ರಾಹುಲ್ ರನ್ನು 'ದ್ವೇಷದ ವ್ಯಾಪಾರಿ' ಎಂದು ಹೀಗಳೆದ ಕೇಂದ್ರ ಸಚಿವ

ಯಾವುದೇ ಅಪರಾಧ ನಡೆದ ಪ್ರತಿ ಸಲವು ಖುಷಿಯಿಂದ ನೆಗೆದಾಡುವುದನ್ನು ನಿಲ್ಲಿಸಿ ಎಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಟಾಂಗ್ ನೀಡಿ, ಟ್ವೀಟ್ ಮಾಡಿದ್ದಾರೆ.

ಗುಂಪು ಹಲ್ಲೆಯ ಸಂತ್ರಸ್ತ ರಕ್ಬರ್ ಖಾನ್ ನನ್ನು ಆರು ಕಿಲೋಮೀಟರ್ ದೂರದ ಆಸ್ಪತ್ರೆಗೆ ಕರೆದೊಯ್ಯಲು ಅಲ್ವಾರ್ ನ ಪೊಲೀಸರು ಮೂರು ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಏಕೆ? ಎಂದು ರಾಹುಲ್ ಗಾಂಧಿ ಮಾಡಿದ ಟ್ವೀಟ್ ಗೆ ಪ್ರತಿಯಾಗಿ ಗೋಯಲ್ ಹೀಗೆ ಉತ್ತರಿಸಿದ್ದಾರೆ.

ಸರಕಾರವು ಈಗಾಗಲೇ ಕಠಿಣ ಹಾಗೂ ಪ್ರಾಮಾಣಿಕ ಕ್ರಮ ತೆಗೆದುಕೊಳ್ಳುವ ಬಗ್ಗೆ ಭರವಸೆ ನೀಡಿದೆ. ನೀವು ಸಮಾಜವನ್ನು ಎಲ್ಲ ರೀತಿಯಲ್ಲೂ ವಿಭಜಿಸುತ್ತಿದ್ದೀರಿ. ಅದು ಕೂಡ ಚುನಾವಣೆ ಲಾಭಕ್ಕಾಗಿ. ಆ ಮೇಲೆ ಮೊಸಳೆ ಕಣ್ಣೀರು ಬೇರೆ ಸುರಿಸುತ್ತೀರಿ ಎಂದು ಪಿಯೂಷ್ ಗೋಯಲ್ ಹೇಳಿದ್ದಾರೆ.

Stop jumping with joy every time a crime happens, Rahul Gandhi: Piyush Goyal

ಈ ವರೆಗೆ ಆಗಿದ್ದು ಸಾಕು. ನೀವೊಬ್ಬ ದ್ವೇಷದ ವ್ಯಾಪಾರಿ (ಮರ್ಚೆಂಟ್ ಆಫ್ ಹೇಟ್) ಎಂದು ಪಿಯೂಷ್ ಗೋಯಲ್ ತಮ್ಮ ಟ್ವೀಟ್ ನಲ್ಲಿ ಕಿಡಿ ಕಾರಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+