ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧರ್ಮ ಸಂಸದ್ ಸಮಾವೇಶದಲ್ಲಿ ದ್ವೇಷ ಭಾಷಣ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ಅಸ್ತು

|
Google Oneindia Kannada News

ಹರಿದ್ವಾರ, ಜನವರಿ 10: ಉತ್ತರಾಖಂಡದ ಹರಿದ್ವಾರದಲ್ಲಿ ವಿವಾದಿತ ಹಿಂದುತ್ವವಾದಿ ನಾಯಕ ಯತಿ ನರಸಿಂಹಾನಂದ ಅವರು ಆಯೋಜಿಸಿದ್ದ ಹಿಂದೂಗಳ ಧಾರ್ಮಿಕ ಸಭೆಯಲ್ಲಿ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ಪ್ರಕರಣದ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ 'ಧರಮ್​​ ಸಂಸದ್‌'ನಲ್ಲಿ 'ದ್ವೇಷ ಭಾಷಣ' ಮಾಡಿದ ಮತ್ತು ಹಿಂಸಾಚಾರಕ್ಕೆ ಕರೆ ನೀಡಿದ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ತುರ್ತಾಗಿ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.

ಕಳೆದ ಡಿಸೆಂಬರ್ 17 ಮತ್ತು 19ರ ವರೆಗೆ ಹರಿದ್ವಾರದಲ್ಲಿ ನಡೆದಿದ್ದ ಧರ್ಮ ಸಂಸದ್ ಸಮಾವೇಶದಲ್ಲಿ ಜನಾಂಗೀಯ ಹತ್ಯಾಕಾಂಡ, ಮುಸ್ಲಿಮರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡುವ, ದ್ವೇಷಪೂರಿತ ಭಾಷಣ ಮಾಡಿದ ವಿಡಿಯೋಗಳು ಹರಿದಾಡಿದ್ದವು. ಗಾಜಿಯಾಬಾದ್‌ನ ದೇವಾಲಯವೊಂದರ ಪ್ರಧಾನ ಅರ್ಚಕ ಯತಿ ನರಸಿಂಹಾನಂದ ಸರಸ್ವತಿ, ಪಾಟ್ನಾದ ಸ್ವಾಮೀಜಿ ಧರ್ಮದಾಸ್ ಮಹಾರಾಜ್ ಸೇರಿದಂತೆ ಹಿಂದೂ ಸ್ವಾಮೀಜಿಗಳು, ಬಿಜೆಪಿ ನಾಯಕಿಯರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾಂಗ್ರೆಸ್ ಮತ್ತು ಟಿಎಂಸಿ ಸೇರಿದಂತೆ ಹಲವಾರು ವಿರೋಧ ಪಕ್ಷಗಳು 'ದ್ವೇಷ ಸಮಾವೇಶ' ಎಂದು ಕರೆದು ಇದನ್ನು ಖಂಡಿಸಿದ್ದರು.

ಹರಿದ್ವಾರ ದ್ವೇಷ ಭಾಷಣ: ರಾಷ್ಟ್ರಪತಿ, ಪಿಎಂಗೆ ಮಾಜಿ ಸಶಸ್ತ್ರ ಪಡೆಗಳ ಮುಖ್ಯಸ್ಥರ ಪತ್ರ
ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದ್ದು, ಹಿಂಸಾಚಾರಕ್ಕೆ ಕರೆ ನೀಡಿದವರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶೆ ಹಾಗೂ ಹಿರಿಯ ವಕೀಲೆ ಅಂಜನಾ ಪ್ರಕಾಶ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಯಾವುದೇ ವಿಳಂಬವಿಲ್ಲದೇ ನಡೆಸಲಾಗುವುದು ಎಂದು ಹಿರಿಯ ವಕೀಲ ಕಪಿಲ್‌ ಸಿಬಲ್‌ಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌.ವಿ.ರಮಣ ಭರವಸೆ ನೀಡಿದ್ದಾರೆ.

Supreme Court agrees to hear Dharam Sansad hate speech case

ಹಿರಿಯ ವಕೀಲ ಕಪಿಲ್ ಸಿಬಲ್ ಅವರು ಧರ್ಮ ಸಂಸದ್ ದ್ವೇಷ ಭಾಷಣದ ವಿಷಯವು ದ್ವೇಷದ ಭಾಷಣ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. "ಎಫ್‌ಐಆರ್ ದಾಖಲಿಸಲಾಗಿದೆ ಆದರೆ ಇಲ್ಲಿಯವರೆಗೆ ಯಾವುದೇ ಕ್ರಮ ಅಥವಾ ಬಂಧನವನ್ನು ಮಾಡಲಾಗಿಲ್ಲ. ಈ ಬಗ್ಗೆ ವಿಚಾರಣೆ ಮಾಡಬೇಕು" ಎಂದು ನಾನು ಸುಪ್ರೀಂ ಕೋರ್ಟ್‌ಗೆ ವಿನಂತಿಸುತ್ತೇನೆ," ಎಂದು ಅವರು ಹೇಳಿದ್ದಾರೆ.

