1200 ರೂ. ಹೂಡಿಕೆ ಮಾಡಿದರೆ ಸಾಕು, ಸಿಗುವುದು 4.74 ಲಕ್ಷ ಬಡ್ಡಿ:ಹೆಣ್ಣು ಮಕ್ಕಳಿಗಾಗಿ ಸರ್ಕಾರದ ಅದ್ಬುತ ಯೋಜನೆ
ಮಕ್ಕಳ ಊತ್ತಮ ಭವಿಷ್ಯಕ್ಕಾಗಿ ಹಣ ಕೂಡಿಡುವುದು ತಂದೆ ತಾಯಿಯ ಜವಾಬ್ದಾರಿ. ಮಕ್ಕಳ ಭವಿಷ್ಯಕ್ಕೆ ಹಣ ಕೂಡಿಡುವುದು ಎಂದರೆ ದೊಡ್ಡ ಮೊತ್ತದ ಹಣವನ್ನೇ ಹೂಡಿಕೆ ಮಾಡಬೇಕು ಎಂದು ಅನೇಕ ಮಂದಿ ಭಾವಿಸುತ್ತಾರೆ. ಆದರೆ ಅದು ನಿಜ ಅಲ್ಲ. ಮಕ್ಕಳಿಗಾಗಿ ಅನೇಕ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿ ಸರಿಯಾದ ಸ್ಕೀಮ್ ಅನ್ನು ಆಯ್ಕೆ ಮಾಡಿಕೊಂಡರೆ ಮಕ್ಕಳ ಭವಿಷ್ಯನ್ನು ಭದ್ರವಾಗಿಸಬಹುದು. ಅದರಲ್ಲಿಯೂ ಸರ್ಕಾರ ಹೆಣ್ಣು ಮಕ್ಕಳಿಗಾಗಿ ಒಂದು ಯೋಜನೆ ನಡೆಸುತ್ತಿದೆ. ಇದರಲ್ಲಿ ಹೂಡಿಕೆ ಮಾಡಲು ದೊಡ್ಡ ಮೊತ್ತದ ಹಣದ ಅಗತ್ಯವಿಲ್ಲ. ಪ್ರತಿ ತಿಂಗಳು ಕೇವಲ 1,200 ರೂಪಾಯಿ ಹೂಡಿಕೆ ಮಾಡಿದರೂ ಸಾಕು.
ಪ್ರತಿ ತಿಂಗಳು 1,200 ರೂಪಾಯಿ ಹೂಡಿಕೆ ಮಾಡುತ್ತಾ ಬಂದರೆ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಕ್ರಮೇಣ ದೊಡ್ಡ ಮೊತ್ತದ ಹಣ ಸಂಗ್ರಹವಾಗುತ್ತದೆ. ಪ್ರತಿ ತಿಂಗಳು 1,200 ರೂಪಾಯಿ ಹೂಡಿಕೆ ಅಂದರೆ ವರ್ಷಕ್ಕೆ 14,400 ರೂ. ಆಗುತ್ತದೆ. 15 ವರ್ಷಗಳವರೆಗೆ ನಿರಂತರವಾಗಿ ಈ ರೀತಿ ಹೂಡಿಕೆ ಮಾಡುತ್ತಾ ಬಂದರೆ, ಒಟ್ಟು 2,16,000 ರೂ. ಆಗುತ್ತದೆ. ಇದಾದ ನಂತರ 21 ವರ್ಷಗಳ ಅವಧಿ ಮುಗಿಯುವವರೆಗೆ ಯಾವುದೇ ಹೊಸ ಠೇವಣಿಗಳನ್ನು ಮಾಡುವ ಅಗತ್ಯವಿರುವುದಿಲ್ಲ. ಬಡ್ಡಿ ಖಾತೆಗೆ ಸೇರುತ್ತಲೇ ಇರುತ್ತದೆ.

