ಹೊಸ ವರ್ಷಕ್ಕೆ ಕೇಂದ್ರ ಸರ್ಕಾರದ ಕೊಡುಗೆ: ಎಲ್ ಪಿಜಿ ದರ ಇಳಿಕೆ
ನವದೆಹಲಿ, ಡಿಸೆಂಬರ್ 31: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿರುವ ದೇಶಕ್ಕೆ ಕೇಂದ್ರ ಸರ್ಕಾರ ಸಂತಸದ ಸುದ್ದಿ ನೀಡಿದೆ.
ಅಡುಗೆ ಅನಿಲ (ಎಲ್ ಪಿಜಿ) ದರದಲ್ಲಿ 5.91 ರೂ ಇಳಿಕೆ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಹೇಳಿಕೆ ತಿಳಿಸಿದೆ.
ಸಬ್ಸಿಡಿ ಸಹಿತ ಎಲ್ ಪಿಜಿ ದರದಲ್ಲಿ 5.91 ರೂ ಇಳಿಕೆಯಾಗಿದೆ. ಸಬ್ಸಿಡಿ ರಹಿತ ಅಡುಗೆ ಅನಿಲದ ದರ 120.50 ರೂ. ನಷ್ಟು ಇಳಿಕೆ ಮಾಡಲಾಗಿದೆ.

14.2 ಕೆಜಿ ತೂಕದ ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ರಾಷ್ಟ್ರ ರಾಜಧಾನಿಯಲ್ಲಿ ಈಗ 500.90 ರೂ. ಇದ್ದು, ಇಂದು ಮಧ್ಯರಾತ್ರಿಯಿಂದ 494.99 ರೂ. ಆಗಲಿದೆ.
ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾದ ಕಾರಣ ಡಿ.1ರಿಂದ ತೆರಿಗೆ ಹಣದಲ್ಲಾದ ಬದಲಾವಣೆಯಿಂದ ಉಂಟಾದ ಪರಿಣಾಮದಿಂದಾಗಿ ಈ ತಿಂಗಳಲ್ಲಿ ಇದು ಎರಡನೆಯ ದರ ಇಳಿಕೆಯಾಗಿದೆ. ಡಿ. 1ರಂದು ಎಲ್ ಪಿಜಿ ದರ ಸಿಲಿಂಡರ್‌ಗೆ 6.52 ರೂ, ಇಳಿಕೆಯಾಗಿತ್ತು.
ಜೂನ್ ತಿಂಗಳಿನಿಂದ ಡಿಸೆಂಬರ್‌ವರೆಗೂ ಸತತ ಆರು ಬಾರಿ ದರ ಏರಿಕೆಯಾಗಿತ್ತು. ಇದರಿಂದ ಗ್ರಾಹಕರು ಕಂಗಾಲಾಗಿದ್ದರು. ಈಗ ಬೆಲೆ ಇಳಿಕೆಯಿಂದ ತುಸು ನೆಮ್ಮದಿ ದೊರೆತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್ ಪಿಜಿ ದರ ಕುಸಿತದಿಂದ ಅಮೆರಿಕನ್ ಡಾಲರ್ ಎದುರು ರೂಪಾಯಿ ವಿನಿಮಯ ದರ ಬಲಗೊಂಡ ಕಾರಣ ಎಲ್ ಪಿಜಿ ದರ ಇಳಿಕೆಯಾಗಿದೆ ಎಂದು ಐಓಸಿ ತಿಳಿಸಿದೆ.
ಡಿಸೆಂಬರ್ 1ರಂದು ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 133 ರೂ.ನಷ್ಟು ಇಳಿಕೆಯಾಗಿತ್ತು. ದೆಹಲಿಯಲ್ಲಿ ಇದರ ಬೆಲೆ ಪ್ರತಿ ಸಿಲಿಂಡರ್‌ಗೆ 689 ರೂ. ಇರಲಿದೆ.
ಎಲ್ಲ ಎಲ್ ಪಿಜಿ ಗ್ರಾಹಕರೂ ಮಾರುಕಟ್ಟೆ ಬೆಲೆಯಲ್ಲಿ ಅನಿಲ ಖರೀದಿ ಮಾಡಬೇಕಿದೆ. ವರ್ಷಕ್ಕೆ 14.2 ಕೆಜಿ ತೂಕದ 12 ಸಿಲಿಂಡರ್‌ಗಳಿಗೆ ಸರ್ಕಾರ ಸಬ್ಸಿಡಿ ಒದಗಿಸುತ್ತಿದ್ದು, ಅದು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆಯಾಗುತ್ತಿದೆ.
ಜನವರಿಯಿಂದ ಗ್ರಾಹಕರು ಪ್ರತಿ ಸಿಲಿಂಡರ್‌ಗೆ 194.01 ರೂಪಾಯಿ ಸಬ್ಸಿಡಿಯನ್ನು ಖಾತೆಗೆ ಪಡೆದುಕೊಳ್ಳಲಿದ್ದಾರೆ.
-
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Rain: ಕರ್ನಾಟಕದ ಕಾಶ್ಮೀರವಾದ ಮಾಚಾಪುರ: ಜೆಸಿಬಿ ಮೂಲಕ ಆಲಿಕಲ್ಲು ತೆರವು, ಕಂಗಾಲಾದ ಅನ್ನದಾತ -
Tamarind Price: ಹುಣಸೆ ಬೆಲೆಯಲ್ಲಿ ಭರ್ಜರಿ ಹೆಚ್ಚಳ: ಇಂದಿನ ಬೆಲೆ ಎಷ್ಟಿದೆ, ಹುಣಸೆ ಹಣ್ಣು ಬೆಲೆ ಏರಿಕೆಗೆ ಕಾರಣವೇನು -
ಲಕ್ಷಾಂತರ ರೂಪಾಯಿ ಸಂಬಳದ ಕೆಲಸಕ್ಕೆ ಗುಡ್ಬೈ: ಸಿಂಗಾಪುರದಿಂದ ಮುಂಬೈಗೆ ಬಂದು ಕವಿಯಾದ ಭಾರತೀಯ ಮೂಲದ ಯುವತಿ -
Bengaluru School: ರಾಜಾಜಿನಗರದಲ್ಲಿ ಶಾಲೆ ವಿರುದ್ಧ ನಿವಾಸಿಗಳ ಬೇಸರ: ಹೈಕೋರ್ಟ್ ನೋಟಿಸ್ ಜಾರಿ












Click it and Unblock the Notifications