Success Story: ಓದಿದ್ದು ಬರೀ 8 ನೇ ಕ್ಲಾಸ್‌, ಈಗ ಎಣ್ಣೆ ಗಿರಣಿಯ ಮಾಲೀಕ : ಹಾಕಿರುವ ಬಂಡವಾಳ ಒಂದು ಲಕ್ಷ ಮಾತ್ರ

Success Story : ಬ್ಯುಸ್‌ನೆಸ್‌ ಮಾಡಬೇಕು ಹಣ ಸಂಪಾದಿಸಬೇಕು ಎನ್ನುವುದು ಬಹಳಷ್ಟು ಜನರ ಮನದ ಆಸೆಯಾಗಿರುತ್ತದೆ. ಆದರೆ ಬ್ಯುಸ್‌ನೆಸ್‌ ಮಾಡುವುದಕ್ಕೆ ಹಣ ಬೇಕು. ಆರಂಭದಲ್ಲಿ ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಧೈರ್ಯ ಯಾರಿಗೂ ಇರುವುದಿಲ್ಲ. ಹಾಗಾಗಿ ಸಣ್ಣ ಮೊತ್ತದ ಹೂಡಿಕೆ ಮಾಡಿ ದೊಡ್ಡ ಮಟ್ಟದ ಲಾಭ ಗಳಿಸುವತ್ತ ಗಮನ ಹರಿಸಬೇಕಾಗುತ್ತದೆ. ಆದರೆ, ಯಾವ ವ್ಯವಹಾರ ಆರಂಭಿಸಬೇಕು ಎನ್ನುವ ಜ್ಞಾನ ಇರಬೇಕಾಗುತ್ತದೆ. ನಿಮ್ಮದೇ ಊರಿನಲ್ಲಿ ಅಥವಾ ಇರುವ ಸಣ್ಣ ಜಾಗದಲ್ಲಿ ಕಡಿಮೆ ವೆಚ್ಚದ ವ್ಯವಹಾರ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಸಾಸಿವೆ ಎಣ್ಣೆ ವ್ಯಾಪಾರವು ಉತ್ತಮ ಆಯ್ಕೆಯಾಗಿದೆ.

1 ಲಕ್ಷ ರೂ.ಯಲ್ಲಿ ಆರಂಭವಾದ ವ್ಯವಹಾರ

ಉತ್ತರ ಪ್ರದೇಶದ ಗೊಂಡಾದ ಕೇಶವ್ ರಾಮ್ ಎನ್ನುವವರು ಸುಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಬ್ಯುಸಿನೆಸ್‌ ಆರಂಭಿಸಿದ್ದಾರೆ. ಒಂದು ಲಕ್ಷ ರೂ. ಖರ್ಚು ಮಾಡಿ ಸಾಸಿವೆ ಪುಡಿ ಮಾಡುವ ಯಂತ್ರವನ್ನು ಖರೀದಿಸಿ ತಂದು ಈ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ. ಆರಂಭದಲ್ಲಿ ರೈತರಿಗೆ ಸಾಸಿವೆ ಪುಡಿ ಮಾಡಿ ಕೊಡುವ ಕೆಲಸ ಮಾಡುತ್ತಿದ್ದ ಕೇಶವ್ ರಾಮ್ ನಂತರ ಸ್ವತಃ ಎಣ್ಣೆಯನ್ನು ತೆಗೆದು ಮಾರಾಟ ಮಾಡುವ ಕೆಲಸಕ್ಕೆ ಕೈ ಹಾಕುತ್ತಾರೆ. ಒಂದು ಲಕ್ಷ ರೂ. ಖರ್ಚು ಮಾಡುವ ಮೂಲಕ ಪ್ರತಿ ತಿಂಗಳಿಗೆ 30,000 ರಿಂದ 40,000 ರೂಪಾಯಿಗಳನ್ನು ಗಳಿಸುತ್ತಾರೆ.