ಈ ಯೋಜನೆಯಲ್ಲಿ ವಾರ್ಷಿಕ 8.2% ಬಡ್ಡಿದರವನ್ನು ಸ್ಥಿರವಾಗಿ ಲೆಕ್ಕ ಹಾಕಿದರೂ ತಿಂಗಳಿಗೆ 1,200 ಉಳಿಸುವುದರಿಂದ ಸುಮಾರು 6.90 ಲಕ್ಷ ನಿಧಿ ಸಂಗ್ರಹವಾಗುತ್ತದೆ. ಇದರಲ್ಲಿ, 4.74 ಲಕ್ಷವನ್ನು ಬಡ್ಡಿಯಿಂದಲೇ ಸಂಪಾದಿಸಬಹುದು. ಸರ್ಕಾರವು SSY ಬಡ್ಡಿದರವನ್ನು ಕಾಲಕಾಲಕ್ಕೆ ಬದಲಾಯಿಸಬಹುದು ಎನ್ನುವುದನ್ನು ಇಲ್ಲಿ ನೆನಪಿನಲ್ಲಿಡುವುದು ಮುಖ್ಯ.ಹಾಗಾಗಿ ಸಂಗ್ರಹವಾಗುವ ಮೊತ್ತವು ಬದಲಾಗಲೂಬಹುದು.
ನೀವು ಪ್ರತಿ ತಿಂಗಳು ₹1,200 ಠೇವಣಿ ಇಟ್ಟರೆ
* ಮಾಸಿಕ ಹೂಡಿಕೆ: ₹1,200
* ವಾರ್ಷಿಕ ಹೂಡಿಕೆ: ₹14,400
* 15 ವರ್ಷಗಳಲ್ಲಿ ಒಟ್ಟು ಹೂಡಿಕೆ: ₹2,16,000
* ಅಂದಾಜು ಬಡ್ಡಿ: ಸುಮಾರು ₹4,74,000
* 21 ವರ್ಷಗಳ ನಂತರ ಅಂದಾಜು ನಿಧಿಗಳು: ಸುಮಾರು ₹6,90,000
* ಈ ಅಂದಾಜು ಲೆಕ್ಕಾಚಾರ ಮಾಸಿಕ ಹೂಡಿಕೆ ಮತ್ತು 8.2% ರ ಅದೇ ಬಡ್ಡಿದರವನ್ನು ಆಧರಿಸಿದೆ.
15 ವರ್ಷಗಳವರೆಗೆ ಮಾತ್ರ ಠೇವಣಿ
SSYನಲ್ಲಿ, 21 ವರ್ಷಗಳವರೆಗೆ ಮಾಸಿಕ ಠೇವಣಿಗಳನ್ನು ಮಾಡಬೇಕಾಗಿಲ್ಲ. ಇಲ್ಲಿ 15 ವರ್ಷಗಳವರೆಗೆ ತಿಂಗಳಿಗೆ 1,200 ಠೇವಣಿ ಇಡುತ್ತಾ ಬರಬೇಕು. ನಂತರ, ಮುಂದಿನ ಆರು ವರ್ಷಗಳವರೆಗೆ ನೀವು ಯಾವುದೇ ಹೊಸ ಹೂಡಿಕೆಗಳನ್ನು ಮಾಡಬೇಕಾಗಿಲ್ಲ. ಆದರೆ ಖಾತೆಗೆ ಬಡ್ಡಿಯ ಹಣ ಬೀಳುತ್ತಲೇ ಇರುತ್ತದೆ. ಇದು ದೀರ್ಘಾವಧಿಯ ಲಾಭ. ಇಲ್ಲಿ ಆರಂಭಿಕ ಮೊತ್ತವು ಚಿಕ್ಕದಾಗಿ ಕಾಣಿಸಬಹುದು. ಆದರೆ ಕಾಲ ಕಳೆದಂತೆ ಬಡ್ಡಿಯ ಮೇಲಿನ ಬಡ್ಡಿ ಸಂಗ್ರಹವಾಗುತ್ತಿದ್ದ ಹಾಗೆ ನಿಧಿ ಬೆಳೆಯುತ್ತಲೇ ಹೋಗುವುದು.
6.90 ಲಕ್ಷ ನಿಧಿ ಸಂಗ್ರಹವಾಗುವುದು ಹೇಗೆ ?
