ನನ್ನನ್ನು ಬೇರೆ ಜೈಲಿಗೆ ವರ್ಗಾಯಿಸಿ: ದೆಹಲಿ ಎಲ್‌ಜಿಗೆ ಪತ್ರ ಬರೆದ ಸುಕೇಶ್ ಚಂದ್ರಶೇಖರ್

ದೆಹಲಿ ನವೆಂಬರ್ 10: ದೆಹಲಿಯ ಎಲ್‌ಜಿ ವಿಕೆ ಸಕ್ಸೇನಾ ಅವರಿಗೆ ಸುಖೇಶ್ ಚಂದ್ರಶೇಖರ್ ಮತ್ತೊಂದು ಪತ್ರ ಬರೆದಿದ್ದಾರೆ. ದೆಹಲಿಯ ಎಲ್‌ಜಿ ವಿಕೆ ಸಕ್ಸೇನಾ ಅವರಿಗೆ ಸುಕೇಶ್ ಚಂದ್ರಶೇಖರ್ ಅವರು ಬರೆದಿರುವ ಐದನೇ ಪತ್ರ ಇದಾಗಿದೆ. ಮಂಡೋಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಅವರು ವಿಕೆ ಸಕ್ಸೇನಾ ಅವರನ್ನು ಮತ್ತು ಅವರ ಪತ್ನಿಯನ್ನು ದೆಹಲಿಯ ಹೊರಗಿನ ಬೇರೆ ಯಾವುದಾದರೂ ಜೈಲಿಗೆ ವರ್ಗಾಯಿಸುವಂತೆ ಒತ್ತಾಯಿಸಿದ್ದಾರೆ.

ಸುಕೇಶ್ ಚಂದ್ರಶೇಖರ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರ ವಿರುದ್ಧದ ದೂರನ್ನು ಹಿಂಪಡೆಯಲು ನಿರಂತರ ಬೆದರಿಕೆ ಮತ್ತು ಒತ್ತಡವನ್ನು ಅನುಭವಿಸುತ್ತಿರುವುದಾಗಿ ಆರೋಪಿಸಿದ್ದಾರೆ. ಸಿಆರ್‌ಪಿಎಫ್ ಸಿಬ್ಬಂದಿ ಜೈಲಿನೊಳಗೆ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಸುಕೇಶ್ ಆರೋಪಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸುಖೇಶ್ ಚಂದ್ರಶೇಖರ್ ಅವರು ದೆಹಲಿಯ ಎಲ್ ಜಿ ವಿಕೆ ಸಕ್ಸೇನಾ ಅವರಿಗೆ 33 ದಿನಗಳಲ್ಲಿ ಐದು ಬಾರಿ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಇತರರ ವಿರುದ್ಧದ ಬೆದರಿಕೆ ಮತ್ತು ಭ್ರಷ್ಟಾಚಾರ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸುಕೇಶ್ ಚಂದ್ರಶೇಖರ್ ಈ ಹಿಂದೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದರು.

ದೆಹಲಿ ಎಲ್‌ಜಿಗೆ ಪತ್ರ ಬರೆದ ಸುಕೇಶ್

ದೆಹಲಿ ಎಲ್‌ಜಿಗೆ ಪತ್ರ ಬರೆದ ಸುಕೇಶ್

ಸುಕೇಶ್ ಚಂದ್ರಶೇಖರ್ ಅವರು ದೂರು ನೀಡಿದಾಗಿನಿಂದ, ಆಪ್ ನಾಯಕ ಸತ್ಯೇಂದ್ರ ಜೈನ್ ಮತ್ತು ಆಗಿನ ಜೈಲು ಡಿಜಿ ಸಂದೀಪ್ ಗೋಯೆಲ್ ಇಲ್ಲಿನ ಆಡಳಿತದ ಮೂಲಕ ಬೆದರಿಕೆ ಹಾಕುತ್ತಿದ್ದಾರೆ ಎಂದು ಸುಕೇಶ್ ಆರೋಪಿಸಿದ್ದಾರೆ. ನವೆಂಬರ್ 04 ರಂದು ಬರೆದ ಪತ್ರದಲ್ಲಿ ಸುಕೇಶ್ ಚಂದ್ರಶೇಖರ್ ಅವರು, "ನನ್ನ ಹಿಂದಿನ ದೂರಿನ ಅರ್ಜಿಯನ್ನು ಮಾಧ್ಯಮಗಳಲ್ಲಿ ಬಿಡುಗಡೆ ಮಾಡಿದ ನಂತರ, ಕಳೆದ ಎರಡು ದಿನಗಳಿಂದ ಸತ್ಯೇಂದ್ರ ಜೈನ್ ಮತ್ತು ಡಿಜಿ ಸಂದೀಪ್ ಗೋಯಲ್ ಅವರು ನನಗೆ ಪಾಠ ಕಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ನಾನು ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ'' ಎಂದು ಸುಕೇಶ್ ಆರೋಪ ಮಾಡಿದ್ದಾರೆ.

