ಭಾರತದ ಪ್ರಮುಖ ದೇವಾಲಯಗಳಲ್ಲಿ ಕಾಲ್ತುಳಿತ ದುರಂತ, 2000ರ ನಂತರ ಸರಣಿ ದುರಂತ!
ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 6 ಜನ ಭಕ್ತಾದಿಗಳು ಸಾವನ್ನಪ್ಪಿದ್ದಾರೆ. 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ತಿರುಪತಿ ದೇವಸ್ಥಾನದ ವೈಕುಂಠ ದ್ವಾರ ದರ್ಶನಕ್ಕೆ ಟೋಕನ್ ಪಡೆದುಕೊಳ್ಳುವಾಗ ಈ ದುರಂತ ಸಂಭವಿಸಿದೆ. 7 ಲಕ್ಷ ಜನ ಭಕ್ತಾದಿಗಳು ಸೇರಲಿದ್ದಾರೆ ಎಂದು ಮೊದಲೇ ಅಂದಾಜಿಸಲಾಗಿತ್ತು.
ಆದರೆ, ಅದಕ್ಕೆ ತಕ್ಕಂತೆ ಸಿದ್ಧತೆ ಮಾಡಿಕೊಳ್ಳದೆ ಇರುವುದು ಸೇರಿದಂತೆ ಏಕಾಏಕಿ ನಿರೀಕ್ಷೆಗೂ ಮೀರಿ ಜನ ಬಂದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ದೇವಾಲಯ ಹಾಗೂ ಹಿಂದೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಹೆಚ್ಚು ಜನ ಸೇರಿ, ಸೂಕ್ತ ಮುಂಜಾಗ್ರತೆ ಹಾಗೂ ವ್ಯವಸ್ಥೆ ಮಾಡಿಕೊಳ್ಳದೆ ಇರುವುದರಿಂದ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. 2000 ನಂತರ ಸಂಭವಿಸಿದ ಪ್ರಮುಖ ದುರಂತಗಳ ವಿವರ ಇಲ್ಲಿದೆ.

ದೇಶದಲ್ಲಿ ಹಲವು ಪ್ರಮುಖ ದೇವಾಲಯಗಳಿವೆ. ಈ ದೇವಾಲಯಗಳಿಗೆ ನಿತ್ಯವೂ ಲಕ್ಷಾಂತರ ಜನ ಬರುತ್ತಾರೆ. ಆದರೆ, ವಿಶೇಷ ಸಂದರ್ಭದಲ್ಲಿ ನಿರೀಕ್ಷೆಗೂ ಮೀರಿ ಜನ ಬರುತ್ತಾರೆ. ಈ ಬಾರಿ ತಿರುಪತಿಯಲ್ಲೂ ಅದೇ ರೀತಿ ಆಗಿದೆ. ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದಕ್ಕೆ ಟೋಕನ್ ಪಡೆಯುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
* 2003ರ ಆಗಸ್ಟ್ 27: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ಕುಂಭಮೇಳ ಪವಿತ್ರ ಸ್ನಾನವನ್ನು ಲಕ್ಷಾಂತರ ಜನ ಮಾಡುತ್ತಿದ್ದರು. ಈ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದ 39 ಜನರು ಸಾವನ್ನಪ್ಪಿದರು. ಅಲ್ಲದೆ ಈ ದುರಂತದಲ್ಲಿ 140ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

* 2005ರ ಜನವರಿ 25: ಮೊದಲ ದುರಂತ ಸಂಭವಿಸಿದ ಎರಡೇ ವರ್ಷದಲ್ಲಿ ಮಹಾರಾಷ್ಟ್ರದಲ್ಲಿ ಮತ್ತೊಂದು ದುರಂತ ಸಂಭವಿಸಿತ್ತು. ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿರುವ ಮಂಧಾರದೇವಿ ಎನ್ನುವ ದೇವಸ್ಥಾನದಲ್ಲಿ ವಾರ್ಷಿಕ ತೀರ್ಥಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ 340 ಕ್ಕೂ ಹೆಚ್ಚು ಭಕ್ತರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಅಲ್ಲದೆ ಈ ದುರಂತದಲ್ಲಿ ನೂರಾರು ಜನರು ಗಾಯಗೊಂಡಿದ್ದರು.
* 2008 ಆಗಸ್ಟ್ 3: ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿರುವ ನೈನಾ ದೇವಿ ದೇವಸ್ಥಾನದಲ್ಲಿ ಬಂಡೆ ಕುಸಿದಿದೆ ಎನ್ನುವ ವದಂತಿಯಿಂದ ಕಾಲ್ತುಳಿ ಸೃಷ್ಟಿಯಾಗಿತ್ತು. ಈ ದುರಂತದಲ್ಲಿ 162 ಜನ ಸಾವನ್ನಪ್ಪಿದ್ದರು. ಅಲ್ಲದೆ 47 ಜನ ಗಾಯಗೊಂಡಿದ್ದರು.
