ಸಬ್ಸಿಡಿವುಳ್ಳ ಅಡುಗೆ ಅನಿಲ ಸಿಲಿಂಡರ್ ದರ ಹೆಚ್ಚಳ

Posted By:
Subscribe to Oneindia Kannada

ನವದೆಹಲಿ, ಸೆಪ್ಟೆಂಬರ್ 01: ಸಬ್ಸಿಡಿವುಳ್ಳ ಅಡುಗೆ ಅನಿಲ(ಎಲ್ ಪಿಜಿ) ಸಿಲಿಂಡರ್ ಬೆಲೆಯನ್ನು ಗುರುವಾರ(ಸೆಪ್ಟೆಂಬರ್ 01) ಏರಿಕೆ ಮಾಡಲಾಗಿದೆ. ಪ್ರತಿ ಸಿಲಿಂಡರ್ ಮೇಲಿನ ದರ 2 ರು ಹೆಚ್ಚಳವಾಗಿದೆ. ಜುಲೈ ತಿಂಗಳಿನಿಂದ ಇಲ್ಲಿ ತನಕ ಇದು ಮೂರನೇ ಬಾರಿಗೆ ಏರಿಕೆಯಾಗಿದೆ. ಜೆಟ್ ಇಂಧನ ದರ ಶೇ 3.8ರಷ್ಟು ಕಡಿತಗೊಳಿಸಲಾಗಿದೆ.

ಸಬ್ಸಿಡಿವುಳ್ಳ 14.2 ಕೆಜಿ ಸಿಲಿಂಡರ್ ದರ ದೆಹಲಿಯಲ್ಲಿ 423.09ರು ಬದಲಿಗೆ 425.06 ರು ಆಗಲಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಘೋಷಿಸಿವೆ.

ಈ ಹಿಂದಿನ ಬೆಲೆ ಏರಿಕೆ ಇಳಿಕೆ: ಸಬ್ಸಿಡಿ ಸಹಿತ ಎಲ್ ಪಿಜಿ ಪ್ರತಿ ಸಿಲಿಂಡರ್ ಬೆಲೆ 1.93 ರು ಏರಿಕೆ ಕಂಡಿದೆ. 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 423.09 ರು ನಷ್ಟಿತ್ತು. ಈ ಮುಂಚೆ 421.16 ರು ಇತ್ತು. ಜುಲೈ 1 ರಂದು ಎಲ್ ಪಿಜಿ ಸಿಲಿಂಡರ್ ಬೆಲೆ 1.98 ರು ಏರಿಕೆ ಕಂಡಿತ್ತು.

Subsidised LPG rate hiked by Rs2 per cylinder


ಈ ನಡುವೆ ಸಬ್ಸಿಡಿ ರಹಿತ ಎಲ್ ಪಿಜಿ ಬೆಲೆಯಲ್ಲಿ 20.5 ರು ಕಡಿತಗೊಂಡ್ದ್ದು, ದೆಹಲಿಯಲ್ಲಿ 466.50 ರು ಗೆ ಸಿಲಿಂಡರ್ ಸಿಗಲಿದೆ. ಇದಕ್ಕೂ ಮುನ್ನ ವಾರ್ಷಿಕ 12 ಸಿಲಿಂಡರ್ ಕೋಟಾ ನಂತರ ಪಡೆಯುವ 14.2ಕೆ.ಜಿ ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ-ಪ್ರತಿ ಸಿಲಿಂಡರ್ ಮೇಲೆ 50.5 ರು ಕಡಿತಗೊಳಿಸಲಾಗಿತ್ತು. [ಪ್ರಧಾನ ಮಂತ್ರಿ "ಉಜ್ವಲ" ಯೋಜನೆ ಎಂದರೇನು?]

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನದಂದು ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The price of subsidised cooking gas (LPG) was on Thursday hiked by about Rs2 per cylinder, third increase since July, while the jet fuel price was cut by 3.8%.. A subsidised 14.2-kg LPG cylinder will now cost Rs425.06 in Delhi as against Rs423.09 previously
Please Wait while comments are loading...