ಕೋವಿಶೀಲ್ಡ್-ಕೋವ್ಯಾಕ್ಸಿನ್ ಮಿಶ್ರಿತ ಲಸಿಕೆ ಪ್ರಯೋಗಕ್ಕೆ ಅನುಮತಿ

ನವದೆಹಲಿ, ಆಗಸ್ಟ್ 11: ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆ ಡೋಸ್‌ಗಳ ಮಿಶ್ರಣ ಪ್ರಯೋಗ ಉತ್ತಮ ಫಲಿತಾಂಶ ನೀಡಿದ್ದು ಇದಕ್ಕೆ ಡ್ರಗ್ ಕಂಟ್ರೋಲ್ ಜನರಲ್ ಆಫ್ ಇಂಡಿಯಾ ಅನುಮತಿ ನೀಡಿದೆ.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಈ ಅಂಶವನ್ನು ದೃಢಪಡಿಸಿದೆ. ಹೀಗಾಗಿ‌‌ ಕೇಂದ್ರ ಸರ್ಕಾರ ಎರಡೂ ಲಸಿಕೆ ಗಳ ಮಿಶ್ರಣ ಮಾಡಿ ಡೋಸ್ ನೀಡಲು ಅನುಮತಿ ನೀಡಿದೆ. ಈ ಮಿಶ್ರಿತ ಪ್ರಯೋಗ ದಿಂದ ಉತ್ತಮ ಫಲಿತಾಂಶ ದೊರೆತಿದೆ. ವೈರಸ್ ವಿರುದ್ಧ ಉತ್ತಮ ಪ್ರತಿರೋಧ ಶಕ್ತಿ ಸೃಷ್ಟಿಯಾಗಿರುವುದು ಈ ಅಧ್ಯಯನದಲ್ಲಿ‌ ದೃಢಪಟ್ಟಿದೆ. ‌ಒಬ್ಬ ವ್ಯಕ್ತಿಗೆ ಎರಡು ಭಿನ್ನ ಲಸಿಕೆಗಳ (ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್) ಡೋಸ್‌ ನೀಡುವ ಪ್ರಯೋಗಕ್ಕೆ ತಜ್ಞರ ಸಮಿತಿ ಶಿಫಾರಸು ಮಾಡಿತ್ತು.

ಕೇಂದ್ರೀಯ ಔಷಧ ಗುಣಮಟ್ಟನಿಯಂತ್ರಕ ಸಂಸ್ಥೆಯ (ಸಿಡಿಎಸ್‌ಸಿಒ) ತಜ್ಞರ ಸಮಿತಿ ಗುರುವಾರ ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ಗಳ ತಲಾ 1 ಡೋಸ್‌ ನೀಡಿ ಜನರ ಮೇಲೆ ಪ್ರಯೋಗ ನಡೆಸಲು ಶಿಫಾರಸು ಮಾಡಿದೆ. ಇದಕ್ಕಾಗಿ ಅದು ಸರ್ಕಾರದ ಅನುಮತಿ ಕೋರಿದೆ.

ವೆಲ್ಲೂರಿನ ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು ಎರಡೂ ಲಸಿಕೆಗಳ ಮಿಶ್ರಣ ಪ್ರಯೋಗ ಮಾಡಲು ಕೋರಿಕೆ ಸಲ್ಲಿಸಿತ್ತು. ಇದಕ್ಕೆ ಅನುಮತಿ ನೀಡಬೇಕೆಂದು ತಜ್ಞರ ಸಮಿತಿ ಶಿಫಾರಸು ಮಾಡಿದೆ. ಇದಕ್ಕೆ ಸರ್ಕಾರದ ಅನುಮತಿ ದೊರೆತರೆ ದೇಶದಲ್ಲಿ ಇಂಥ ಮೊದಲ ಪ್ರಯೋಗ ಎನ್ನಿಸಿಕೊಳ್ಳಲಿದೆ.
ಇದರರ್ಥ, ಕೋವಿಶೀಲ್ಡ್‌ ಹಾಗೂ ಕೋವ್ಯಾಕ್ಸಿನ್‌ ಲಸಿಕೆಯ ತಲಾ 1 ಡೋಸ್‌ ಅನ್ನು ಜನರಿಗೆ ನೀಡಿ ಪ್ರಯೋಗಕ್ಕೆ ಒಳಪಡಿಸಲಾಗುತ್ತದೆ. ಇದರಿಂದ ಭಾರೀ ಪ್ರತಿಕಾಯ ಶಕ್ತಿ ಉತ್ಪಾದನೆ ಆಗಬಹುದು ಎಂಬ ಊಹೆ ಇದೆ. ಇದು ಯಶಸ್ವಿಯಾದರೆ ದೇಶದಲ್ಲಿ ಈ ರೀತಿಯ ಲಸಿಕೆ ಮಿಶ್ರಣ ಜಾರಿಗೆ ಪದ್ಧತಿ ವ್ಯವಸ್ಥೆ ಬರಲಿದೆ.

