ವಿಮಾನ ಅಪಘಾತದಲ್ಲೇ ಸುಭಾಷ್ ಚಂದ್ರ ಬೋಸ್ ಸಾವು: ಸಿಐಎ ವರದಿ

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ಜನವರಿ 28: ಸುಭಾಷ್ ಚಂದ್ರ ಬೋಸ್ ಸಾವಿನ ಬಗೆಗಿನ ರಹಸ್ಯ ಇನ್ನೂ ಮುಂದುವರಿದಿದೆ. ಆದರೆ ಸಿಐಎ ಪ್ರಕಾರ 1945ರಲ್ಲೇ ಬೋಸ್ ಸಾವನ್ನಪ್ಪಿದ್ದಾರೆ. ಸುಭಾಷ್ ಚಂದ್ರ ಬೋಸ್ ಸಾವಿನ ವಿಚಾರವಾಗಿ ಭಾರತದಲ್ಲಿ ವಿವಾದವೊಂದು ಜೀವಂತವಾಗಿದೆ. ಹಲವರು ನಂಬುವ ಹಾಗೆ ಜಪಾನ್ ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಸಾವನ್ನಪ್ಪಿಲ್ಲ.

ಆದರೆ, ಕೆಲವು ಸಂಶೋಧಕರು ಹಾಗೂ ಬೋಸ್ ಕುಟುಂಬ ಸದಸ್ಯರ ಪ್ರಕಾರ, ಅವರು ತುಂಬ ಕಾಲ ಬದುಕಿದ್ದರು. ಆದರೆ ಭಾರತ ಸರಕಾರ ಆ ವಿಚಾರವನ್ನು ಮುಚ್ಚಿಟ್ಟಿತ್ತು. 1.20 ಕೋಟಿ ಪುಟಗಳ 9,30,000 ದಾಖಲೆಗಳನ್ನು ಸೆಂಟ್ರಲ್ ಇಂಟಲಿಜೆನ್ಸಿ ಏಜೆನ್ಸಿ ಆನ್ ಲೈನ್ ನಲ್ಲಿ ಪ್ರಕಟಿಸಿದೆ. ಅದರಲ್ಲಿ ಹಲವು ದಾಖಲೆಗಳು ಭಾರತಕ್ಕೆ ಸಂಬಂಧಿಸಿದವು.[ಮೋದಿಯಿಂದ ನೇತಾಜಿ ರಹಸ್ಯ ಕಡತ ಬಿಡುಗಡೆ]

Subhas Chandra Bose died in 1945, CIA files state

ಆ ವರದಿಯನ್ನು ಫಾರ್ವರ್ಡ್ ಬ್ಲಾಕ್ ಎಂದು ಕರೆದಿದ್ದು, ಸೆಪ್ಟೆಂಬರ್ 10, 1948 ಬೋಸ್ ಗೆ ಸಂಬಂಧಿಸಿದ ದಾಖಲೆ ಎಂದಿದೆ. ಮತ್ತೊಂದು ವರದಿ, 'ಭಾರತದ ಕಮ್ಯೂನಿಸ್ಟ್ ಪಕ್ಷಗಳು ಮತ್ತು ಸಂಘಟನೆ ಮತ್ತು ಕಾರ್ಮಿಕ ಸಂಘಟನೆಗಳ ಮೇಲೆ ಅವುಗಳ ಪ್ರಭಾವ' ಎಂಬುದಿದೆ. ಅದು ಕೂಡ ಬೋಸ್ ಸಾವಿನ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.[ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ನೇತಾಜಿ ಬದುಕಿರಲಿಲ್ಲ: ವೆಬ್ ಸೈಟ್]

ಅದರಲ್ಲಿ ಭಾರತದಿಂದ ತಪ್ಪಿಸಿಕೊಂಡ ಬೋಸ್ ಎರಡನೇ ವಿಶ್ವಯುದ್ಧದ ವೇಳೆ ಜರ್ಮನಿಗೆ ಹೋಗಿದ್ದರ ಬಗ್ಗೆ ಮಾಹಿತಿ ಇದೆ. ಅದರಲ್ಲಿ ಕೂಡ 1945ರಲ್ಲಿ ಇಂಡೋಚೀನಾದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಬೋಸ್ ಮೃತಪಟ್ಟರು ಎಂದಿದೆ. ಜಪಾನ್ ಸರಕಾರ 1956ರಲ್ಲಿ ನಡೆಸಿದ ತನಿಖೆಯಲ್ಲಿ, ಆಗಸ್ಟ್ 18-1945ರಲ್ಲಿ ವಿಮಾನ ಅಪಘಾತದಲ್ಲಿ ಗಾಯಗಳಿಂದ ಸುಭಾಷ್ ಚಂದ್ರ ಬೋಸ್ ಮೃತಪಟ್ಟರು ಎಂದು ಷರಾ ಬರೆದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The mystery regarding Subhas Chandra Bose continues, but the CIA believed that he had died in 1945 itself. There has been a controversy in India over the death of Bose. Many believe that he had not died in a plane crash in Japan.
Please Wait while comments are loading...