ಕೊವಿಡ್ ನೆಪದಲ್ಲಿ ಸೈಬರ್ ದಾಳಿ: 20 ಲಕ್ಷ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ
ನವದೆಹಲಿ, ಜೂನ್ 23: ಕೊವಿಡ್ 19 ಪರೀಕ್ಷೆ ನೆಪದಲ್ಲಿ ಹ್ಯಾಕರ್‌ಗಳಿಂದ ಇ-ಮೇಲ್ ಬರಬಹುದು ಯಾವುದೇ ಕಾರಣಕ್ಕೂ ಅದರಲ್ಲಿರುವ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ತನ್ನ ಗ್ರಾಹಕರಿಗೆ ಎಸ್‌ಬಿಐ ಎಚ್ಚರಿಕೆ ನೀಡಿದೆ.
Recommended Video
ಕೊವಿಡ್ 19 ಇ-ಮೇಲ್ ಹೆಸರಿನಲ್ಲಿ ದೇಶಾದ್ಯಂತ ಸೈಬರ್ ವಂಚನೆ ನಡೆಯಬಹುದು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ಸಂದೇಶ ರವಾನಿಸಿದ ಬೆನ್ನಲ್ಲೇ ಎಸ್‌ಬಿಐ ಕೂಡ ತನ್ನ ಗ್ರಾಹಕರಿಗೆ ಎಚ್ಚರಿಕೆಯಿಂದ ಇರುವಂತೆ ಹೇಳಿದೆ.
ಭಾರತೀಯರ ಸಾಮಾಜಿಕ ಜಾಲತಾಣಗಳ ಖಾತೆ ಹಾಗೂ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದ ಖಾತೆಗಳನ್ನು ಗುರಿಯಾಗಿಸಿಕೊಂಡು ಕೆಲವರು ಈ ರೀತಿಯ ಸೈಬರ್ ವಂಚನೆಯ ಇ-ಮೇಲ್ ಅಥವಾ ಸಂದೇಶಗಳನ್ನು ಕಳುಹಿಸಬಹುದು ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.
ಕೊವಿಡ್-19 ಮಹಾಮಾರಿಗೆ ಸಂಬಂಧಿಸಿದ ಸರ್ಕಾರಿ ಸಂದೇಶದ ಸೋಗಿನಲ್ಲಿ ದುಷ್ಕರ್ವಿುಗಳು ವೈಯಕ್ತಿಕ ದತ್ತಾಂಶ ಹಾಗೂ ಹಣಕಾಸಿನ ವಿವರಗಳನ್ನು ಕದಿಯುವ ಸಾಧ್ಯತೆಯಿದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ದುರುದ್ದೇಶಪೂರಿತ ಇ-ಮೇಲ್ ಬರುವ ಸಾಧ್ಯತೆಯಿದೆ ಎಂದು ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ (ಸಿಇಆರ್ಟಿ-ಇನ್) ಟ್ವೀಟ್ ಮಾಡಿದೆ.

ದುರುದ್ದೇಶಪೂರಿತ ಇ-ಮೇಲ್
ವಂಚಕರು ಸರ್ಕಾರಿ ಪ್ರಾಯೋಜಿತ ಕೊವಿಡ್-19 ಸ್ಥಳೀಯ ನಿರ್ವಹಣಾ ಅಧಿಕಾರಿಗಳ ಹೆಸರಿನಲ್ಲಿ ದುರುದ್ದೇಶಪೂರಿತ ಇ ಮೇಲ್ಗಳನ್ನು ಕಳಿಸುವ ಸಾಧ್ಯತೆಯಿದೆ.