ಮೂರು ದಿನಗಳ ಧಾರ್ಮಿಕ ಸಭೆ

ಡಿಸೆಂಬರ್ 17 ರಿಂದ ಡಿಸೆಂಬರ್ 19 ರವರೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಮೂರು ದಿನಗಳ "ಧರಮ್ ಸಂಸದ್" ಅಥವಾ ಧಾರ್ಮಿಕ ಸಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಮತ್ತು ಕೋಮುವಾದಿ ಭಾಷಣಗಳನ್ನು ಮಾಡಲಾಗಿದೆ. ಸಭೆಯನ್ನುದ್ದೇಶಿಸಿ ಮಾತನಾಡಿದ ಹಲವಾರು ಹಿಂದೂ ಧಾರ್ಮಿಕ ಮುಖಂಡರು, ಸಮುದಾಯಕ್ಕೆ ಶಸ್ತ್ರಾಸ್ತ್ರಗಳನ್ನು ತೆಗೆದುಕೊಳ್ಳುವಂತೆ ಕರೆ ನೀಡಿದರು. ಮುಸಲ್ಮಾನರ ವಿರುದ್ಧ ಅವರು 'ಹಿಂದೂ ರಾಷ್ಟ್ರ'ದ ಘೋಷಣೆಯನ್ನು ಕೂಗಿದರು. ಸಭೆಯಲ್ಲಿ ಯತಿ ನರಸಿಂಹಾನಂದರು, "ಹಿಂದೂ ಸಮುದಾಯವನ್ನು ಉತ್ತಮ ಶಸ್ತ್ರಾಸ್ತ್ರಗಳೊಂದಿಗೆ ಸಜ್ಜುಗೊಳಿಸುವುದು. ಮುಸ್ಲಿಮರ ಬೆದರಿಕೆ ವಿರುದ್ಧ ಇದು ಪರಿಹಾರ" ಎಂದು ಹೇಳಿದರು.

ಘಟನೆ ಬಳಿ ಮೊದಲನೇ ಎಫ್ಐಆರ್ ದಾಖಲಾಗಿತ್ತು. ಸ್ಥಳೀಯರಾದ ನದೀಮ್ ಆಲಿ ಎಂಬುವರು ಜವಲಾಪುರ್ ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ಎಫ್‍ಐಆರ್ ದಾಖಲಿಸಲಾಗಿದೆ. ಅದರಲ್ಲಿ ಕಾರ್ಯಕ್ರಮ ಆಯೋಜಕರಾದ ಯತಿ ನರಸಿಂಹಾನಂದ ಗಿರಿ, ಹಿಂದೆ ವಸೀಂ ರಿಜ್ವಿ ಆಗಿದ್ದ ಜಿತೇಂದ್ರ ನಾರಾಯಣ್ ತ್ಯಾಗಿ, ಸಿಂಧು ಸಾಗರ್, ಧರ್ಮದಾಸ್, ಪ್ರಮಾನಂದ, ಸಾಧ್ವಿ ಅನುಪೂರ್ಣ, ಆನಂದ್ ಸ್ವರೂಪ್, ಅಶ್ವಿನಿ ಉಪಾಧ್ಯಾಯ, ಸುರೇಶ್ ಚಹ್ವಾಣ್ ಮತ್ತು ಪ್ರಬೋದಾನಂದ ಗಿರಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಧರ್ಮಸಂಸತ್‍ನಲ್ಲಿನ ವಿವಾದಾತ್ಮಕ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರಖಾಂಡ್‍ನ ಬಿಜೆಪಿ ಸರ್ಕಾರದ ಮೇಲೆ ವ್ಯಾಪಕ ಒತ್ತಡ ಕೇಳಿ ಬಂದಿತ್ತು. ಮುಸ್ಲಿಂ ಸಮುದಾಯ ಬೃಹತ್ ಪ್ರತಿಭಟನೆ ನಡೆಸಿತ್ತು. ಅದಕ್ಕಾಗಿ ಎರಡನೇ ಎಫ್‍ಐಆರ್ ದಾಖಲಿಸಲಾಗಿದೆ.

Recommended Video

Ross Taylor ಅವರಿಗೆ ಕಡೇ ಪಂದ್ಯದಲ್ಲಿ ಭಾರೀ ಗೌರವ | Oneindia Kannada

English summary
The Supreme Court has agreed to hear the Dharam Sansad hate speech case where anti-Muslim statements were allegedly delivered at a religious gathering of Hindus in Uttarakhand's Haridwar organised by controversial Hindutva leader Yati Narsinghanand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X