Success Story Mustard Oil Business By Investing Just One Lakh Rupee Success Story Of 8th Pass Man Of Uttar Pradesh

ತಿಂಗಳಿಗೆ 30,000 ರಿಂದ 40,000 ರೂ ಆದಾಯ

ಗೊಂಡಾ ಜಿಲ್ಲೆಯ ಮಂಕಾಪುರದ ಅಭಿವೃದ್ಧಿ ವಿಭಾಗದ ಕೇಶವ್ ರಾಮ್, ಸಾಸಿವೆ ಬೀಜಗಳನ್ನು ಪುಡಿಮಾಡಿ ಶುದ್ಧ ಸಾಸಿವೆ ಎಣ್ಣೆಯನ್ನು ತೆಗೆಯುವ ತಮಗೊಂದು ಹೊಸ ಐಡೆಂಟಿ ತಂದುಕೊಂಡಿದ್ದಾರೆ. ಎಣ್ಣೆ ಗಿರಣಿಯನ್ನು ನಡೆಸುವ ಮೂಲಕ ಅವರು ತಿಂಗಳಿಗೆ 30,000 ರಿಂದ 40,000 ರೂಪಾಯಿಗಳ ಆದಾಯವನ್ನು ಗಳಿಸುತ್ತಿದ್ದಾರೆ. ಅವರ ಈ ವ್ಯವಹಾರಕ್ಕೆ ಸುತ್ತಮುತ್ತಲಿನ ಜನರ ಬೆಂಬಲವೂ ಸಿಕ್ಕಿದೆ.

ಶುದ್ಧ ಸಾಸಿವೆ ಎಣ್ಣೆ ಮಾರಾಟ

ಈ ಬಗ್ಗೆ ಮಾತನಾಡಿದ ಕೇಶವ್ ರಾಮ್, ಸುಮಾರು 1 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾಸಿವೆ ಪುಡಿ ಮಾಡುವ ಯಂತ್ರವನ್ನು ತಂದಿರುವುದಾಗಿ ಹೇಳಿದ್ದಾರೆ. ಮೊದಲು ವ್ಯವಹಾರ ಹೇಗೆ ಮುಂದುವರಿಯುತ್ತದೆ ಎನ್ನುವ ಐಡಿಯಾ ಇರಲಿಲ್ಲ. ಹಾಗಾಗಿ ರೈತರಿಗೆ ಮಾತ್ರ ಸಾಸಿವೆ ಪುಡಿ ಮಾಡಿ ಕೊಡುತ್ತಿದ್ದರು. ನಂತರ, ಅವರು ಸ್ವತಃ ಸಾಸಿವೆ ಖರೀದಿಸುವುದಕ್ಕೆ ಶುರು ಮಾಡುತ್ತಾರೆ. ಸಾಸಿವೆಯನ್ನು ಸ್ವಚ್ಛಗೊಳಿಸಿ ಶುದ್ಧ ಸಾಸಿವೆ ಎಣ್ಣೆಯನ್ನು ತೆಗೆದು ಮಾರಾಟ ಮಾಡುವುದಕ್ಕೆ ಶುರು ಮಾಡುತ್ತಾರೆ. ಕ್ರಮೇಣ, ಇವರ ಮೇಲೆ ಗ್ರಾಹಕರ ನಂಬಿಕೆ ಬೆಳೆಯುತ್ತಾ ಹೋಯಿತು. ಹೀಗಾಗಿ ಕೇಶವ್‌ ರಾಮ್‌ ವ್ಯವಹಾರವು ಬೆಳೆಯುತ್ತಾ ಹೋಯಿತು.

ಓದಿರುವುದು ಕೇವಲ ಎಂಟನೇ ಕ್ಲಾಸ್‌

ಕೇಶವ್ ರಾಮ್ ಹೇಳುವಂತೆ, ಕೇಶವ್‌ ರಾಮ್‌ ಓದಿರುವುದು ಬರೀ ಎಂಟನೇ ತರಗತಿಯವರೆಗೆ ಮಾತ್ರ. ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಹಣದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತದೆ. ಹಾಗಾಗಿ ಶಾಲೆಯನ್ನು ಅರ್ಧಕ್ಕೆ ಬಿಡಬೇಕಾಗಿ ಬರುತ್ತದೆ. ನಂತರ ಅವರು ಕೃಷಿ ಮತ್ತು ಸಣ್ಣ ಪ್ರಮಾಣದ ವ್ಯಾಪಾರೋದ್ಯಮಗಳನ್ನು ಪ್ರಾರಂಭಿಸುತ್ತಾರೆ. ಕ್ರಮೇಣ, ಈ ಚಟುವಟಿಕೆಗಳು ಅವರ ಪ್ರಾಥಮಿಕ ಆದಾಯದ ಮೂಲವಾಯಿತು.

