G20 Summit: ಭಾರತಕ್ಕೆ ಬರುವ ಅಮೆರಿಕ ಅಧ್ಯಕ್ಷರಿಗೆ ವಿಶೇಷ ಸ್ವಾಗತ

ಭಾರತ ಜಗತ್ತಿಗೆ ತನ್ನ ಶಕ್ತಿ ತೋರಿಸಲು ಮತ್ತೊಂದು ವೇದಿಕೆ ಸಿದ್ಧವಾಗಿದ್ದು, ಇತ್ತೀಚೆಗಷ್ಟೇ 'ಚಂದ್ರಯಾನ-3' ಮತ್ತು ಸೂರ್ಯಯಾನ ಯೋಜನೆ ಮೂಲಕ ಭಾರತ ಗೆದ್ದು ಬೀಗಿತ್ತು. ಇದೀಗ ಜಿ20 ಶೃಂಗಸಭೆ ಮೂಲಕ ಭಾರತ ತನ್ನ ಶ್ರೀಮಂತಿಕೆ ತೋರಿಸಲಿದೆ. ಸೆಪ್ಟೆಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಶೃಂಗಸಭೆ ನಡೆಯಲಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಬೈಡನ್ ಕೂಡ ಭಾರತಕ್ಕೆ ಬರಲಿದ್ದು, ವಿಶೇಷ ಸ್ವಾಗತ ಸಿದ್ಧವಾಗಿದೆ.

ಅಮೆರಿಕ ಜಾಗತಿಕವಾಗಿ ಇಂದಿಗು ತನ್ನ ಶಕ್ತಿ ಉಳಿಸಿಕೊಂಡಿರುವ ದೇಶ. ಮುಂದಕ್ಕೆ ಕೂಡ ಇದೇ ರೀತಿ ತನ್ನ ಶಕ್ತಿ ಉಳಿಸಿಕೊಳ್ಳಲು ಭಾರತದ ಜೊತೆಗೆ ಅಮೆರಿಕ ಬೆರೆಯುವುದು ಇದೀಗ ಅನಿವಾರ್ಯ. ಹೀಗಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಭಾರತ ಭೇಟಿ ವೇಳೆ ಹಲವಾರು ಪ್ರಮುಖ ವಿಚಾರ ಪ್ರಸ್ತಾಪಿಸಲಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಜೋ ಬೈಡನ್‌ಗೆ ಭಾರತ ವಿಶೇಷವಾಗಿ ಸ್ವಾಗತ ಕೋರಲು ಸಜ್ಜಾಗಿದೆ. ಅದರಲ್ಲೂ ಮರಳು ಕಲಾವಿದ ವಿಶಿಷ್ಟವಾಗಿ ಸ್ವಾಗತ ಕೋರಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ ಮುಂದೆ ಓದಿ.

Special welcome for American president Joe Biden from Indian sand artist

ಕಡಲ ತೀರದಲ್ಲಿ ಅರಳಿದ ಬೈಡನ್..

ಭಾರತದ ಹೆಮ್ಮೆಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವ್ರು ಅಮೆರಿಕ ಅಧ್ಯಕ್ಷ ಬೈಡನ್‌ಗೆ ವಿಶೇಷವಾಗಿ ಸ್ವಾಗತ ಕೋರಿದ್ದಾರೆ. ಒಡಿಶಾದ ಪುರಿ ಕಡಲ ತೀರದಲ್ಲಿ ಮರಳು ಕಲೆಯ ಮೂಲಕ ಜೋ ಬೈಡನ್ ಅವರಿಗೆ ಸ್ವಾಗತ ಕೋರಲಾಗಿದೆ. ಪ್ರತಿಬಾರಿ ಸುದರ್ಶನ್ ಪಟ್ನಾಯಕ್ ಅವರ ಮರಳು ಕಲಾಕೃತಿ ಜಗತ್ತಿನ ಗಮನ ಸೆಳೆಯುತ್ತದೆ. ಅದರಂತೆ ಇದೀಗ ಕೂಡ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ಮರಳು ಕಲಾಕೃತಿ ಗಮನ ಸೆಳೆದಿದೆ. G20 ಶೃಂಗಸಭೆ ಹಿನ್ನೆಲೆ ಬೈಡನ್ ಭಾರತಕ್ಕೆ ಬರುತ್ತಿದ್ದಾರೆ. G20 ಶೃಂಗಸಭೆಗೆ ಮೊದಲು ಪ್ರಧಾನಿ ಮೋದಿ ಅವರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಏನೆಲ್ಲಾ ಚರ್ಚೆ ನಡೆಯಲಿದೆ?

ಸಾಮಾನ್ಯವಾಗಿ ಜಿ20 ಶೃಂಗಸಭೆ ಸಂದರ್ಭದಲ್ಲಿ ದ್ವಿಪಕ್ಷೀಯ ಮಾತುಕತೆಗೆ ಅವಕಾಶ ಇರಲ್ಲ. ಆದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಸೌದಿಯ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಭಾರತ ವಿಶೇಷ ವಿನಾಯಿತಿ ನೀಡಿದೆ. ಈಗ ಎರಡೂ ದೇಶಗಳ ಜೊತೆಗೆ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಅದರಲ್ಲೂ ಪ್ರಮುಖ ವಿಚಾರ ಏನೆಂದರೆ ಅಮೆರಿಕ ಜೊತೆಗಿನ ಸಭೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಜೊತೆ ಪಿಎಂ ಮೋದಿ ಮುಖ್ಯವಾಗಿ 6 ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ.

