#StoryForGlory: ಉದಯೋನ್ಮುಖ ಪ್ರತಿಭೆಗಳ ಹುಡುಕಾಟಕ್ಕೆ ಹಾದಿ
ನವದೆಹಲಿ, ಸೆಪ್ಟೆಂಬರ್ 29: ಭಾರತದಲ್ಲಿ ಉದಯೋನ್ಮುಖ ಪತ್ರಕರ್ತರ ಹುಡುಕಾಟಕ್ಕಾಗಿ ವಿಭಿನ್ನ ಹಾಗೂ ವಿನೂತನ ಪ್ರಯತ್ನ ನಡೆಸಲಾಗುತ್ತಿದೆ. ಸ್ಥಳೀಯ ವಿಷಯ ವೇದಿಕೆಯಲ್ಲಿ ನಂಬರ್ ಒನ್ ಆಗಿರುವ ಡೈಲಿಹಂಟ್ ಮತ್ತು ಪ್ರಮುಖ ಸಂಯೋಜಿತ ವ್ಯಾಪಾರಿ ಸಂಘಟನೆ ಅದಾನಿ ಗ್ರೂಪ್ ಬೆಂಬಲಿತ ಎಎಂಜಿ ಮೀಡಿಯಾ ನೆಟ್‌ವರ್ಕ್‌ಗಳು ರಾಷ್ಟ್ರವ್ಯಾಪಿ ಪ್ರತಿಭೆಗಳ ಹುಡುಕಾಟಕ್ಕಾಗಿ #StoryForGlory ಅನ್ನು ನಡೆಸಲಾಯಿತು.
ರಾಷ್ಟ್ರವ್ಯಾಪಿ ಪ್ರತಿಭೆಗಳ ಹುಡುಕಾಟವು ವಿಡಿಯೋ ಮತ್ತು ಮುದ್ರಣ ಮಾಧ್ಯಮ ಎಂಬ ಎರಡು ವಿಭಾಗಗಳ ಅಡಿಯಲ್ಲಿ ನಡೆದಿದ್ದು, 12 ವಿಜೇತರನ್ನು ಗುರುತಿಸಿ ಗೌರವಿಸಲಾಯಿತು. ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ನಡೆದ ಕಾರ್ಯಕ್ರಮವು ಮೇ ತಿಂಗಳಲ್ಲಿ ಪ್ರಾರಂಭವಾಯಿತು.
1000ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 20 ಪ್ರತಿಭಾವಂತ ಭಾಗವಹಿಸುವವರನ್ನು ಶಾರ್ಟ್‌ಲಿಸ್ಟ್ ಮಾಡಲಾಯಿತು. ಶಾರ್ಟ್‌ಲಿಸ್ಟ್ ಮಾಡಿದ ಅಭ್ಯರ್ಥಿಗಳು ಪ್ರಮುಖ ಮಾಧ್ಯಮ ಸಂಸ್ಥೆಯಾದ MICA ಯಲ್ಲಿ ಎಂಟು ವಾರಗಳ ದೀರ್ಘ ಫೆಲೋಶಿಪ್ ಮತ್ತು ಎರಡು ವಾರಗಳ ಕಲಿಕೆಯ ಕಾರ್ಯಕ್ರಮದ ಮೂಲಕ ಹೋದರು. ಅವರ ಕಠಿಣ ತರಬೇತಿಯ ನಂತರ ಭಾಗವಹಿಸುವವರು ಆರು ವಾರಗಳ ಕಾಲ ತಮ್ಮ ಅಂತಿಮ ಯೋಜನೆಯಲ್ಲಿ ಕೆಲಸ ಮಾಡಿದರು. ಪ್ರಮುಖ ಮಾಧ್ಯಮ ಪ್ರಕಾಶನ ಸಂಸ್ಥೆಗಳಿಂದ ಮಾರ್ಗದರ್ಶನ ಪಡೆದರು. ನಂತರ ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ತಮ್ಮ ಕೌಶಲ್ಯ ಮತ್ತು ಅನುಭವದ ಕಲಿಕೆಯನ್ನು ತಮ್ಮ ಕಥೆ ಮತ್ತು ವಿಷಯದ ಕಠಿಣತೆ ಮೇಲೆ ಕೇಂದ್ರೀಕರಿಸಿದರು.