ಎಎಪಿ ನಾಯಕ ಸತ್ಯೇಂದ್ರ ಜೈನ್ ಅವರು ಜೈಲಿನಲ್ಲಿ ಭದ್ರತೆಗಾಗಿ 2019 ರಲ್ಲಿ 10 ಕೋಟಿ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಚಂದ್ರಶೇಖರ್ ಕಳೆದ ತಿಂಗಳು ಎಲ್‌ಜಿಗೆ ಪತ್ರ ಬರೆದಿದ್ದರು. ಆದರೆ, ಸುಕೇಶ್ ಚಂದ್ರಶೇಖರ್ ಆರೋಪವನ್ನು ಆಮ್ ಆದ್ಮಿ ಪಕ್ಷ ತಳ್ಳಿ ಹಾಕಿದೆ. ಇದು ಮೋಸಗೊಳಿಸುವ ತಂತ್ರ ಎಂದು ಎಎಪಿ ಹೇಳಿಕೊಂಡಿದೆ.

ಆರೋಪ ಸುಳ್ಳಾದರೆ ಗಲ್ಲಿಗೇರಲು ಸಿದ್ದ ಎಂದ ಸುಕೇಶ್

ಆರೋಪ ಸುಳ್ಳಾದರೆ ಗಲ್ಲಿಗೇರಲು ಸಿದ್ದ ಎಂದ ಸುಕೇಶ್

ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆಯುವ ಮೂಲಕ ಎಎಪಿ ಸಚಿವರ ವಿರುದ್ಧ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ಗಂಭೀರ ಆರೋಪ ಮಾಡುತ್ತಿದ್ದಾರೆ. ಪತ್ರದಲ್ಲಿ ಚಂದ್ರಶೇಖರ್ ಮನಸ್ಸಿನಲ್ಲಿ ತುಂಬಾ ವಿಷಯಗಳಿದ್ದು, ಪ್ರಶ್ನೆಗಳಿಗೆ ಉತ್ತರ ಬಯಸಿರುವುದಾಗಿ ಬರೆದಿದ್ದಾರೆ. ಆದರೆ, ಇಡಿ ಮತ್ತು ಸಿಬಿಐ ವಿಚಾರಣೆ ವೇಳೆ ಯಾಕೆ ಈ ಆರೋಪಗಳನ್ನ ಬಹಿರಂಗಪಡಿಸಲಿಲ್ಲ? ಈಗ ಯಾಕೆ ಬಹಿರಂಗ ಮಾಡುತ್ತಿದ್ದಾನೆ? ಎಂಬುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರದಲ್ಲಿ ಚಂದ್ರಶೇಖರ್, ಜೈಲು ಆಡಳಿತದಿಂದ ನಿರಂತರ ಬೆದರಿಕೆ ಮತ್ತು ಒತ್ತಡ ಹಾಕಲಾಗುತ್ತಿದೆ. ಪಂಜಾಬ್ ಮತ್ತು ಗೋವಾ ಚುನಾವಣೆ ಸಂದರ್ಭದಲ್ಲಿ ಹಣ ನೀಡುವಂತೆ ಸತ್ಯೇಂದರ್ ಜೈನ್ ನನ್ನನ್ನು ಕೇಳಿದ್ದರು. ಹೀಗಾಗಿ ಕಾನೂನಿನಂತೆ ನಡೆಯಲು ನಿರ್ಧರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಈ ಎಲ್ಲಾ ಆರೋಪಗಳು ಸುಳ್ಳಾಗಿದ್ದರೆ ಗಲ್ಲಿಗೇರಲು ಸಿದ್ದ ಎಂದು ಸುಕೇಶ್ ಪತ್ರದಲ್ಲಿ ಬರೆದಿದ್ದಾರೆ.

