Spicejet Crisis: ಕ್ಯಾಬಿನ್ 150 ಸಿಬ್ಬಂದಿಗೆ 3 ತಿಂಗಳ ಕಡ್ಡಾಯ ರಜೆ ನೀಡಿದ ಸ್ಪೈಸ್‌ಜೆಟ್, ಯಾಕೆ?
ನವದೆಹಲಿ, ಆಗಸ್ಟ್ 30: ಹಾಲಿ 22 ವಿಮಾನಗಳ ಮೂಲಕ ವಿಮಾನಯಾನ ಸೇವೆ ನೀಡುತ್ತಿರುವ ಸಂಸ್ಥೆ 'ಸ್ಪೈಸ್ ಜೆಟ್' ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಕಾರಣದಿಂದ ತನ್ನ150 ಸಿಬ್ಬಂದಿಗೆ ಮೂರು ತಿಂಗಳ ಕಡ್ಡಾಯ ರಜೆ ಘೋಷಿಸುವ ಮೂಲಕ ವಿಮಾನಯಾನ ಸಂಸ್ಥೆಯೊಂದು ಸುದ್ದಿಯಲ್ಲಿದೆ. ಕೆಲವು ಸಂಸ್ಥೆಗಳಂತೆ ಪ್ರತಿಷ್ಠಿತ 'ಸ್ಪೈಸ್‌ಜೆಟ್' ವಿಮಾನಯಾನ ಸಂಸ್ಥೆ ಸಹ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ.
'ಸ್ಪೈಸ್‌ಜೆಟ್' ಸಂಸ್ಥೆಯು ಗುತ್ತಿಗೆದಾರರು, ನಿರ್ವಹಣೆ ಸೇರಿದಂತೆ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಆರ್ಥಿಕ ಮುಗ್ಗಟ್ಟು ಕಾರಣದಿಂದಾಗಿ ತನ್ನ 150 ಕ್ಯಾಬಿನ್ ಸಿಬ್ಬಂದಿಗೆ ವೇತನ ರಹಿತ ಕಡ್ಡಾಯ ಮೂರು ತಿಂಗಳ ರಜೆ ಘೋಷಿಸಿದೆ. ವೇತನ ಬಿಟ್ಟರೆ ಉಳಿದ ಕೆಲವು ಸೌಲಭ್ಯಗಳು ಅವರಿಗೆ ಇರುತ್ತವೆ ಎಂದು ವಿಮಾನಯಾನ ವಕ್ತಾರರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸ್ಪೈಸ್‌ಜೆಟ್ ನಿಂದ ರಜೆ ಪಡೆದಿರುವ ಈ ಎಲ್ಲ ಕ್ಯಾಬಿನ್ ಸಿಬ್ಬಂದಿಗೆ ಮೂರು ತಿಂಗಳು ವೇತನ ಇರುವುದಿಲ್ಲ. ಬದಲಾಗಿ ಅವರು ಸಂಸ್ಥೆಯ ಉದ್ಯೋಗಿಗಳಿಗೆ ಇರುವ ಎಲ್ಲ ಸ್ಥಾನಮಾನ, ಆರೋಗ್ಯ ಸೌಲಭ್ಯಗಳನ್ನು ಹೊಂದಿರುತ್ತಾರೆ. ಈ ಮೂಲಕ ನಿರ್ವಹಣೆಯಲ್ಲಿ ಸಮಸ್ಯೆಗಳನ್ನು ಸರಿದೂಗಿಸಿಕೊಳ್ಳಲು, ಆರ್ಥಿಕ ಚೇತರಿಕೆ ಕಾರಣಲು ಸಂಸ್ಥೆ ಪ್ಲಾನ್ ಮಾಡಿಕೊಂಡಿದೆ ಎಂದು ತಿಳದು ಬಂದಿದೆ.
ಇವರ ಮೂರು ತಿಂಗಳ ರಜೆ ಪೂರ್ಣಗೊಂಡ ಬಳಿಕ ಪುನಃ ಕರ್ತವ್ಯಕ್ಕೆ ಹಾಜರು ಮಾಡಿಕೊಳ್ಳಲಿದ್ದೇವೆ. ಸದ್ಯ ದೇಶಾದ್ಯಂತ ಪ್ರಯಾಣಿಕರಿಗೆ ವಿಮಾನ ಸೇವೆ ನೀಡುವ ಸಂಸ್ಥೆಯು ಆರ್ಥಿಕ ಚೇತರಿಕೆಯ ಹಾದಿ ಕಂಡುಕೊಳ್ಳುತ್ತಿದೆ. ಈ ಸಂಬಂಧ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದೆ.

ಸಂಸ್ಥೆ ಆದಾಯ ಕ್ರಮೇಣ ಕುಸಿತ
ದೀರ್ಘ ಕಾಲದ ಸದುದ್ದೇಶದಿಂದ ಈ ದೀರ್ಘ ರಜೆ ಘೋಷಣೆ ಮಾಡಲಾಗಿದೆ. ಸ್ಪೈಸ್‌ಜೆಟ್ ಹಿಂದಿನ ತಿಂಗಳು ಷೇರು ಮಾರಾಟದ ಮೂಲಕ 30 ಶತಕೋಟಿ ರೂ ($358 ಮಿಲಿಯನ್) ಸಂಗ್ರಹಕ್ಕೆ ಪ್ರಯತ್ನಿಸಿತ್ತು. ಸಂಸ್ಥೆಯ ನಿವ್ವಳ ಆದಾಯ ಕುಸಿತಗೊಂಡಿದೆ. ವರ್ಷದಿಂದ ವರ್ಷಕ್ಕೆ ಶೇಕಡಾ 15ರಷ್ಟು ಆದಾಯ ಕಡಿಮೆ ಆಗಿದೆ.
ಸ್ಪೈಸ್‌ಜೆಟ್ ಸಂಸ್ಥೆ ಬೋಯಿಂಗ್ 730ಕ್ಕೂ ಹೆಚ್ಚು ಪ್ಲಿಟ್ ಹೊಂದಿತ್ತು, ಕೋವಿಡ್ ಮೊದಲು ಅದು 110ಕ್ಕೆ ಇಳಿಕೆಯಾಗಿತ್ತು. ಸದ್ಯ ಸ್ಪೈಸ್‌ಜೆಟ್‌ನಿಂದ 22 ವಿಮಾನಗಳು ಕಾರ್ಯ ನಿರ್ವಹಿಸುತ್ತಿವೆ. ಗುತ್ತಿಗೆದಾರರಿಗೆ ಪಾವತಿಗೆ ಕಷ್ಟವಾದ ಕಾರಣ ಸಂಸ್ಥೆಯ ಬೆಳವಣಿಗೆ ಕುಸಿಯುತ್ತಾ ಬಂದಿದೆ ಎಂದು ವರದಿ ಆಗಿದೆ.












Click it and Unblock the Notifications