'ಯೂರಿನ್' ನಿಂದ ಯೂರಿಯಾ ಉತ್ಪಾದನೆ: ಇದು ಗಡ್ಕರಿ ಐಡಿಯಾ
ನಾಗ್ಪುರ್, ಮಾರ್ಚ್ 04: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಹೊಸ ಸಲಹೆ ಕೇಳಿ ಹಲವರ ಹುಬ್ಬೇರಬಹುದು.
ದೇಶದ ಜನರ ಮೂತ್ರವನ್ನು ಸಂಗ್ರಹಿಸಿ ಅದರಿಂದ ಯೂರಿಯಾ ಉತ್ಪಾದಿಸಬಹುದಾಗಿದೆ. ಈ ಮೂಲಕದ ವಿದೇಶದಿಂದ ಯೂರಿಯಾ ಆಮದು ಮಾಡಿಕೊಳ್ಳುವುದನ್ನು ತಪ್ಪಿಸಬಹುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸಲಹೆ ನೀಡಿದರು.
ನಾಗಪುರದ ಮುನ್ಸಿಪಲ್ ಕಾರ್ಪೋರೇಷನ್ ನಲ್ಲಿ ಭಾನುವಾರದಂದು ಆಯೋಜಿಸಿದ್ದ ಮೇಯರ್ ಇನ್ನೋವೇಶನ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಗಡ್ಕರಿ, ಮೂತ್ರದಿಂದ ಯೂರಿಯಾವನ್ನು ಉತ್ಪಾದಿಸಬಹುದಾಗಿದೆ. ಈ ಕುರಿತಂತೆ ಸಂಶೋಧನೆ ನಡೆಸಲಾಗಿದೆ. ದೇಶದ ಜನರ ಮೂತ್ರವನ್ನು ಸಂಗ್ರಹಿಸಿದಲ್ಲಿ ವಿದೇಶದಿಂದ ರಸಗೊಬ್ಬರ ಆಮದು ನಿಲ್ಲಿಸಬಹುದು ಎಂದರು.

ಜೈವಿಕ ಇಂಧನಗಳನ್ನು ನೈಸರ್ಗಿಕ ತ್ಯಾಜ್ಯದಿಂದ ಹೇಗೆ ಪಡೆಯಬಹುದು ಎಂಬುದರ ಬಗ್ಗೆ ಗಡ್ಕರಿ ಉದಾಹರಣೆ ನೀಡಿದರು. ಈ ಹಿಂದೆ 'ನಾನು ವಿಮಾನ ನಿಲ್ದಾಣದಲ್ಲಿ ಮೂತ್ರ ಸಂಗ್ರಹಿಸುವಂತೆ ಹೇಳಿದ್ದೆ. ಆದರೆ ಅದನ್ನು ಯಾರೂ ಕೇಳಿಸಿಕೊಳ್ಳಲಿಲ್ಲ' ಎಂದು ತಿಳಿಸಿದರು.
ಮನುಷ್ಯನ ತಲೆ ಕೂದಲು ಬಳಸಿ ಅಮೈನೋ ಆಸಿಡ್ ಉತ್ಪಾದನೆ ಮಾಡಲಾಗುತ್ತದೆ. ನಾಗಪುರದಲ್ಲಿ ಜಾಸ್ತಿ ಕೂದಲು ಸಿಗದ ಕಾರಣ, ತಿರುಪತಿಯಿಂದ ಐದು ಟ್ರಕ್ ಕೂದಲು ತರುತ್ತೇವೆ ಎಂದರು. ತಲೆಕೂದಲಿನ ಪ್ರಯೋಗ ಯಶಸ್ವಿಯಾದ ನಂತರದಲ್ಲಿ ಅಮೈನೋ ಆಸಿಡ್ ಉತ್ಪಾದನೆ ಶೇ. 25 ರಷ್ಟು ಹೆಚ್ಚಾಗಿದೆ. ಅಮೈನೊ ಆಸಿಡ್ ವಿದೇಶಕ್ಕೆ ರಫ್ತು ಮಾಡುತ್ತಿದ್ದೇವೆ. ದುಬೈನಿಂದ ಜೈವಿಕ ಇಂಧನಕ್ಕಾಗಿ 180 ಕಂಟನೈರ್ ಗಳು ಸಾಗಲಿವೆ ಎಂದರು. ಉದ್ಯಮಿಯೂ ಆಗಿರುವ ನಿತಿನ್ ಗಡ್ಕರಿ ಅವರು ಪೂರ್ತಿ ಗ್ರೂಪ್ ಆಫ್ ಇಂಡಸ್ಟ್ರೀಯ ಮಾಲೀಕರಾಗಿದ್ದಾರೆ.(ಪಿಟಿಐ)
-
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಮಾ.30ರಂದು ನಡೆಯಬೇಕಿದ್ದ SSLC ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಕಾರಣವೇನು? -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Viral Videlo: 2 ಗಂಟೆ ಸ್ಟ್ಯಾಚ್ಯೂ ರೀತಿ ನಿಂತ ಯುವಕ ವಿಡಿಯೋ ವೈರಲ್, ಭಾರತಕ್ಕೂ ಬಂತಾ ಅಮೆರಿಕದ ಜಾಂಬಿ ಡ್ರಗ್ಸ್ -
ಉದ್ಯೋಗ ಸಂದರ್ಶನ ಮಾಡಲು ಹೋದ CEOಗೆ ಬೆವರಿಳಿಸಿದ ಅಭ್ಯರ್ಥಿ, Viral ಆಯ್ತು ವಿಚಿತ್ರ ಕಥೆ -
Summer Camp: ನಟನ ಮೈಸೂರು ಸಂಸ್ಥೆಯಿಂದ ಮಕ್ಕಳಿಗೆ ಬೇಸಿಗೆ ಶಿಬಿರ 'ರಜಾಮಜಾ' ಆಯೋಜನೆ -
115 ರೂಪಾಯಿಯ ಪೊಂಗಲ್ಗೆ 273 ರೂ. ಬಿಲ್: ಸ್ವಿಗ್ಗಿ ವಿರುದ್ಧ ಸುಮಲತಾ ಅಂಬರೀಷ್ ಆಕ್ರೋಶ -
Sri Rama Navami 2026: ಶ್ರೀ ರಾಮನವಮಿ; ಧರ್ಮದ ಜಯದ ದಿವ್ಯ ಸಂದೇಶ












Click it and Unblock the Notifications