* 2008 ಸೆಪ್ಟೆಂಬರ್ 30: ರಾಜಸ್ಥಾನದ ಜೋಧ್‌ಪುರ ನಗರದ ಚಾಮುಂಡಾ ದೇವಿ ದೇವಸ್ಥಾನದಲ್ಲಿ ಭಾರೀ ದುರಂತ ಸಂಭವಿಸಿತ್ತು. ಈ ದುರಂತ ಸಹ ವದಂತಿಯಿಂದಲೇ ಆಗಿತ್ತು. ಈ ದೇವಸ್ಥಾನದಲ್ಲಿ ಬಾಂಬ್ ಸ್ಫೋಟವಾಗಿದೆ ಎನ್ನುವ ವದಂತಿಯಿಂದ ಕಾಲ್ತುಳಿ ಆಗಿತ್ತು. ಅದರಲ್ಲಿ 250 ಜನ ಭಕ್ತರು ಸಾವನ್ನಪ್ಪಿದ್ದರೆ, 60ಕ್ಕೂ ಹೆಚ್ಚು ಜನರಿಗೆ ಗಾಯವಾಗಿತ್ತು.
* 2010 ಮಾರ್ಚ್ 4: ಉತ್ತರ ಪ್ರದೇಶದ ಪ್ರತಾಪಗಢ ಎನ್ನುವ ಜಿಲ್ಲೆಯ ರಾಮ ಜಾನಕಿ ದೇವಸ್ಥಾನದಲ್ಲಿ ಸಣ್ಣ ವಿಷಯಕ್ಕೆ ದುರಂತ ಸಂಭವಿಸಿತ್ತು. ಸ್ವಯಂ ಘೋಷಿತ ದೇವಮಾನವರೊಬ್ಬರು ಉಚಿತ ಬಟ್ಟೆ ಹಾಗೂ ಆಹಾರ ಸಂಗ್ರಹಿಸುವ ಸಂದರ್ಭದಲ್ಲಿ ಈ ಕಾಲ್ತುಳಿತ ದುರಂತದಲ್ಲಿ 63 ಜನರು ಮೃತಪಟ್ಟಿದ್ದರು.
* 2011 ನವೆಂಬರ್ 8: ಹರಿದ್ವಾರದ ಗಂಗಾ ನದಿಯ ದಡದ ಹರ್ - ಕಿ - ಪೌರಿ ಘಾಟ್ ಎನ್ನುವಲ್ಲಿ ಕಾಲ್ತುಳಿತ ಸಂಭವಿಸಿತ್ತು. ಇದರಲ್ಲಿ ಅಂದಾಜು 20ಕ್ಕೂ ಹೆಚ್ಚು ಜನ ಮೃತಪಟ್ಟಿದ್ದರು.
* 2012 ನವೆಂಬರ್ 19: ಪಾಟ್ನಾದ ಗಂಗಾ ನದಿಯ ಅದಾಲತ್ ಘಾಟ್ ಎನ್ನುವ ಪ್ರದೇಶದಲ್ಲಿ ಛತ್ ಪೂಜೆ ಮಾಡುವಾಗ ಅಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಸೇತುವೆ ಕುಸಿತದಿಂದ 20ಕ್ಕೂ ಹೆಚ್ಚು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದರು.
* 2013 ಅಕ್ಟೋಬರ್ 13: ಮಧ್ಯಪ್ರದೇಶದ ದಾಟಿಯಾದ ರತನ್‌ಗಢ ದೇವಸ್ಥಾನದ ವ್ಯಾಪ್ತಿಯಲ್ಲಿ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 115 ಜನ ಮೃತಪಟ್ಟಿದ್ದರು. ಅಲ್ಲದೆ 100ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದರು. ಈ ದುರಂತ ಸಹ ವದಂತಿಯಿಂದಲೇ ಸಂಭವಿಸಿತ್ತು.
* 2015 ಜುಲೈ 14: ಆಂಧ್ರಪ್ರದೇಶದ ರಾಜಮಂಡ್ರಿಯ ಪುಷ್ಕರಂ ಉತ್ಸವದಲ್ಲಿ ಸಾವಿರಾರು ಜನ ಭಾಗವಹಿಸಿದ್ದರು. ಇಲ್ಲಿನ ಪ್ರಮುಖ ಸ್ನಾನಗೃಹದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 27ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು. ಅಲ್ಲದೆ 20ಕ್ಕೂ ಹೆಚ್ಚು ಜನ ಗಾಯಗೊಂಡರು.
* 2022 ಜನವರಿ 1: ಜಮ್ಮು ಮತ್ತು ಕಾಶ್ಮೀರದ ಪ್ರಸಿದ್ಧ ಮಾತಾ ವೈಷ್ಣೋದೇವಿ ದರ್ಶನಕ್ಕೆಂದು ಸಾವಿರಾರು ಜನ ಭಾಗವಹಿಸಿದ್ದರು. ಅಪಾರ ಸಂಖ್ಯೆ ಜನ ಸೇರಿದ್ದರಿಂದ ನಿಯಂತ್ರಣ ತಪ್ಪಿ ಕಾಲ್ತುಳಿತ ಸಂಭವಿಸಿತ್ತು. ಈ ದುರಂತದಲ್ಲಿ 12 ಜನ ಸಾವನ್ನಪ್ಪಿದ್ದರು.
* 2024 ಆಗಸ್ಟ್ 12: ಬಿಹಾರದ ಬಾಣಾವರ್ ಬೆಟ್ಟದ ಬಾಬಾ ಸಿದ್ಧನಾಥ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿತ್ತು. ಇದರಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications