ಸೇನೆ ಮಾಹಿತಿ ಸಂಗ್ರಹಿಸುತ್ತಿದ್ದ ಪಾಕ್ ಗೂಢಚಾರ ಬಂಧನ
ಪಾಕಿಸ್ತಾನದ ಗೂಢಚಾರ ಬೋಧರಾಜ್ ನನ್ನು ಬಂಧಿಸಿದ ಪೊಲೀಸರಿಗೆ ಪಾಕಿಸ್ತಾನದ ಎರಡು ಸಿಮ್ ಕಾರ್ಡ್, ಸೇನೆ ನಿಯೋಜನೆಯ ಮಾಹಿತಿಯಿರುವ ಮ್ಯಾಪ್, ಮೊಬೈಲ್ ಫೋನ್ ಗಳು ಹಾಗೂ ಮೆಮೊರಿ ಚಿಪ್ ದೊರೆತಿವೆ.
ಶ್ರೀನಗರ, ಅಕ್ಟೋಬರ್ 22: ಪಾಕಿಸ್ತಾನದ ಗೂಢಚಾರನೊಬ್ಬನನ್ನು ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಬಂಧಿಸಲಾಗಿದೆ. ಭಾರತೀಯ ಸೇನೆ ನಿಯೋಜನೆಯ ಮಾಹಿತಿ ಇದ್ದ ನಕ್ಷೆ ಆತನ ಬಳಿ ಪತ್ತೆಯಾಗಿದೆ. ಬೋಧರಾಜ್ ಬಂಧಿತ. ಜೆರ್ದಾ ಗ್ರಾಮದ ಬಳಿ ಶನಿವಾರ ವಶಕ್ಕೆ ಪಡೆಯಲಾಗಿದೆ.
ಸೇನಾ ಗುಪ್ತಚರರಿಂದ ದೊರೆತ ಮಾಹಿತಿ ಆಧರಿಸಿ, ಜಮ್ಮು-ಕಾಶ್ಮೀರದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಗಡಿ ಪ್ರದೇಶವಾದ ರಾಮ್ ಘರ್ ನಲ್ಲಿ ಕಾರ್ಯಾಚರಣೆ ನಡೆದಿದೆ. ಗೂಢಚಾರ ಭಾರತೀಯ ಸೇನೆಯ ಬಗ್ಗೆ ಪ್ರಮುಖ ಮಾಹಿತಿಗಳನ್ನು ಕಲೆ ಹಾಕಿ, ಅದನ್ನು ಪಾಕಿಸ್ತಾನಕ್ಕೆ ರವಾನಿಸುವುದಕ್ಕೆ ನೇಮಿಸಲಾಗಿದೆ ಎಂಬ ಸಂಗತಿ ಸೇನಾ ಗುಪ್ತಚರರು ಪತ್ತೆ ಹಚ್ಚಿದ್ದಾರೆ.['ಪಾಕ್ ಸೇನಾ ನೆರವು ನೀಡಿದರೆ ಉಪಖಂಡದ ನಕ್ಷೆಯೇ ಬದಲು']

ಭದ್ರತಾ ಪಡೆಗಳ ನಿಯೋಜನೆ ಮಾಹಿತಿಯನ್ನು ಕಳಿಸಿದ್ದಾನೆ ಎಂದು ಸೇನಾ ಗುಪ್ತಚರ ಅಧಿಕಾರಿ ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ಪೊಲೀಸರು ಆತನ ಮೇಲೆ ಕಣ್ಗಾವಲು ಇರಿಸಿದ್ದರು. ಅತನ ಚಲನವಲನ ಅನುಮಾನಾಸ್ಪದವಾಗಿತ್ತು. ಬಂಧಿಸುವ ವೇಳೆಯಲ್ಲಿ ಬೋಧರಾಜ್ ತಪ್ಪಿಸಿಕೊಳ್ಳುವುದಕ್ಕೆ ಯತ್ನಿಸಿದ್ದಾನೆ.[ಪಾಕ್ ನ 7 ಸೈನಿಕರ ಸಾವು ಅಂದಿದೆ ಬಿಎಸ್ ಎಫ್, ಇಲ್ಲ ಅಂತಿದೆ ಪಾಕ್]
ಆತನನ್ನು ಬಂಧಿಸಿದ ಪೊಲೀಸರಿಗೆ ಪಾಕಿಸ್ತಾನದ ಎರಡು ಸಿಮ್ ಕಾರ್ಡ್, ಸೇನೆ ನಿಯೋಜನೆಯ ಮಾಹಿತಿಯಿರುವ ಮ್ಯಾಪ್, ಮೊಬೈಲ್ ಫೋನ್ ಗಳು ಹಾಗೂ ಮೆಮೊರಿ ಚಿಪ್ ದೊರೆತಿವೆ.












Click it and Unblock the Notifications