ಈಗಾಗಲೇ ವಿದೇಶಗಳಲ್ಲಿ ಮಾಡೆರ್ನಾ ಹಾಗೂ ಆ್ಯಸ್ಟ್ರಾಜೆನೆಕಾದ ಲಸಿಕೆ ಮಿಶ್ರಣ ಪ್ರಯೋಗ ನಡೆದಿದೆ.

ರಡು ವಿಭಿನ್ನ ಲಸಿಕೆಗಳನ್ನು ಪಡೆದರೆ ಗಾಬರಿಪಡುವ ಅಗತ್ಯವಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ನೇಪಾಳದ ಗಡಿಯಲ್ಲಿರುವ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಕನಿಷ್ಠ 20 ಜನರಿಗೆ ವಿವಿಧ ಲಸಿಕೆಗಳ ಡೋಸ್ ನೀಡಿದ ಪ್ರಕರಣದ ಬಗ್ಗೆ ಕೇಂದ್ರ ಸರ್ಕಾರ ಈ ರೀತಿ ಪ್ರತಿಕ್ರಿಯಿಸಿದೆ. ನೀತಿ ಆಯೋಗ (ಆರೋಗ್ಯ) ಸದಸ್ಯ ವಿ.ಕೆ. ಪೌಲ್ ಅವರು, ವ್ಯಾಕ್ಸಿನೇಷನ್ ಕೇಂದ್ರಗಳು ಪ್ರೋಟೋಕಾಲ್ ಪ್ರಕಾರ ಅದೇ ಲಸಿಕೆಗಳ ಡೋಸ್ ಗಳು ನೀಡಬೇಕು. ಆದರೆ ಮಿಶ್ರಣ ಸಂಭವಿಸಿದಲ್ಲಿ, ಯಾವುದೇ ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಗಳಿಲ್ಲ ಎಂದಿದ್ದಾರೆ.

ಎರಡು ಸ್ಲಾಟ್‌ಗಳಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ಪಡೆದ 20 ಜನರು ಎಲ್ಲರೂ ಆಡಾಹಿ ಕಲಾನ್ ಗ್ರಾಮದವರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರು. ಏಪ್ರಿಲ್ 1 ರಂದು, ಕೊವಿಶೀಲ್ಡ್ ಒಂದು ಡೋಸ್ ನೀಡಲಾಯಿತು. ಅದು ಅವರ ಮೊದಲ ಡೋಸ್ ಆಗಿದೆ. ಮೇ 14 ರಂದು ಅವರಿಗೆ ಎರಡನೇ ಡೋಸ್ ನೀಡಲಾಯಿತು. ಆರೋಗ್ಯ ಕಾರ್ಯಕರ್ತರು ಈ ಮೊದಲು ಅವರಿಗೆ ಯಾವ ಲಸಿಕೆ ನೀಡಲಾಗಿದೆಯೆಂದು ಕಂಡುಹಿಡಿಯಲು ಕಾರ್ಡ್ ಪರಿಶೀಲಿಸದ ಕಾರಣ, ಅವರಿಗೆ ತಪ್ಪಾಗಿ ಕೊವಾಕ್ಸಿನ್ ನೀಡಲಾಯಿತು.

ಗ್ರಾಮದವರಾದ ರಾಮ್ ಸೂರತ್ ಅವರು ಎರಡು ಡೋಸ್‌ಗಳಲ್ಲಿ ಎರಡು ವಿಭಿನ್ನ ಲಸಿಕೆಗಳನ್ನು ನೀಡುತ್ತಿರುವುದನ್ನು ಗಮನಿಸಿದರು. ಅವುಗಳಲ್ಲಿ ಯಾವುದೂ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ವರದಿ ಮಾಡಿಲ್ಲ ಎಂದು ವರದಿಗಳು ತಿಳಿಸಿವೆ.

 ಮಿಶ್ರಿತ ಲಸಿಕೆಯಿಂದ ಅಡ್ಡಪರಿಣಾಮಗಳಿಲ್ಲ

ಮಿಶ್ರಿತ ಲಸಿಕೆಯಿಂದ ಅಡ್ಡಪರಿಣಾಮಗಳಿಲ್ಲ

ಒಂದು ಡೋಸ್ ಕೋವಿಶೀಲ್ಡ್ ಹಾಗೂ ಇನ್ನೊಂದು ಡೋಸ್ ಕೋವ್ಯಾಕ್ಸಿನ್ ಲಸಿಕೆ ನೀಡುವುದರಿಂದ ಕೊರೋನಾದ ವಿರುದ್ಧ ದೇಹದಲ್ಲಿ ಹೆಚ್ಚು ರೋಗನಿರೋಧಕ ಶಕ್ತಿ ಸೃಷ್ಟಿಯಾಗುತ್ತದೆ ಎಂದು ಭಾರತದಲ್ಲಿ ನಡೆದ ಮೊದಲ ಅಧಿಕೃತ ಅಧ್ಯಯನದಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ನಡೆಸಿದೆ.

