ಸುನಂದಾ ಪುಷ್ಕರ್ ಹತ್ಯೆ: ಎಫ್ ಬಿಐ ನೆರವು ಕೋರಿದ ದೆಹಲಿ ಪೊಲೀಸರು

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 05: ಕಾಂಗ್ರೆಸ್ ಸಂಸದ, ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿನ ಪ್ರಕರಣದ ನಿಗೂಢತೆ ಇನ್ನೂ ಬಯಲಾಗಿಲ್ಲ. ಎರಡು ವರ್ಷ ಕಳೆದರೂ ದೆಹಲಿ ಪೊಲೀಸರಿಗೆ ಸುನಂದಾ ಸಾವನ್ನಪ್ಪಿದ್ದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಈ ಕುರಿತಂತೆ ದೆಹಲಿ ಪೊಲೀಸರು ಈಗ ಅಮೆರಿಕದ ತನಿಖಾ ಸಂಸ್ಥೆ ಎಫ್ ಬಿಐ ನೆರವು ಕೋರಿದ್ದಾರೆ.

ದೆಹಲಿ ಪೊಲೀಸರ ವಿಶೇಷ ತನಿಖಾ ತಂಡದ ಸದಸ್ಯರು ಸುನಂದಾ ಸಾವಿನ ರಹಸ್ಯ ತಿಳಿಯಲು ಫೆಡರಲ್ ಬ್ಯುರೋ ಆಫ್ ಇನ್ವೇಸ್ಟಿಗೇಷನ್ ಸಹಾಯ ಬಯಸಿದ್ದಾರೆ.

ಸುನಂದಾ ಸಾವಿಗೆ ಸಂಬಂಧಿಸಿದಂತೆ ಹಲವು ಅನುಮಾನಗಳು ವ್ಯಕ್ತವಾಗಿತ್ತು. ಮೃತದೇಹದ ಅಂಗಾಂಗ ಮಾದರಿಯನ್ನು ವಿಶೇಷ ವೈಜ್ಞಾನಿಕ ಪರೀಕ್ಷೆಗಾಗಿ ಅಮೆರಿಕದ ಎಫ್​ಬಿಐ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಪರಿಶೀಲನೆ ಬಳಿಕ ಸುನಂದಾ ಪುಷ್ಕರ್ ಅವರು ಪೋಲೋನಿಯಂ ಅಥವಾ ವಿಷ ಕಿರಣಗಳಿಂದ ಸಾವನ್ನಪ್ಪಿಲ್ಲ ಎಂದು ವರದಿ ಬಂದಿತ್ತು.

Sunanda Pushkar Murder : Delhi Police Approaches FBI in US

2015ರಲ್ಲಿ ಎಫ್ ಬಿಐನಿಂದ ಸುನಂದಾ ಅವರ ವಿಸೇರಾ ಸ್ಯಾಂಪಲ್ ಪರೀಕ್ಷೆ ನಡೆಸಲಾಗಿದೆ.ವಿಸೇರಾದಲ್ಲಿ ವಿಷದ ಅಂಶ ಇಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ಈಗ ಯಾವ ಸುಳಿವು ಹಿಡಿದುಕೊಂಡು ಪೊಲೀಸರು ಮತ್ತೆ ತನಿಖೆ ಮುಂದುವರೆಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ.

51 ವರ್ಷ ವಯಸ್ಸಿನ ಸುನಂದಾ ಪುಷ್ಕರ್ ಅವರು ಜನವರಿ 2014 ರಲ್ಲಿ ಹೋಟೆಲ್ ರೂಮೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ಸುನಂದಾ ಸಾವಿಗೆ ವಿಷಪ್ರಾಶನ ಕಾರಣ ಎಂದು ಮೊದಲಿಗೆ ಅನುಮಾನ ವ್ಯಕ್ತವಾಗಿತ್ತು. ಏಮ್ಸ್ ವೈದ್ಯರಿಂದ ಈ ಬಗ್ಗೆ ಪರೀಕ್ಷೆ ಸಾಧ್ಯವಿಲ್ಲದ ಕಾರಣ ಎಫ್ ಬಿಐನ ನೆರವು ಪಡೆಯಲಾಗಿತ್ತು.

ಸುನಂದಾರ ಪತಿ 60 ವರ್ಷ ವಯಸ್ಸಿನ ಶಶಿ ತರೂರ್ ಅವರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ವಿಚಾರಣೆಗೊಳಪಡಿಸಲಾಯಿತು. ಆರೇಳು ಮಂದಿಗೆ ಪಾಲಿಗ್ರಾಫ್ ಟೆಸ್ಟ್ ಕೂಡಾ ನಡೆಯಿತು. ಎರಡು ವರ್ಷ ಕಳೆದರೂ ಸುನಂದಾ ಸತ್ತದ್ದು ಹೇಗೆ ಎಂಬ ಪ್ರಶ್ನೆ ಹಾಗೆ ಉಳಿದಿದೆ. ಹೀಗಾಗಿ ಎಫ್ ಬಿಐ ನೆರವು ಪಡೆದು ಕೇಸ್ ಕ್ಲೋಸ್ ಮಾಡಲು ದೆಹಲಿಯ ವಿಶೇಷ ತನಿಖಾ ತಂಡ ನಿರ್ಧರಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Special Investigation Team of Delhi police has approached the FBI, asking for the exact cause of the death of Sunanda Pushkar, wife of Congress member Shashi Tharoor.
Please Wait while comments are loading...