ಎಣ್ಣೆಗಿದೆ ಭಾರೀ ಬೇಡಿಕೆ

ಕೇಶವ್ ರಾಮ್ ಈ ಎಣ್ಣೆಯನ್ನು ಕೃಷ್ಣ ಕಚಿ ಘನಿ ಪ್ಯೂರ್ ಸರ್ಸೊಂಕಾ ತೇಲ್‌ ಎನ್ನುವ ತಮ್ಮ ಬ್ರಾಂಡ್ ಹೆಸರಿನಲ್ಲಿ ಮಾರಾಟ ಮಾಡುತ್ತಾರೆ. ಜನರು ಶುದ್ಧ, ಕಲಬೆರಕೆಯಿಲ್ಲದ ಎಣ್ಣೆಯನ್ನು ಇಷ್ಟಪಡುತ್ತಿದ್ದಾರೆ. ಅದಕ್ಕಾಗಿಯೇ ಅವರ ಎಣ್ಣೆಯ ಬೇಡಿಕೆ ನಿರಂತರವಾಗಿ ಹೆಚ್ಚುತ್ತಿದೆ. ಅವರು ಎಣ್ಣೆಯನ್ನು ಬಾಟಲಿಗಳು ಮತ್ತು ಡಬ್ಬಿಗಳಲ್ಲಿ ಪ್ಯಾಕ್ ಮಾಡಿ ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ.

Success Story: ಎಲ್ಲದರಲ್ಲೂ ಲಾಭ

ಸಾಸಿವೆ ಬೀಜಗಳನ್ನು ಪುಡಿಮಾಡಿ ತಯಾರಿಸಿದ ಎಣ್ಣೆ ಹಿಂಡಿಯನ್ನು ಪಶು ಆಹಾರವಾಗಿ ಮಾರಾಟ ಮಾಡಲಾಗುತ್ತದೆ. ಇದು ಎಣ್ಣೆಯ ಜೊತೆಗೆ ಹೆಚ್ಚುವರಿ ಆದಾಯವನ್ನು ಗಳಿಸುವುದಕ್ಕೂ ಸಹಾಯ ಮಾಡುತ್ತದೆ. ಹಾಗಾಗಿ ಸಾಸಿವೆ ಎಣ್ಣೆ ತಯಾರಿಸುವಾಗ ಉಳಿಯುವ ಹಿಂಡಿಯೂ ವ್ಯರ್ಥವಾಗುವುದಿಲ್ಲ.

Success Story:ಮಾರುಕಟ್ಟೆಯಲ್ಲಿಯೂ ಉತ್ತಮ ಪ್ರತಿಕ್ರಿಯೆ

ಇನ್ನು ಕೇಶವ್‌ ಅವರ ಗ್ರಾಹಕ ಅಯೋಧ್ಯಾ ಪ್ರಸಾದ್ ಮಿಶ್ರಾ ಅವರು ಕಳೆದ ಮೂರು ವರ್ಷಗಳಿಂದ ಕೇಶವ್ ರಾಮ್ ಅವರಿಂದ ಸಾಸಿವೆ ಎಣ್ಣೆಯನ್ನು ಖರೀದಿಸುತ್ತಿದ್ದಾರೆ. ಈ ಎಣ್ಣೆ ಶುದ್ಧವಾಗಿದ್ದು, ಮನೆಯಲ್ಲಿ ತಯಾರಿಸಿದಂತೆಯೇ ರುಚಿಕರವಾಗಿದೆ ಎನ್ನುವುದು ಅವರ ಅಭಿಪ್ರಾಯ. ವಿಜಯ್ ಕುಮಾರ್ ಮಿಶ್ರಾ ಅವರು ಈ ಹಿಂದೆ ಇತರ ಕಂಪನಿಗಳ ಎಣ್ಣೆಯನ್ನು ಬಳಸುತ್ತಿದ್ದರಂತೆ. ಆದರೆ ಈಗ ಈ ಎಣ್ಣೆಯ ಗುಣಮಟ್ಟ ಉತ್ತಮವಾಗಿದೆ ಎನ್ನುವುದು ಅವರ ಮಾತು.

ಕೇಶವ್ ರಾಮ್ ಅವರು ಪ್ರಸ್ತುತ ತಿಂಗಳಿಗೆ 30,000 ರಿಂದ 40,000 ರೂಪಾಯಿಗಳನ್ನು ಗಳಿಸುತ್ತಿದ್ದಾರೆ. ಶುದ್ಧ ಸಾಸಿವೆ ಎಣ್ಣೆ ಹೆಚ್ಚಿನ ಜನರನ್ನು ತಲುಪಲು ಮತ್ತು ಗ್ರಾಮದಲ್ಲಿ ಉದ್ಯೋಗಾವಕಾಶಗಳು ಹೆಚ್ಚಾಗಲು ತಮ್ಮ ಬ್ರ್ಯಾಂಡ್ ಅನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಿಸುವುದು ಅವರ ಕನಸಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+