 ಉತ್ತರ ಪ್ರದೇಶದಲ್ಲಿ ಪ್ರಯೋಗ

ಉತ್ತರ ಪ್ರದೇಶದಲ್ಲಿ ಪ್ರಯೋಗ

ಉತ್ತರ ಪ್ರದೇಶದ ಒಟ್ಟು 98 ಜನರ ಮೇಲೆ ಈ ಪ್ರಯೋಗ ನಡೆಸಲಾಗಿದ್ದು, ಇವರಲ್ಲಿ ಅಚಾತುರ್ಯದಿಂದ ಮೊದಲ ಡೋಸ್ ಕೋವಿಶೀಲ್ಡ್ ಹಾಗೂ ಎರಡನೇ ಡೋಸ್ ಕೋವ್ಯಾಕ್ಸಿನ್ ಪಡೆದ 18 ಜನರು ಸೇರಿದ್ದಾರೆ. ಇನ್ನುಳಿದ 80 ಜನರಲ್ಲಿ 40 ಜನರಿಗೆ ಮೊದಲ ಡೋಸ್ ಕೋವಿಶೀಲ್ಡ್ ಹಾಗೂ ಎರಡನೇ ಡೋಸ್ ಕೋವ್ಯಾಕ್ಸಿನ್ ನೀಡಲಾಗಿತ್ತು. ಇತರ 40 ಜನರಿಗೆ ಎರಡೂ ಡೋಸ್ ಒಂದೇ ಲಸಿಕೆ ನೀಡಲಾಗಿತ್ತು. ಎರಡು ಡೋಸ್ ಪಡೆದ ನಿರ್ದಿಷ್ಟ ಸಮಯದ ನಂತರ ಪರೀಕ್ಷೆ ನಡೆಸಿದಾಗ ಬೆರಕೆ ಲಸಿಕೆ ಪಡೆದವರಲ್ಲಿ ಒಂದೇ ಲಸಿಕೆಯ ಎರಡು ಡೋಸ್ ಪಡೆದವರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿ ಕಂಡುಬಂದಿದೆ ಎಂದು ಅಧ್ಯಯನದ ವರದಿಯಲ್ಲಿ ತಿಳಿಸಲಾಗಿದೆ.

 ಲಸಿಕೆಗಳ ತಂತ್ರಜ್ಞಾನ ಬೇರೆ

ಲಸಿಕೆಗಳ ತಂತ್ರಜ್ಞಾನ ಬೇರೆ

ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳ ತಂತ್ರಜ್ಞಾನ ಬೇರೆಬೇರೆಯಾಗಿದೆ. ಒಂದು ಅಡೆನೋವೈರಸ್ ಲಸಿಕೆಯಾಗಿದ್ದರೆ, ಇನ್ನೊಂದು ಮೃತ ವೈರಸ್‍ಗಳನ್ನು ಬಳಸಿ ತಯಾರಿಸಿದ ಲಸಿಕೆಯಾಗಿದೆ. ಆದರೂ ಈ ಎರಡು ಲಸಿಕೆಗಳ ತಲಾ ಒಂದೊಂದು ಡೋಸ್ ಪಡೆಯುವುದರಿಂದ ಯಾವುದೇ ಹೆಚ್ಚಿನ ಅಡ್ಡಪರಿಣಾಮ ಉಂಟಾಗುವುದಿಲ್ಲ. ಈ ಲಸಿಕೆಗಳ ಮಿಶ್ರಣ ಸುರಕ್ಷಿತ. ಒಂದೇ ಲಸಿಕೆಯ ಎರಡು ಡೋಸ್ ಪಡೆದಾಗ ಯಾವ ರೀತಿಯ ಅಡ್ಡಪರಿಣಾಮಗಳು ಕಂಡುಬಂದಿವೆಯೋ ಅಂತಹವೇ ಅಡ್ಡಪರಿಣಾಮಗಳು ಮಿಶ್ರ ಲಸಿಕೆ ಪಡೆದಾಗಲೂ ಕಂಡುಬಂದಿವೆ ಎಂದು ವರದಿ ಹೇಳಿದೆ.

 ಅಚಾತುರ್ಯದಿಂದ ಎರಡು ಲಸಿಕೆ ನೀಡಲಾಗಿತ್ತು

ಅಚಾತುರ್ಯದಿಂದ ಎರಡು ಲಸಿಕೆ ನೀಡಲಾಗಿತ್ತು

ದೇಶದಲ್ಲಿ ಲಸಿಕಾ ಅಭಿಯಾನ ವೇಗವಾಗಿ ನಡೆಯುತ್ತಿರುವಾಗ ಅಚಾತುರ್ಯದಿಂದ ಎರಡು ಜಾತಿಯ ಲಸಿಕೆಗಳ ಬೆರಕೆಯಾದರೆ ಜನರಿಗೆ ಉಂಟಾಗಬಹುದಾದ ಆತಂಕದ ಹಿನ್ನೆಲೆಯಲ್ಲಿ ಈ ಅಧ್ಯಯನ ನಡೆಸಿರುವುದಾಗಿ ಐಸಿಎಂಆರ್ ಹೇಳಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+