೆ ಶಾಲಾ ಶಿಕ್ಷಕ ಸಿ.ಆರ್. ಕಾರಿಯಪ್ಪ, ಕೋಲಿನಿಂದ ವಿದ್ಯಾರ್ಥಿಗೆ ಥಳಿಸಿದ್ದರು. ಇದರಿಂದ ಆ ವಿದ್ಯಾರ್ಥಿಯ ಎಡಗಣ್ಣಿಗೆ ಚಿಕ್ಕ ಗಾಯವಾಗಿತ್ತು. ಎರಡು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ ಬಳಿಕವೂ ಆತ ದೃಷ್ಟಿ ಶಕ್ತಿಯನ್ನು ಕಳೆದುಕೊಂಡಿದ್ದ.

Supreme court convicts Karnataka Teacher for assault of student

ಆರೋಪಿ ಶಿಕ್ಷಕರ ವಿರುದ್ಧದ ಆರೋಪಗಳನ್ನು ವಿಚಾರಣಾ ನ್ಯಾಯಾಲಯ ವಜಾಗೊಳಿಸಿತ್ತು. ಬಳಿಕ ಆರೋಪ ಎತ್ತಿಹಿಡಿದಿದ್ದ ಹೈಕೋರ್ಟ್, ಐಪಿಸಿ ಸೆಕ್ಷನ್ 326ರ ಅಡಿ ಎರಡು ವರ್ಷ ಜೈಲು ಶಿಕ್ಷೆಗೆ ಒಳಪಡಿಸಿತ್ತು.

ಪ್ರಕರಣವು ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆ ನಡೆಸಿದ ಮಹಿಳಾ ಪೀಠ ಹಿಂದಿನ ತೀರ್ಪುಗಳನ್ನು ತಿರಸ್ಕರಿಸಿತು. ಹೊಸದಾಗಿ ವಿಚಾರಣೆ ಆರಂಭಿಸಿದ ಪೀಠ, ಗಾಯಗೊಂಡ ವಿದ್ಯಾರ್ಥಿಯ ಹೇಳಿಕೆಗಳನ್ನು ಪರಿಗಣಿಸಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+