ಅಂತಿಮವಾಗಿ 12 ವಿಜೇತರ ಆಯ್ಕೆ:
ಸ್ಟೋರಿ ಆಫ್ ಗ್ಲೋರಿ ಸ್ಪರ್ಧೆಯ ಅಂತಿಮ ಹಂತದಲ್ಲಿ 20 ಸ್ಪರ್ಧಿಗಳು ತಮ್ಮ ಪ್ರಾಜೆಕ್ಟ್ ಅನ್ನು ಪ್ರಸ್ತುತಪಡಿಸಿದರು. ಈ ಪೈಕಿ 12 ಅಭ್ಯರ್ಥಿಗಳನ್ನು ವಿಜೇತರಾಗಿ ಆಯ್ಕೆ ಮಾಡಲಾಯಿತು. ಡೈಲಿಹಂಟ್ ಸಂಸ್ಥಾಪಕ ವಿರೇಂದ್ರ ಗುಪ್ತಾ ಸೇರಿದಂತೆ ಉದ್ಯಮ ವಲಯದ ಪ್ರಮುಖರು ಈ ಸ್ಪರ್ಧೆಯ ತೀರ್ಪುದಾರರಾಗಿದ್ದರು. ಇವರ ಜೊತೆಗೆ ಎಎಂಜಿ ಮೀಡಿಯಾ ನೆಟ್‌ವರ್ಕ್ ಮೀಡಿಯಾ ಲಿಮಿಟೆಡ್ ಸಿಇಒ ಸಂಜಯ್ ಪುಗಾಲಿಯಾ, ದಿ ಇಂಡಿಯನ್ ಎಕ್ಸ್ ಪ್ರೆಸ್ ಕಾರ್ಯನಿರ್ವಾಹಕ ನಿರ್ದೇಶಕ ಅನಂಕ್ ಗೋಯೆಂಕಾ, ಫಿಲ್ಮ್ ಕಂಪ್ಯಾನಿಯನ್ ಸಂಸ್ಥಾಪಕಿ ಅನುಪಮಾ ಚೋಪ್ರಾ ಜೊತೆಗೆ ನಿಲೇಶ್ ಮಿಶ್ರಾ, ಪಂಕಜ್ ಮಿಶ್ರಾ ಸೇರಿದಂತೆ ಹಲವು ಪ್ರಮುಖರು ಹಾಜರಾಗಿದ್ದರು.
ಅನನ್ಯ ಪ್ರತಿಭೆಗಳನ್ನು ಗುರುತಿಸುವ ಪ್ರಯತ್ನ:
ಸಾಮಾನ್ಯರಲ್ಲಿ ಸಾಮಾನ್ಯರಂತಿದ್ದ ಜನ ಸಾಮಾನ್ಯರನ್ನು ಸ್ಟೋರಿ ಫಾರ್ ಗ್ಲೋರಿ ಕಾರ್ಯಕ್ರಮದ ಮೂಲಕ ಗುರುತಿಸಲಾಯಿತು. "ಪತ್ರಿಕೋದ್ಯಮ ಕ್ಷೇತ್ರದಲ್ಲಿ ಭವಿಷ್ಯದ ಪ್ರತಿಭೆಗಳು ತಮ್ಮ ವೃತ್ತಿಜೀವನವನ್ನು ಸುಗಮಗೊಳಿಸುವ ನಿಟ್ಟಿನಲ್ಲಿ ಅವಕಾಶವನ್ನು ಒದಗಿಸಿತು. ಡಿಜಿಟಲ್ ಸುದ್ದಿ ಮತ್ತು ಮಾಧ್ಯಮ ಕ್ಷೇತ್ರವು ಕಥೆ ಹೇಳುವ ಕಲೆಯನ್ನು ಗಣನೀಯವಾಗಿ ಮುಂದುವರಿಸಿದೆ. ಈ ಕಾರ್ಯಕ್ರಮದ ಮೂಲಕ ಭಾರತದ ಮಾಧ್ಯಮ ಪ್ರಪಂಚದಲ್ಲಿ ಹೊಸ ವಾತಾವರಣವನ್ನು ಸೃಷ್ಟಿಸುವ ಬದ್ಧತೆಯನ್ನು ಕಾರ್ಯಕ್ರಮವು ತೋರಿಸಿ ಕೊಟ್ಟಿದೆ. ಉದಯೋನ್ಮುಖ ಕಥೆಗಾರರು ತಮ್ಮ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಉತ್ಸಾಹದಿಂದ ಭಾಗವಹಿಸಲು ನಾವು ಅವಕಾಶ ನೀಡುತ್ತೇವೆ," ಎಂದು ಡೈಲಿಹಂಟ್ ಸಂಸ್ಥಾಪಕ ವೀರೇಂದ್ರ ಗುಪ್ತಾ ಹೇಳಿದರು.












Click it and Unblock the Notifications