ಕೇಜ್ರಿವಾಲ್ ಮತ್ತು ಜೈನ್‌ಗೆ ಚಂದ್ರಶೇಖರ್ ಬೆದರಿಕೆ

ಕೇಜ್ರಿವಾಲ್ ಮತ್ತು ಜೈನ್‌ಗೆ ಚಂದ್ರಶೇಖರ್ ಬೆದರಿಕೆ

ಕೇಜ್ರಿವಾಲ್ ಮತ್ತು ಜೈನ್ ಅವರಿಗೆ ಸಂಬಂಧಿಸಿದ ಅತ್ಯಂತ ವೈಯಕ್ತಿಕ ವಿಚಾರಗಳು ನನಗೆ ಗೊತ್ತು ಎಂದು ಬೆದರಿಕೆ ಹಾಕಿರುವ ಚಂದ್ರಶೇಖರ್, ಕೇಜ್ರಿವಾಲ್ ಅಥವಾ ಜೈನ್ ಗೆ ಸಂಬಂಧಿಸಿದ ಅತ್ಯಂತ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಲು ನನಗೆ ಒತ್ತಾಯಿಸಿದರೆ ಅವರು ೯ಕೇಜ್ರಿವಾಲ್ ಮತ್ತು ಜೈನ್) ಯಾವುದೇ ಕಾರಣಕ್ಕೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ನೀಡುವ ವಿವರಗಳು ದೇಶವನ್ನೆ ಅಲುಗಾಡಿಸಲಿವೆ ಎಂದು ಚಂದ್ರಶೇಖರ್ ಪತ್ರದಲ್ಲಿ ಬೆದರಿಕೆ ಹಾಕಿದ್ದಾರೆ.

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರೇ, ನೀವು ಮತ್ತು ನಿಮ್ಮ ಸಹಚರರು ಹೇಳುತ್ತಿರುವಂತೆ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಮುಂದೆ ತಾನು ಪ್ರಸ್ತಾಪಿಸಿರುವ ಯಾವುದೇ ವಿಷಯ ತಪ್ಪು ಎಂದು ಪರಿಗಣಿಸಲ್ಪಟ್ಟಲ್ಲಿ ತಾನು ನೇಣಿಗೇರಲು ಸಿದ್ಧನಿದ್ದೇನೆ. ಆದರೆ, ಒಂದು ವೇಳೆ ದೂರು ಸಾಬೀತಾದರೆ, ನೀವು ರಾಜೀನಾಮೆ ನೀಡುತ್ತೀರಾ? ರಾಜಕೀಯದಿಂದ ನಿವೃತ್ತಿ ಹೊಂದುವಿರಾ ಎಂದು ಕೇಳಿದ್ದಾನೆ.

ಸುಕೇಶ್ ಆರೋಪ ತಳ್ಳಿ ಹಾಕಿದ ಎಎಪಿ

ಸುಕೇಶ್ ಆರೋಪ ತಳ್ಳಿ ಹಾಕಿದ ಎಎಪಿ

ಗೋವಾ ಮತ್ತು ಪಂಜಾಬ್ ಚುನಾವಣೆಗಾಗಿ ಪಕ್ಷಕ್ಕಾಗಿ ಆಮ್ ಆದ್ಮಿ ಪಕ್ಷದ ಸತ್ಯೇಂದರ್ ಜೈನ್ ನನ್ನ ಬಳಿ ಹಣ ಕೇಳಿದರು ಎಂದು ಆರೋಪಿಸಿದ್ದಾನೆ. ಜೈಲಿನ ಸಿಬ್ಬಂದಿ ಮೂಲಕ ನಿರಂತರ ಒತ್ತಡ, ಬೆದರಿಕೆಯಿಂದಾಗಿ ನನ್ನ ಎಲ್ಲವನ್ನು ನಿರ್ಲಕ್ಷಿಸಿ ಮೌನವಾಗಿದ್ದೆ. ಪಂಜಾಬ್ ಮತ್ತು ಗೋವಾ ಚುನಾವಣೆಯ ಸಂದರ್ಭದಲ್ಲಿ ನಾನು ತನಿಖೆಗೆ ಒಳಪಡುತ್ತಿದ್ದರೂ ಧೈರ್ಯದಿಂದ ಹಣ ನೀಡುವಂತೆ ಜೈನ್ ನನ್ನನ್ನು ಕೇಳಿದರು ಎಂದು ಸುಕೇಶ್ ಬರೆದಿದ್ದಾನೆ.

ಸುಳ್ಳು ಎಂಬ ಎಎಪಿ ಆರೋಪವನ್ನು ತಿರಸ್ಕರಿಸಿದ್ದು, ಸುಳ್ಳು ಹೇಳುತ್ತಿದ್ದರೆ ಜೈಲು ಆಡಳಿತ ತನ್ನ ಮೇಲೆ ಏಕೆ ಒತ್ತಡ ಹೇರುತ್ತಿದೆ ಅಥವಾ ಹಿಂದಿನ ದೂರನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದೆ ಎಂದು ಸುಕೇಶ್ ಚಂದ್ರಶೇಖರ್ ಪ್ರಶ್ನಿಸಿದ್ದಾನೆ. ದೆಹಲಿ ಎಂಸಿಡಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರವಾಗಿ ಪಕ್ಷ ಹಾಗೂ ನಾಯಕರ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಎಂಬ ಆರೋಪವನ್ನು ಚಂದ್ರಶೇಖರ್ ತಿರಸ್ಕರಿಸಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+