Breaking: ಸ್ಪೈಸ್‌ಜೆಟ್ ಸಂಸ್ಥೆಗೆ 789 ಕೋಟಿ ನಷ್ಟ; CFO ಸಂಜೀವ್ ತನೇಜಾ ರಾಜೀನಾಮೆ
ನವದೆಹಲಿ, ಸೆಪ್ಟೆಂಬರ್ 01: ಸ್ಪೈಸ್‌ಜೆಟ್ 789 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ದಾಖಲಿಸಿದ ಬೆನ್ನಲ್ಲೇ ಏರ್‌ಲೈನ್‌ನ ಮುಖ್ಯ ಹಣಕಾಸು ಅಧಿಕಾರಿ ಸಂಜೀವ್ ತನೇಜಾ ಬುಧವಾರ ರಾಜೀನಾಮೆ ನೀಡಿದ್ದಾರೆ.
ಆಗಸ್ಟ್ 31 ರಿಂದ ಜಾರಿಗೆ ಬರುವಂತೆ ತನ್ನ ಮುಖ್ಯ ಹಣಕಾಸು ಅಧಿಕಾರಿ ರಾಜೀನಾಮೆ ನೀಡಿದ್ದಾರೆ ಎಂದು ಸ್ಪೈಸ್ ಜೆಟ್ ನಿಯಂತ್ರಕ ಸಂಸ್ಥೆಯು ತಿಳಿಸಿದೆ. ಸ್ಪೈಸ್‌ಜೆಟ್ ಏರ್‌ಲೈನ್ ಜೂನ್ 30, 2022ಕ್ಕೆ ಕೊನೆಗೊಳ್ಳುವ ಈ ತ್ರೈಮಾಸಿಕದಲ್ಲಿ 789 ಕೋಟಿ ರೂಪಾಯಿ ನಿವ್ವಳ ನಷ್ಟವನ್ನು ಅನುಭವಿಸಿರುವುದರ ಕುರಿತು ವರದಿ ಆಗಿದೆ.
ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ 729 ಕೋಟಿ ರೂಪಾಯಿ ನಷ್ಟಕ್ಕೆ ಹೋಲಿಸಿ ನೋಡಲಾಗಿದೆ. ಈ ವೇಳೆ ವ್ಯಾಪಾರ ಇಂಧನ ಬೆಲೆ ಮತ್ತು ರೂಪಾಯಿ ಕುಸಿತದ ಪ್ರಭಾವ ಎಂದು ಹೇಳಲಾಗಿದೆ.

ಈ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 2,478 ಕೋಟಿ ರೂಪಾಯಿಗಳಾಗಿದ್ದು, ಹಿಂದಿನ ವರ್ಷದ ಇದೇ ತ್ರೈಮಾಸಿಕದಲ್ಲಿ 1,266 ಕೋಟಿ ರೂಪಾಯಿಗಳಾಗಿತ್ತು.
ಅದೇ ರೀತಿ ತುಲನಾತ್ಮಕ ಅವಧಿಯಲ್ಲಿ ನಿರ್ವಹಣಾ ವೆಚ್ಚವನ್ನು ಲೆಕ್ಕ ಹಾಕಲಾಗಿದೆ. ಇದೇ ವರ್ಷದ ತ್ರೈಮಾಸಿಕದಲ್ಲಿ ನಿರ್ವಹಣಾ ವೆಚ್ಚ 3,267 ಕೋಟಿ ರೂಪಾಯಿಗಳಾಗಿದ್ದು, ಕಳೆದ ವರ್ಷದ ತ್ರೈಮಾಸಿಕದಲ್ಲಿ ಅದು 1,995 ಕೋಟಿ ರೂಪಾಯಿ ಆಗಿತ್ತು.
ಗುತ್ತಿಗೆ ವಿಮಾನ ನೋಂದಣಿ ರದ್ದಿಗೆ ವಿನಂತಿ: ವಿಮಾನಯಾನ ನಿಯಂತ್ರಕ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ವಾಹಕ ಸ್ಪೈಸ್‌ಜೆಟ್‌ಗೆ ಬಾಡಿಗೆಗೆ ಪಡೆದ ಇನ್ನೂ ಎರಡು B737 ವಿಮಾನಗಳ ನೋಂದಣಿ ರದ್ದುಗೊಳಿಸಲು ವಿನಂತಿಗಳನ್ನು ಸ್ವೀಕರಿಸಿದೆ.
ಐರಿಶ್ ಗುತ್ತಿಗೆದಾರ ಹರೈಸನ್ ಏವಿಯೇಷನ್ ಮೂಲಕ ನೋಂದಣಿ ರದ್ದುಪಡಿಸಲು ವಿನಂತಿ ಮಾಡಲಾಗಿದೆ. ಕಳೆದ ಕೆಲವು ವಾರಗಳಲ್ಲಿ ಸ್ಪೈಸ್‌ಜೆಟ್‌ಗೆ ಗುತ್ತಿಗೆ ನೀಡಿದ ವಿಮಾನಗಳ ನೋಂದಣಿ ರದ್ದುಗೊಳಿಸುವ ಹಲವು ಬಾರಿ ವಿನಂತಿ ಸಲ್ಲಿಸಿದೆ. ಈ ಪೈಕಿ ಇದು ನಿಯಂತ್ರಕರು ಸ್ವೀಕರಿಸಿದ ಮೂರನೇ ವಿನಂತಿಯ ನಿದರ್ಶನವಾಗಿದೆ.












Click it and Unblock the Notifications