Sunny Leone: ಕಾಣೆಯಾಗಿದ್ದ ಮಗಳ ಬಗ್ಗೆ ನಟಿ 'ಸನ್ನಿ ಲಿಯೋನ್' ಕೃತಜ್ಞತೆ
ಬೆಂಗಳೂರು, ನವೆಂಬರ್ 10: ಬಾಲಿವುಡ್ ನಟಿ ಮತ್ತು ರೂಪದರ್ಶಿ ಸನ್ನಿ ಲಿಯೋನ್ (Sunny Leone) ಅವರು ಮಗಳ ನಾಪತ್ತೆ ಕುರಿತು ಗುರುವಾರ ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್‌ವೊಂದನ್ನು ಹಾಕಿದ್ದರು. ಫೋಟೋ ವೈರಲ್ ಆಗುತ್ತಿದ್ದಂತೆ 24 ಗಂಟೆಯೊಳಗೆ ಅವರು ಖುಷಿ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಕೃತಜ್ಞತೆ ತಿಳಿಸಿದ್ದಾರೆ.
ಗುರುವಾರ ನವೆಂಬರ್ 9 ರಂದು ನಟಿ ಸನ್ನಿ ಲಿಯೋನ್ ತಮ್ಮ ಮನೆಯ ಸಹಾಯಕಿಯ ಒಂಬತ್ತು ವರ್ಷದ ಮಗಳು ಅನುಷ್ಕಾ ಕಿರಣ್ ಮೋರ್ ಮುಂಬೈನ ಜೋಗೇಶ್ವರಿಯಲ್ಲಿ ಕಣ್ಮರೆಯಾಗಿದ್ದಾಳೆ ಎಂದು ಇನ್‌ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದರು. ಕಾಣೆಯಾಗಿರುವ ಮನೆ ಸಹಾಯಕಿಯ ಮಗಳ ಫೋಟೊ ಸೇರಿದಂತೆ ಅಗತ್ಯ ಮಾಹಿತಿಯನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಕಾಣೆಯಾದ ನಮ್ಮ ಮನೆ ಸಹಾಯಕಿಯ ಮಗಳು ಅನುಷ್ಕಾ ಕಿರಣ್ ಮೋರ್ ಎಲ್ಲಿಯಾದರೂ ಕಂಡು ಬಂದರೆ ಅವಳ ಇರುವಿಕೆ ಫೋಟೋ ಇಲ್ಲವೇ ಮಾಹಿತಿ ಹಂಚಿಕೊಂಡರೆ ಅಥವಾ ಮಗಳನ್ನು ಅವರ ಕುಟುಂಬಕ್ಕೆ ಕರೆ ತಂದು ಸೇರಿಸಿದವರಿಗೆ ₹50,000 ರೂಪಾಯಿ ಬಹುಮಾನ ನೀಡುವುದಾಗಿ ತಿಳಿಸಿದ್ದರು.
ಕೆಲವೇ ಗಂಟೆಗಳಲ್ಲಿ ಅನುಷ್ಠಾ ಪತ್ತೆ ಬಗ್ಗೆ ಪೋಸ್ಟ್
ಇದೆಲ್ಲ ಬೆಳವಣಿಗೆ ಆಗಿ 24 ಗಂಟೆಯೊಳಗೆ ನಟಿ ಸನ್ನಿ ಲಿಯೋನ್ ಮನೆ ಸಹಾಯಕಿಯ ಮಗಳನ್ನು ಪೊಲೀಸರು ಪತ್ತೆ ಮಾಡಿ ಕುಟುಂಬಕ್ಕೆ ಒಪ್ಪಿಸಿದ ಘಟನೆ ನಡೆದಿದೆ. ಈ ಸಂಬಂಧ ಸನ್ನಿ ಲಿಯೋನ್ ಅವರು ತುರ್ತಾಗಿ ಸ್ಪಂದಿಸಿ ಮಗಳ ಪತ್ತೆ ಮಾಡಿದ ಮುಂಬೈ ಪೊಲೀಸರಿಗೆ ಮತ್ತವರ ಸಿಬ್ಬಂದಿಗೆ ಧನ್ಯವಾದ ತಿಳಿಸಿದ್ದಾರೆ. ಬಳಿಕ ಮಗಳ ಪತ್ತೆ ಕುರಿತು ಅವರು ಮತ್ತೆ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
ನಮ್ಮ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ
ಪೋಸ್ಟ್‌ನಲ್ಲಿ 'ನಮ್ಮ ಪ್ರಾರ್ಥನೆಗೆ ಉತ್ತರ ಸಿಕ್ಕಿದೆ! ದೇವರು ತುಂಬಾ ದೊಡ್ಡವನು! ದೇವರು ಈ ಕುಟುಂಬವನ್ನು ಆಶೀರ್ವದಿಸಲಿ!... ಮುಂಬೈ ಪೊಲೀಸರಿಗೆ ತುಂಬಾ ಧನ್ಯವಾದಗಳು. ಕಣ್ಮರೆಯಾದ ಮಗಳು ಅನುಷ್ಕಾಳನ್ನು 24 ಗಂಟೆಗಳ ನಂತರ ಮರಳಿ ನೋಡಿದ್ದೇವೆ. ಇದಕ್ಕೆ ಕಾರಣರಾದ ಮುಂಬೈ ಪೊಲೀಸರಿಗೆ ಧನ್ಯವಾದಗಳು.

ಕಾಣೆಯಾದ ಪೋಸ್ಟ್ ಅನ್ನು ಹೆಚ್ಚು ಶೇರ್ ಮಾಡಿ ವೈರಲ್ ಮಾಡಿದವರು ಎಲ್ಲರಿಗೂ ನಾನು ಧನ್ಯವಾದ ತಿಳಿಸುತ್ತೇವೆ ಎಂದು ಅವರು ಬರೆದುಕೊಂಡಿದ್ದಾರೆ. ಪೋಸ್ಟ್‌ನಲ್ಲಿ ಅನುಷ್ಕಾಳನ್ನು ಆಕೆಯ ಪೋಷಕರು ಪ್ರೀತಿಯಿಂದ ಅಪ್ಪಿಕೊಳ್ಳುತ್ತಿರುವ ಚಿತ್ರವನ್ನು ಸಹ ತೋರಿಸಲಾಗಿದೆ.
ಸನ್ನಿ ಲಿಯೋನ್ ಅಭಿಮಾನಿಗಳು ಹಾಗೂ ಇನ್‌ಸ್ಟಾಗ್ರಾಮ್ ಬೆಂಬಲಿಗರು ಅನುಷ್ಠಾ ಪತ್ತೆಹಚ್ಚುವಲ್ಲಿ ನಡೆಸಿದ ಪ್ರಯತ್ನ, ಪೊಲೀಸರ ಕಾರ್ಯವನ್ನು ಸನ್ನಿ ಶ್ಲಾಘಿಸಿದ್ದಾರೆ. ಅಲ್ಲದೇ ನಟಿಯ ಪೋಸ್ಟ್‌ನಲ್ಲಿ ಕಾಮೆಂಟ್‌ಗಳು ಸನ್ನಿ ಲಿಯೋನ್ ಹಾಗೂ ಮುಂಬೈ ಪೊಲೀಸರಿಗೆ ಭಾರಿ ಪ್ರಶಂಸೆ ವ್ಯಕ್ತಪಡಿಸಿ ಕಾಮೆಂಟ್ ಮಾಡಲಾಗಿದೆ.












Click it and Unblock the Notifications