
ಛತ್ರಪತಿ ಶಿವಾಜಿ ಬಗ್ಗೆ ಹೇಳಿಕೆ: ರಾಜ್ಯಪಾಲ ಕೋಶ್ಯಾರಿ ಪರ ದೇವೇಂದ್ರ ಫಡ್ನವೀಸ್ ಪತ್ನಿ ಬ್ಯಾಟಿಂಗ್
ಮುಂಬೈ ನವೆಂಬರ್ 25: ಛತ್ರಪತಿ ಶಿವಾಜಿ ಕುರಿತಾದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ವಿವಾದಾತ್ಮಕ ಹೇಳಿಕೆಗೆ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್ ಅವರು ಬೆಂಬಲಕ್ಕೆ ನಿಂತಿದ್ದಾರೆ. ಇದು ರಾಜ್ಯ ಸರ್ಕಾರದ ಸಂದಿಗ್ಧತೆಯನ್ನು ಇನ್ನಷ್ಟು ಹದಗೆಡಿಸುವ ಸಾಧ್ಯತೆಯಿದೆ.
"ರಾಜ್ಯಪಾಲರು ನನಗೆ ವೈಯಕ್ತಿಕವಾಗಿ ತಿಳಿದಿದ್ದಾರೆ. ಅವರು ಮಹಾರಾಷ್ಟ್ರಕ್ಕೆ ಬಂದ ನಂತರ ಮರಾಠಿ ಕಲಿತರು. ಅವರು ಮರಾಠಿಗಳನ್ನು ಪ್ರೀತಿಸುತ್ತಾರೆ. ಇದನ್ನು ನಾನೇ ಅನುಭವಿಸಿದ್ದೇನೆ. ಆದರೆ ಅವರು ಏನೋ ಹೇಳಿದರೆ ಅದಕ್ಕೆ ಬೇರೆ ವ್ಯಾಖ್ಯಾನವನ್ನು ನೀಡುವುದು ಹಲವು ಬಾರಿ ಸಂಭವಿಸಿದೆ. ಆದರೆ ಅವರು ಮರಾಠಿಗರನ್ನು ಹೃದಯದಲ್ಲಿ ಇಟ್ಟುಕೋಮಡಿದ್ದಾರೆ. ಅವರ ಹೆಳಿಕೆಯನ್ನು ತಿರುಚಲಾಗಿದೆ" ಎಂದು ಅಮೃತಾ ಫಡ್ನವಿಸ್ ಸುದ್ದಿಗಾರರಿಗೆ ತಿಳಿಸಿದರು.
ಮರಾಠರ ಐಕಾನ್ ಛತ್ರಪತಿ ಶಿವಾಜಿ ಕುರಿತು ರಾಜ್ಯಪಾಲ ಕೊಶ್ಯಾರಿ ಅವರ ಹೇಳಿಕೆಯು ರಾಜಕೀಯ ವಲಯದಲ್ಲಿ ವೈಮನಸ್ಸು ಉಂಟು ಮಾಡಿದೆ. ಆದರೀಗ ಅಮೃತಾ ಫಡ್ನವಿಸ್ ಅವರ ಕಾಮೆಂಟ್‌ಗಳು ಆಶ್ಚರ್ಯ ಮೂಡಿಸಿದೆ.
ಛತ್ರಪತಿ ಶಿವಾಜಿ ಕುರಿತಾದ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ವಿವಾದಾತ್ಮಕ ಹೇಳಿಕೆಯ ಆಡಳಿತಾರೂಢ ಬಿಜೆಪಿ- ಶಿವಸೇನಾ (ಏಕನಾಥ್ ಶಿಂಧೆ ಬಣ) ನಡುವೆ ವೈಮನಸ್ಸಿಗೆ ಕಾರಣವಾಗಿದ್ದು, ಅದನ್ನು ಸರಿಪಡಿಸಲು ಬಿಜೆಪಿ ಪ್ರಯತ್ನಿಸುತ್ತಿದೆ.
ರಾಜ್ಯಪಾಲರು ಹೇಳಿದ್ದೇನು?
ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ನಿತಿನ್ ಗಡ್ಕರಿ ಮತ್ತು ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಈ ಹೇಳಿಕೆ ನೀಡಿದ್ದರು. "ಈ ಹಿಂದೆ, ನಿಮ್ಮ ಆದರ್ಶಪ್ರಾಯರು ಯಾರು ಎಂದರೆ ಜವಾಹರಲಾಲ್ ನೆಹರು, ಸುಭಾಷ್ ಚಂದ್ರ ಬೋಸ್ ಮತ್ತು ಮಹಾತ್ಮ ಗಾಂಧಿ ಎಂಬ ಹೆಸರು ಬರುತ್ತಿದ್ದವು. ಮಹಾರಾಷ್ಟ್ರದಲ್ಲಿ ನೀವು ಎಲ್ಲಿಯೂ ನೋಡಬೇಕಾದ ಅಗತ್ಯವಿಲ್ಲ, ಎಲ್ಲ ಕಡೆಯೂ ಅನೇಕ ಐಕಾನ್‌ಗಳಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜ್ ಗತಕಾಲದ ಐಕಾನ್ ಆಗಿದ್ದರು. ಈಗ ಬಿಆರ್ ಅಂಬೇಡ್ಕರ್ ಮತ್ತು ನಿತಿನ್ ಗಡ್ಕರಿ ಇದ್ದಾರೆ" ಎಂದು ಮಹಾರಾಷ್ಟ್ರ ರಾಜ್ಯಪಾಲ ಹೇಳಿದ್ದರು.