ಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಮೇಲಿನ ನಿಷೇಧ ತೆರವು

ನವದೆಹಲಿ, ಸೆಪ್ಟೆಂಬರ್ 17: ಔಷಧಿಗಳ ಮೇಲಿನ ನಿಷೇಧ, ನಿರ್ಬಂಧ ಕುರಿತಂತೆ ಸುಪ್ರೀಂಕೋರ್ಟ್ ಸೋಮವಾರ(ಸೆಪ್ಟೆಂಬರ್ 17)ದಂದು ಮಹತ್ವದ ಆದೇಶ ನೀಡಿದೆ. ನಿಷೇಧಿತ ಔಷಧಿಗಳ ಪಟ್ಟಿ ಸೇರಿದ್ದ ಸ್ಯಾರಿಡಾನ್ ಹಾಗೂ ಮತ್ತೆರಡು ಡ್ರಗ್ಸ್ ಗಳಿಗೆ ಮುಕ್ತಿ ಸಿಕ್ಕಿದೆ.

ಕೇಂದ್ರ ಆರೋಗ್ಯ ಸಚಿವಾಲಯದಿಂದ ನಿಷೇಧಿತ ಮಾತ್ರೆ, ಔಷಧಿಗಳ ಪಟ್ಟಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಗಿದೆ. ಸ್ಯಾರಿಡನ್ ಸೇರಿದಂತೆ 328 ಡ್ರಗ್ಸ್ ನಿಷೇಧಿಸಿದ್ದರೆ, 6 ಡ್ರಗ್ಸ್ ಮೇಲೆ ನಿರ್ಬಂಧ ವಿಧಿಸಲಾಗಿತ್ತು.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ, ಸ್ಯಾರಿಡಾನ್ ತಯಾರಿಸುವ ಸಂಸ್ಥೆಯು ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿತ್ತು. ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸ್ಯಾರಿಡನ್ ಸೇರಿದಂತೆ ಮೂರು ಮಾತ್ರೆಗಳ ಮೇಲಿನ ನಿಷೇಧವನ್ನು ತಾತ್ಕಾಲಿಕವಾಗಿ ತೆರವುಗೊಳಿಸಿದೆ.

Supreme Court allows sale of Saridon, 2 other drugs for now

ನೋವು ನಿವಾರಕಾ ಮಾತ್ರೆ ಸ್ಯಾರಿಡಾನ್, ಚರ್ಮದ ಕೀಮ್ ಪ್ಯಾಂಡರ್ಮ್ ಸೇರಿದಂತೆ 328 ಔಷಧಿ- ಎಫ್ ಡಿಸಿ ಡ್ರಗ್ಸ್ ಮೇಲೆ ಆರೋಗ್ಯ ಇಲಾಖೆ ನಿಷೇಧ ಹೇರಿತ್ತು.

ನಿಷೇಧಿತ ಔಷಧಗಳ ಪಟ್ಟಿಯಲ್ಲಿ ನೋವು ನಿವಾರಕ ಮಾತ್ರೆಗಳಾದ ಸ್ಯಾರಿಡಾನ್, ಡಯಾಬಿಟೀಸ್ ಡ್ರಗ್ಸ್ ಗ್ಲೂಕೊನಾರ್ಮ್(Gluconorm), ಆಂಟಿಬಯೋಟಿಕ್ ಗಳಾ ಲುಪಿಡಿಕ್ಲೋಕ್ಸ್ (Lupidiclox), ಟಾಕ್ಸಿಮ್ ಎ ಜಡ್ಜ್(Taxim AZ) ಸೇರಿವೆ.

ಮಾರ್ಚ್ 10, 2016ರಂದು 344ಎಫ್ ಡಿ ಸಿಗಳನ್ನು ನಿಷೇಧಿಸಿ ಸರ್ಕಾರವು ಆದೇಶಿಸಿತ್ತು. ಡಿಸೆಂಬರ್ 15, 2017ರಂದು ಸುಪ್ರೀಂಕೋರ್ಟ್, ಈ ಬಗ್ಗೆ ಪರೀಕ್ಷಿಸುವಂತೆ ಡ್ರಗ್ ಟೆಕ್ನಿಕಲ್ ಅಡ್ವೈಸರಿ ಬೋರ್ಡ್ ಗೆ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+