ಮನ್ ಕೀ ಬಾತ್ ನಲ್ಲಿ ಕರ್ನಾಟಕದ ವಿದ್ಯಾರ್ಥಿಗಳ ನೆನೆದ ಮೋದಿ

Posted By:
Subscribe to Oneindia Kannada

ಕೆಲ ದಿನಗಳ ಹಿದೆ ಕರ್ನಾಟಕದ ವಿದ್ಯಾರ್ಥಿಗಳ ನನಗೆ ಪತ್ರ ಬರೆದಿದ್ದರು. ವಿವಿಧ ವಿಚಾರಗಳ ಬಗ್ಗೆ ವಿದ್ಯಾರ್ಥಿಗಳು ಬರೆಯುವ ಪತ್ರವನ್ನು ಓದುವಾಗ ಬಹಳ ಖುಷಿಯಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಮ್ಮ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ಹೇಳಿದರು. ಈ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಟ್ವೀಟ್ ಮಾಡಿದ್ದಾರೆ.

ಧರ್ಮ, ರಾಜಕೀಯದ ಹೆಸರಲ್ಲಿ ಹಿಂಸಾಚಾರ ಸಹಿಸಲು ಸಾಧ್ಯವಿಲ್ಲ: ಮೋದಿ

2008ರಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪ್ರಾಣ ತ್ಯಾಗ ಮಾಡಿದವರಿಗೆ ಗೌರವ ಸಲ್ಲಿಸಿದರು. ದಾಳಿಯ ಕಹಿ ನೆನಪಿಗೆ ಒಂಬತ್ತು ವರ್ಷ ತುಂಬಿದ ಸಂದರ್ಭವನ್ನು ಅವರು ಸ್ಮರಿಸಿದರು.

students from Karnataka wrote to me. I was very happy to read their letters : Modi

ಭಯೋತ್ಪಾದನೆಯು ಮಾನವೀಯತೆಗೆ ಆತಂಕ ಒಡ್ಡಿದೆ. ಅಂದಿನ ದಾಳಿಯಲ್ಲಿ ಜೀವ ತ್ಯಾಗ ಮಾಡಿದ ಎಲ್ಲ ಧೈರ್ಯವಂತ ಪುರುಷರು ಹಾಗೂ ಮಹಿಳೆಯರಿಗೆ ನಮ್ಮ ಸೆಲ್ಯೂಟ್ ಎಂದು ಅವರು ಹೇಳಿದರು.

ನಾಲ್ಕು ದಶಕಕ್ಕೂ ಹೆಚ್ಚು ಕಾಲದಿಂದ ಭಾರತವು ಭಯೋತ್ಪಾದನೆಯ ಸಮಸ್ಯೆ ಬಗ್ಗೆ ಧ್ವನಿ ಎತ್ತುತ್ತಿದೆ. ಆರಂಭದಲ್ಲಿ ಜಾಗತಿಕ ಮಟ್ಟದಲ್ಲಿ ನಮ್ಮನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಈಗ ಭಯೋತ್ಪಾದನೆಯಿಂದ ಆಗುತ್ತಿರುವ ವಿನಾಶದ ಬಗ್ಗೆ ಅವರಿಗೆ ಅರ್ಥವಾಗುತ್ತಿದೆ ಎಂದರು.

ಇನ್ನು ನವೆಂಬರ್ ಇಪ್ಪತ್ತಾರರಂದು ಸಂವಿಧಾನ ರಚನೆಯಾದ ದಿನ. ನಮ್ಮ ಸಂವಿಧಾನವು ಬಡವರು ಮತ್ತು ದುರ್ಬಲ ವರ್ಗದವರ ರಕ್ಷಣೆಗೆ ಬದ್ಧವಾಗಿದೆ. ಸಂವಿಧಾನ ರಚೆನ್ ಮಾಡಿದವರು ಶ್ರಮದ ಬಗ್ಗೆ ನಾವು ಹೆಮ್ಮೆ ಪಡಬೇಕು ಎಂದು ಮೋದಿ ಹೇಳಿದರು.

ಡಿಸೆಂಬರ್ ನಾಲ್ಕರಂದು ನೌಕಾಪಡೆ ದಿನವಿದ್ದು, ಭಾರತೀಯ ನೌಕಾಪಡೆಯ ಶ್ರಮವನ್ನು ಸ್ಮರಿಸಿದರು. ಭಾರತೀಯ ನೌಕಾ ಪಡೆಯ ಉಚ್ಛ್ರಾಯ ಕಾಲವಾದ ಚೋಳ ಹಾಗೂ ಶಿವಾಜಿ ಮಹಾರಾಜರ ಆಡಳಿತಾವಧಿಯನ್ನು ನೆನಪಿಸಿಕೊಂಡರು.

ಮೋದಿ ಮನದ ಮಾತು ಪೋಗ್ರಾಂನಿಂದ 10 ಕೋಟಿ ರು ಆದಾಯ

ಕಳೆದ ಸೆಪ್ಟೆಂಬರ್ ನಲ್ಲಿ ಬಾಂಗ್ಲಾದೇಶ್ ನಲ್ಲಿ ರೋಹಿಂಗ್ಯಾ ಮುಸ್ಲಿಮರ ಬಿಕ್ಕಟ್ಟಿನ ವೇಳೆ ಮಾನವೀಯತೆ ನೆಲೆಯಲ್ಲಿ ಐಎನ್ ಎಸ್ ಘಡಿಯಾಲ್ ನೀಡಿದ ನೆರವನ್ನು ಶ್ಲಾಘಿಸಿದರು.

ಡಿಸೆಂಬರ್ ಐದರಂದು ವಿಶ್ವ ಮಣ್ಣಿನ ದಿನವಿದ್ದು, ಆ ಬಗ್ಗೆ ಕೂಡ ಪ್ರಧಾನಿ ಮಾತನಾಡಿದರು. ರೈತರು ಈ ಹಿಂದೆ ರಾಸಯಾನಿಕ ಗೊಬ್ಬರ ಬಳಸುತ್ತಿದ್ದರು. ಇದರಿಂದ ಮಣ್ಣಿನ ಆರೋಗ್ಯ ಕ್ಷೀಣಿಸುತ್ತದೆ. ಫಸಲು ಕಡಿಮೆ ಆಗಿ, ಫಲವತ್ತತೆ ಕಡಿಮೆಯಾಗುತ್ತದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A few days back, students from Karnataka wrote to me. I was very happy to read their letters on a wide range of issues, PM Narendra Modi said in Mann Ki Baat on Sunday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