ನಿಮ್ಮ ಮಗಳು ಜನಿಸಿದ ಸಮಯದಲ್ಲಿ ನೀವು SSY ಖಾತೆಯನ್ನು ತೆರೆದು ಪ್ರತಿ ತಿಂಗಳು 1,200 ಠೇವಣಿ ಇಡಲು ಪ್ರಾರಂಭಿಸಿದರೆ 15 ವರ್ಷಗಳಲ್ಲಿ ಒಟ್ಟು ಹೂಡಿಕೆ 2.16 ಲಕ್ಷ ಆಗುತ್ತದೆ. ನಂತರ, ಠೇವಣಿ ಇಡುವುದನ್ನು ನಿಲ್ಲಿಸುತ್ತೀರಿ. ಬಡ್ಡಿದರವು 8.2% ನಲ್ಲಿ ಮುಂದುವರಿದರೆ, 21 ವರ್ಷಗಳ ಅವಧಿಯ ಕೊನೆಯಲ್ಲಿ ಅಂದಾಜು 6.90 ಲಕ್ಷ ಸಂಗ್ರಹವಾಗಿರುತ್ತದೆ. ಇದರರ್ಥ ನೀವು ಠೇವಣಿ ಇಟ್ಟ ಮೊತ್ತಕ್ಕಿಂತ ಸುಮಾರು 4.74 ಲಕ್ಷ ಹೆಚ್ಚುವರಿ ಬಡ್ಡಿ ಸಿಗುತ್ತದೆ.
SSY ಖಾತೆಯನ್ನು ಯಾರು ತೆರೆಯಬಹುದು?
ಸುಕನ್ಯಾ ಸಮೃದ್ಧಿ ಖಾತೆಯನ್ನು ಪೋಷಕರು ಅಥವಾ ಕಾನೂನುಬದ್ಧ ಪೋಷಕರು 10 ವರ್ಷದೊಳಗಿನ ಹೆಣ್ಣು ಮಕ್ಕಳ ಹೆಸರಿನಲ್ಲಿ ತೆರೆಯಬಹುದು. ಕನಿಷ್ಠ ವಾರ್ಷಿಕ ಠೇವಣಿ 250 ಮತ್ತು ಗರಿಷ್ಠ 1.50 ಲಕ್ಷ ಹೂಡಿಕೆ ಮಾಡಬಹುದು.
ಅಗತ್ಯವಿದ್ದಾಗ ಹಣವನ್ನು ಹಿಂಪಡೆಯಲು ನಿಯಮವೂ ಇದೆ
ಈ ಯೋಜನೆಯಲ್ಲಿ ಮಾಡಿರುವ ಎಲ್ಲಾ ಹೂಡಿಕೆಯನ್ನು ಹಿಂಪಡೆಯುವ ಅವಕಾಶ ಇರುವುದಿಲ್ಲ. ನಿಯಮಗಳ ಪ್ರಕಾರ, ಮಗಳಿಗೆ 18 ವರ್ಷ ತುಂಬಿದ ನಂತರ ಉನ್ನತ ಶಿಕ್ಷಣಕ್ಕಾಗಿ ಭಾಗಶಃ ಹಣವನ್ನು ಹಿಂದಕ್ಕೆ ಪಡೆಯಬಹುದು. ಯೋಜನೆಯ ನಿಗದಿತ ಅವಧಿ ಪೂರ್ಣಗೊಂಡ ನಂತರ ಪೂರ್ಣ ಮೊತ್ತವನ್ನು ನೀಡಲಾಗುತ್ತದೆ. ಸಣ್ಣ ಉಳಿತಾಯ, ದೀರ್ಘಾವಧಿಯ ಉಳಿತಾಯ ಮತ್ತು ಸಂಯೋಜಿತ ಹಣವನ್ನು ಬಳಸಿಕೊಳ್ಳುವ ಮೂಲಕ, ಮಗಳ ಭವಿಷ್ಯಕ್ಕಾಗಿ ತಿಂಗಳಿಗೆ ಕೇವಲ 1,200 ರೂ.ಯೊಂದಿಗೆ ಸುಮಾರು 6.90 ಲಕ್ಷದ ಅಂದಾಜು ನಿಧಿಯನ್ನು ರಚಿಸಬಹುದು.


Click it and Unblock the Notifications
