ಟೀಚರ್ ನ ಕೂಡಿ ಹಾಕಿ, ಲೈಂಗಿಕತೆಗಾಗಿ ಪೀಡಿಸಿದ ವಿದ್ಯಾರ್ಥಿ!

Posted By:
Subscribe to Oneindia Kannada

ನವದೆಹಲಿ, ಜನವರಿ 19: ಇಲ್ಲೊಬ್ಬ ಹದಿಹರೆಯದ ಕಾಮುಕ ತನ್ನ 45 ವರ್ಷದ ಶಿಕ್ಷಕಿಯನ್ನು ಶಾಲೆಯ ಶೌಚಾಲಯದಲ್ಲಿ ಕೂಡಿ ಹಾಕಿ, ತನ್ನ ಬಳಿ ಲೈಂಗಿಕವಾಗಿ ಸಹಕರಿಸಿದರೆ ಮಾತ್ರ ಬಿಡ್ತೀನಿ ಎಂದು ಕಾಡಿಸಿದ್ದಾನೆ!

ದೆಹಲಿಯ ಸರ್ಕಾರಿ ಶಾಲೆಯೊಂದರಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿರುವ ಘಟನೆಯಿದು. ತಡವಾಗಿ ಬೆಳಕಿಗೆ ಬಂದಿದೆಯಷ್ಟೇ.

ಅಂದು, ಮಧ್ಯಾಹ್ನದ ಹೊತ್ತಿಗೆ ತರಗತಿಗಳನ್ನು ಮುಗಿಸಿಕೊಂಡಿದ್ದ ಆ ಶಿಕ್ಷಕಿ, ಮಧ್ಯಾಹ್ನ 12:50ರ ಸುಮಾರಿಗೆ ಶೌಚಕ್ಕೆಂದು ಬಾತ್ ರೂಮಿನೊಳಕ್ಕೆ ತೆರಳಿದ್ದಾರೆ. ಆಗ, ಹೊರಗಡೆಯಿಂದ ಯಾರೋ ಆ ಶೌಚದ ಕೊಠಡಿಯ ಬಾಗಿಲನ್ನು ಹಾಕಿದ್ದು ಗಮನಕ್ಕೆ ಬಂದಿದೆ. ತಕ್ಷಣವೇ ಅವರು ಯಾರೆಂದು ಕೂಗಿದರೂ, ತಕ್ಷಣಕ್ಕೆ ಪ್ರತಿಕ್ರಿಯೆ ಬಂದಿಲ್ಲ.

Student locks teacher in washroom, demands 'sexual favour'.

ಇದರಿಂದ ಕೊಂಚ ಗಲಿಬಿಲಿಗೊಂಡ ಅವರು, ಬಾಗಿಲು ಬಡಿದಾಗ ಹೊರಗಡೆ ನಿಂತಿದ್ದ ಆ ಹುಡುಗ, ಆ ಕೃತ್ಯ ತನ್ನದೇ ಎಂದಿದ್ದಾನಷ್ಟೇ ಅಲ್ಲ, ತನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸುವುದಾಗಿ ಆಶ್ವಾಸನೆ ನೀಡಿದರೆ ಮಾತ್ರ ಬಾಗಿಲು ತೆರೆಯುವುದಾಗಿ ಪೀಡಿಸಿದ್ದಾನೆ. ಆದರೆ, ಆ ಹೊತ್ತಿಗೆ ತನ್ನ ಹೆಸರನ್ನು ಬಹಿರಂಗಪಡಿಸಿಲ್ಲ.

ಇದಕ್ಕೆ ಶಿಕ್ಷಕಿ ಆಕ್ಷೇಪವೆತ್ತಿದರೂ ಆತ ಒಪ್ಪಿಲ್ಲ. ಸುಮಾರು 15 ನಿಮಿಷದವರೆಗೂ ಆತ ಅವರನ್ನು ಕೂಡಿಹಾಕಿದ್ದಾನೆ. ಕೊನೆಗೆ ಆಕೆ ಶೌಚಾಲಯದ ವೆಂಟಿಲೇಟರ್ ತೆಗೆದು ನೋಡಿ ಆ ಹುಡುಗ ಯಾರೆಂದು ಅರಿತು ಜೋರಾಗಿ ಕೂಗಾಡಿದ್ದಾರೆ. ಶಿಕ್ಷಕಿಯು ತನ್ನ ಹೆಸರನ್ನು ಹೇಳುತ್ತಾ ಜೋರಾಗಿ ಬಯ್ಯಲು ಶುರು ಮಾಡಿದ್ದಕ್ಕೆ ಹೆದರಿದ ಆ ವಿದ್ಯಾರ್ಥಿ ಅಲ್ಲಿಂದ ಓಡಿ ಹೋಗಿದ್ದಾನೆ.

ಇದೀಗ, ಪೊಲೀಸರಿಗೆ ಆ ಶಿಕ್ಷಕಿ ದೂರು ನೀಡಿದ್ದು, ಆ ಹುಡುಗನನ್ನು ಪೊಲೀಸರು ಬಂಧಿಸಿದ್ದಾರೆ.

ಒನ್ ಇಂಡಿಯಾ ಕಾಳಜಿ
ಹೆಚ್ಚುತ್ತಿರುವ ಸಮೂಹ ಮಾಧ್ಯಮಗಳು, ಸ್ಮಾರ್ಟ್ ಫೋನ್ ನಲ್ಲೇ ಅಶ್ಲೀಲ ವೀಡಿಯೋ, ಚಿತ್ರಗಳನ್ನು ವೀಕ್ಷಿಸಬಹುದಾದ ಇಂದಿನ ದಿನಗಳು ಮಕ್ಕಳನ್ನು ಹಾಳುಗೆಡವುತ್ತಿವೆಯೇ? ಇದು ವಿಜ್ಞಾನ ಕೊಟ್ಟ ಅನುಕೂಲತೆಗಳ ನಕಾರಾತ್ಮಕ ಪರಿಣಾಮವೇ? ನೀವೇನಂತೀರ?
ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ ಬಾಕ್ಸ್ ನಲ್ಲಿ ದಯವಿಟ್ಟು ಬರೆಯಿರಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A student at a government school in Delhi locked up a teacher in the school washroom and demanded "sexual favour" in return of her release.
Please Wait while comments are loading...