ಹುಸಿ ವೆಬ್‌ಸೈಟ್‌ಗಳಿಗೆ ಭೇಟಿ
ಇ ಮೇಲ್ ಪಡೆದವರು ಹುಸಿ ವೆಬ್‌ಸೈಟ್‌ಗಳಿಗೆ ಭೇಟಿ ನೀಡುವ ರೀತಿಯಲ್ಲಿ ಅದನ್ನು ರೂಪಿಸಲಾಗಿರುತ್ತದೆ. ಜಾಲತಾಣಗಳಿಗೆ ಭೇಟಿ ಕೊಟ್ಟವರು ಫೈಲ್ಗಳನ್ನು ಡೌನ್ಲೋಡ್ ಮಾಡಿಕೊಳ್ಳುವಂತೆ ಅಥವಾ ವೈಯಕ್ತಿಕ ಮತ್ತು ಹಣಕಾಸಿನ ಮಾಹಿತಿಗಳನ್ನು ನಮೂದಿಸುವಂತೆ ಅವುಗಳ ವಿನ್ಯಾಸವಿರುತ್ತದೆ ಎಂದು ಸಿಇಆರ್ಟಿ-ಇನ್ ಹೇಳಿದೆ.

ವಿಶ್ವಾಸಾರ್ಹ ಸಂಸ್ಥೆಗಳ ಸೋಗಿನಲ್ಲಿ ದಾಳಿ
ವಿಶ್ವಾಸಾರ್ಹ ಸಂಸ್ಥೆಗಳ ಸೋಗಿನಲ್ಲಿ ಸೈಬರ್ ದಾಳಿಗಳು ನಡೆಯುತ್ತವೆ. ಇ ಮೇಲ್ ಅಥವಾ ಟೆಕ್ಸ್ಟ್ ಸಂದೇಶಗಳನ್ನು ತೆರೆಯುವಂತೆ ಜನರನ್ನು ವಂಚಿಸುತ್ತವೆ. ಅದನ್ನು ತೆರೆದಾಗ ಮಾಲ್ವೇರ್, ಸಿಸ್ಟಂ ಫ್ರೀಜ್ ಇನ್ಸಾಟಲ್ ಮಾಡುವ ಅಥವಾ ಸೂಕ್ಷ್ಮ ಮಾಹಿತಿ ಹೊರಗೆಡಹುವಂಥ ಲಿಂಕ್ಗಳಿಗೆ ಒಯ್ಯುತ್ತದೆ ಎಂದು ವಿವರಿಸಿದೆ. ಸಿಇಆರ್ಟಿ-ಇನ್ ಸೈಬರ್ ದಾಳಿ ಅಪಾಯಗಳಿಂದ ರಕ್ಷಿಸುವ ಸಂಸ್ಥೆಯಾಗಿದ್ದು, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದಡಿ ಕಾರ್ಯ ನಿರ್ವಹಿಸುತ್ತದೆ.

20 ಲಕ್ಷ ವಿಳಾಸ
ಫಿಶಿಂಗ್ ವಂಚಕರ ಬಳಿ 20 ಲಕ್ಷಕ್ಕೂ ಹೆಚ್ಚು ವೈಯಕ್ತಿಕ/ನಾಗರಿಕ ಇ ಮೇಲ್ ಐಡಿಗಳಿವೆ ಎಂದು ಹೇಳಲಾಗಿದೆ. ಉಚಿತವಾಗಿ ಕೋವಿಡ್-19 ಪರೀಕ್ಷೆ ನಡೆಸಲಾಗುವುದೆಂದು ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ ಮತ್ತು ಅಹಮದಾಬಾದ್ನ ನಿವಾಸಿಗಳಿಗೆ ಇ ಮೇಲ್ ಕಳಿಸಲು ಅವರು ಯೋಜಿಸಿದ್ದಾರೆ ಎಂದು ತಿಳಿದು ಬಂದಿದೆ. ಮೇಲ್ ಸ್ವೀಕರಿಸಿದ ಜನರು ಮಾಹಿತಿ ಒದಗಿಸುವ ಪ್ರೇರಣೆಗೆ ಒಳಗಾಗುವಂತೆ ಸಂದೇಶವಿರುತ್ತದೆ ಎಂದು ಸಿಇಆರ್ಟಿ-ಇನ್ ವಿವರಿಸಿದೆ. ಅಸಹಜ ಚಟುವಟಿಕೆ ಅಥವಾ ಸೈಬರ್ ದಾಳಿಯ ಯಾವುದೇ ವಿಚಾರವನ್ನು ತಕ್ಷಣವೇ ಇನ್ಸಿಡೆಂಟ್ಸಿಇಆರ್ಟಿ-ಇನ್ಗೆ ವರದಿ ಮಾಡುವಂತೆ ಕೋರಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications