SSLC Result 2024: ಯಾವುದೇ ಟ್ಯೂಶನ್ ಇಲ್ಲದೆ SSLCಯಲ್ಲಿ 700ಕ್ಕೆ 691 ಅಂಕ ಪಡೆದ ವಿದ್ಯಾರ್ಥಿನಿ-ಹೇಗೆ ಸಾಧ್ಯ?
SSLC Result 2024: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಎಲ್ಲಾ ಸೌಲಭ್ಯಗಳಿದ್ದರೂ ಕೂಡ ಬಹುತೇಕ ವಿದ್ಯಾರ್ಥಿಗಳು ಶಿಕ್ಷಣದಲ್ಲಿ ಹಿಂದುಳಿದಿರುತ್ತಾರೆ. ಹಾಗಂತ ಇವರೇನು ದಡ್ಡರಂತಲ್ಲ, ಇಂತಹವರೇ ಉತ್ತಮ ಸಾಧನೆ ಮಾಡಿದ ಉದಾಹರಣೆಗಳುವೆ. ಇನ್ನು ಕೆಲವು ಶ್ರೀಮಂತರ ಮಕ್ಕಳು ಮಾತ್ರ ಸಂಪೂರ್ಣವಾಗಿ ಪೋಷಕರ ಮೇಲೆಯೇ ಡಿಪೆಂಡ್ ಆಗಿ ಬೇಕಾಬಿಟ್ಟು ಹಣ ಹಾಳು ಮಾಡುತ್ತಾ, ಕೊನೆಗೆ ಜೀವನವನ್ನು ಹಾಳು ಮಾಡಿಕೊಂಡ ಘಟನೆಗಳು ಕೂಡ ನಡೆದಿವೆ. ಇವೆಲ್ಲದರ ನಡುವೆಯೂ ವಿದ್ಯಾರ್ಥಿನಿಯೊಬ್ಬಳು ಯಾವುದೇ ಕೋಚಿಂಗ್, ಟ್ಯೂಷನ್‌ಯಿಲ್ಲದೆ, ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿ ಮಾದರಿಯಾಗಿದ್ದಾಳೆ.
ಯಾವುದೇ ಕೋಚಿಂಗ್, ಟ್ಯೂಶನ್ ಇಲ್ಲದೆ, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿನಿಯೊಬ್ಬಳು 700ಕ್ಕೆ 691 ಅಂಕ ಪಡೆಯುವ ಮೂಲಕ ಪಶ್ಚಿಮ ಬಂಗಾಳ ರಾಜ್ಯಕ್ಕೆ 3ನೇ ರ್‍ಯಾಂಕ್ ಬಂದಿದ್ದಾಳೆ. ಹಾಗಾದರೆ ಇದು ಹೇಗೆ ಸಾಧ್ಯ ಹಾಗೂ ಈ ವಿದ್ಯರ್ಥಿನಿಯ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಈಕೆ ಸರ್ಕಾರಿ ಶಾಲೆಯಲ್ಲಿ ಓದಿದ್ದು, ಎಲ್ಲಾ ಪಠ್ಯಪುಸ್ತಕ ಇಂಗೀಷ್‌ನಲ್ಲಿ ಇರಲಿಲ್ಲ. ಬಂಗಾಳಿ ಭಾಷೆಯಲ್ಲಿರುವ ಕೆಲ ಪಠ್ಯಪುಸ್ತಕವನ್ನು ಇಂಗ್ಲೀಷ್‌ಗೆ ಭಾಷಾಂತರ ಮಾಡಿ ಓದಬೇಕಾದ ಅನಿವಾರ್ಯತೆ ಇತ್ತು. ಖಾಸಗಿಯಾಗಿ ಯಾವುದೇ ಟ್ಯೂಶನ್ ಪಡೆದಿಲ್ಲ. ಬದಲಾಗಿ ಸ್ವಂತ ಪರಿಶ್ರಮದಿಂದ ಛಲದಿಂದ ಪಶ್ಚಿಮ ಬಂಗಾಳದ 10ನೇ ತರಗತಿ ವಿದ್ಯಾರ್ಥಿನಿ ಪುಷ್ಪಿತಾ ಬಸುರಿ 700ಕ್ಕೆ 691 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ 3ನೇ ರ್‍ಯಾಂಕ್ ಪಡೆದು ಮಾದರಿಯಾಗಿರೆ.
ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ಸರ್ಕಾರ ನಡೆಸುವ ಮೊದಲ ಇಂಗ್ಲೀಷ್ ಮಾಧ್ಯಮ ಶಾಲೆಯ ಮೊದಲ ಬ್ಯಾಚ್ ವಿದ್ಯಾರ್ಥಿನಿ ಪುಷ್ಪಿತ ಹೊಸ ಇತಿಹಾಸ ಸೃಷ್ಟಿಸಿ ಇತರರಿಗೆ ಮಾದರಿಯಾಗಿ ಹೊರಹೊಮ್ಮಿದ್ದಾಳೆ. ಬಂಗಾಳಿ ವಿಷಯದಲ್ಲಿ 97, ಇಂಗ್ಲೀಷ್ 99, ಗಣಿತ 98, ಭೌತಶಾಸ್ತ್ರ ವಿಜ್ಞಾನದಲ್ಲಿ 99, ಲೈಫ್ ಸೈನ್ಸ್ 100, ಇತಿಹಾಸ 100, ಭೂಗೋಳಶಾಸ್ತದಲ್ಲಿ 100 ಅಂಕ ಪಡೆದುಕೊಂಡಿದ್ದಾಳೆ.
ವಿದ್ಯಾರ್ಥಿನಿ ಪುಷ್ಪಿತ ಮಾತನಾಡಿ, "ನನಗೆ ಓದಿನಲ್ಲಿ ಆಸಕ್ತಿ ಹೆಚ್ಚು. ಯಾವುದೇ ಟ್ಯೂಶನ್‌ಗೆ ಹೋಗಿಲ್ಲ, ನನ್ನ ಪೋಷಕರು, ಶಾಲೆಯಲ್ಲಿ ಶಿಕ್ಷಕರು ನೆರವು ನೀಡಿದ್ದಾರೆ. ತಾಯಿಯ ಸಹೋದ್ಯೋಗಿಗಳು ಕೂಡ ಮಾರ್ಗದರ್ಶನ ನೀಡಿದ್ದಾರೆ. ಅಲ್ಲದೆ ಬೇರೆ ಬೇರೆ ಪುಸ್ತಕಗಳಿಂದ ನೋಟ್ಸ್ ಬರೆದುಕೊಂಡು ಅಭ್ಯಾಸ ಮಾಡಿದ್ದೇನೆ. ಟ್ಯೂಶನ್ ಪಡೆಯಬೇಕೆಂಬ ಆಸಕ್ತಿ ಇರಲಿಲ್ಲ. ಕಾರಣ ನಾನು ಒಂದು ತರಗತಿ ತಪ್ಪಿಸದೇ ಶಾಲೆಗೆ ಹೋಗಿದ್ದು, ಶಿಕ್ಷಕರು ಹೇಳುವ ಪಾಠಗಳನ್ನು ಸರಿಯಾಗಿ ಆಲಿಸಿ ನೋಟ್ಸ್ ಮಾಡಿಕೊಳ್ಳುತ್ತಿದ್ದೆ. ಇದು ಹೆಚ್ಚು ನನಗರ ಸಹಾಯ ಆಗಿದೆ," ಎಂದರು.
"ನಾನು ಓದುತ್ತಿದ್ದುದು ಇಂಗ್ಲೀಷ್ ಮಾಧ್ಯಮ ಶಾಲೆಯಲ್ಲಿ. ಆದರೆ ಎಲ್ಲಾ ಪಠ್ಯಗಳು ಇಂಗ್ಲೀಷ್‌ನಲ್ಲಿ ಇರಲಿಲ್ಲ. ಆದ್ದರಿಂದ ಬಂಗಾಳಿ ಭಾಷೆಯಲ್ಲಿ ನೀಡಿರುವ ಪುಸ್ತಕಗಳನ್ನೇ ಭಾಷಾಂತರ ಮಾಡಿಕೊಂಡು ಓದುತ್ತಿದ್ದಳು. ಪ್ರತಿ ದಿನ ವಿದ್ಯಾಭ್ಯಾಸಕ್ಕಾಗಿ ಪರಿಶ್ರಮ ಪಟ್ಟು ನೋಟ್ಸ್ ಮಾಡಿಕೊಂಡು ಓದಿದ್ದಾಳೆ. ಜೊತೆಗೆ ಶಿಕ್ಷಕರು ಉತ್ತಮ ಸಹಕಾರ ನೀಡಿದ್ದಾರೆ," ಎಂದು ವಿದ್ಯಾರ್ಥಿನಿ ಪುಷ್ಪಿತಾ ತಾಯಿ ಹೇಳಿದರು ಅಂತಾ ಸುವರ್ಣ ನ್ಯೂಸ್ ಕನ್ನಡ ವರದಿ ಮಾಡಿದೆ.












Click it and Unblock the Notifications