Special welcome for American president Joe Biden from Indian sand artist

ಪರಮಾಣು ರಿಯಾಕ್ಟರ್ ನಿರ್ಮಾಣ ಚರ್ಚೆ

ಅಮೆರಿಕದ ತಂತ್ರಜ್ಞಾನ ಸಹಾಯದಿಂದ ಭಾರತದಲ್ಲಿ 6 ಪರಮಾಣು ರಿಯಾಕ್ಟರ್‌ ನಿರ್ಮಾಣಕ್ಕೆ ಚಿಂತನೆ ನಡೆದಿದೆ. ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ (NPCIL) & ವೆಸ್ಟಿಂಗ್‌ಹೌಸ್ ಎಲೆಕ್ಟ್ರಿಕ್ ಕಂಪನಿ (WEC) ನಡುವೆ ಈ ಕುರಿತು ಈಗ ಮಾತುಕತೆ ನಡೆಯುತ್ತಿದೆ. ಅತ್ಯಾಧುನಿಕ ರಿಯಾಕ್ಟರ್ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಚರ್ಚೆ ಆಗುತ್ತಿದ್ದು, ಇದೀಗ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಬೈಡನ್ ನಡುವೆ ಇದೀಗ ಅಂತಿಮ ಹಂತದ ಮಾತುಕತೆ ನಡೆಯುವ ಸಾಧ್ಯತೆ ಇದೆ.

ಯುದ್ಧ ವಿಮಾನಕ್ಕೆ ಅತ್ಯಾಧುನಿಕ ಇಂಜಿನ್

ಅಮೆರಿಕ & ಭಾರತ ಮಧ್ಯೆ ಮತ್ತೊಂದು ಪ್ರಮುಖ ಒಪ್ಪಂದಕ್ಕೆ ಸಹಿ ಬೀಳಬಹುದು ಅಂತಾ ಈಗ ಹೇಳಲಾಗುತ್ತಿದೆ. ಭಾರತದಲ್ಲಿ GE F-414 ಜೆಟ್ ಇಂಜಿನ್‌ ತಯಾರಿಸಲು ಅಮೆರಿಕದ ಮೂಲಕ ತಂತ್ರಜ್ಞಾನ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಅಮೆರಿಕ ಕಾಂಗ್ರೆಸ್ ಕೂಡ ಇದಕ್ಕೆ ಇರುವ ಅಡ್ಡಿ ದೂರ ಮಾಡಿದ್ದು, ಬೈಡನ್ ಪಿಎಂ ಮೋದಿ ಅವರ ಜೊತೆ ದ್ವಿಪಕ್ಷೀಯ ಸಭೆ ನಡೆಸುವಾಗ ಈ ಒಪ್ಪಂದಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ.

Special welcome for American president Joe Biden from Indian sand artist

MQ-9B ಡ್ರೋನ್ ಒಪ್ಪಂದಕ್ಕೆ ಸಹಿ?

ಜನರಲ್ ಅಟಾಮಿಕ್ಸ್ MQ-9B HALE UAV ಡ್ರೋನ್‌ಗಳ ವಿಚಾರದಲ್ಲೂ ಅಮೆರಿಕ & ಭಾರತ ಮಾತುಕತೆ ನಡೆಸುತ್ತಿವೆ. ಬೈಡನ್ ಭಾರತ ಭೇಟಿ ವೇಳೆ ಈ ಒಪ್ಪಂದಕ್ಕೆ ಕೂಡ ಅಂತಿಮ ಮುದ್ರೆ ಬೀಳಬಹುದೆಂಬ ನಿರೀಕ್ಷೆ ಇದೆ. ಭಾರತಕ್ಕೆ MQ-9B HALE UAV ಡ್ರೋನ್ಸ್ ಮತ್ತಷ್ಟು ಬಲ ತುಂಬಲಿವೆ. ಹೀಗಾಗಿ ಪ್ರಧಾನಿ ಮೋದಿ & ಬೈಡನ್ ನಡುವೆ ಈ ವಿಚಾರದಲ್ಲಿ ಅಂತಿಮ ಹಂತದ ಚರ್ಚೆ ನಡೆಯಬಹುದು ಎನ್ನಲಾಗಿದೆ.

ಭಾರತದ ವಿದ್ಯಾರ್ಥಿಗಳಿಗೂ ಖುಷಿ ವಿಷಯ

ಅಮೆರಿಕದಲ್ಲಿ ವಿದ್ಯಾಭ್ಯಾಸ ನಡೆಸಲು ಭಾರತದ ವಿದ್ಯಾರ್ಥಿಗಳಿಗೆ ಅನುಕೂಲವನ್ನ ಕಲ್ಪಿಸಲು ಪ್ರಯತ್ನ ಸಾಗಿವೆ. ಹೀಗೆ ಭಾರತೀಯ ವಿದ್ಯಾರ್ಥಿಗಳಿಗೆ ಅನುಗುಣವಾಗಿ ಶೈಕ್ಷಣಿಕ ಕಾರ್ಯಕ್ರಮ ಘೋಷಿಸಲು ಚರ್ಚೆ ನಡೆಯುತ್ತಿದೆ. ಹೀಗಾಗಿ ಭಾರತದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಹೋಗಿ ವಿದ್ಯಾಭ್ಯಾಸ ಮಾಡಲು ಹಾಗೂ 3 ವರ್ಷಗಳ ತನಕ ಅಮೆರಿಕದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲು ಪ್ರಯತ್ನ ಸಾಗಿದೆ. ಇನ್ನು ಈ ಒಪ್ಪಂದಕ್ಕೆ ಒಪ್ಪಿಗೆ ಸಿಕ್ಕರೆ ಭಾರತದ ವಿದ್ಯಾರ್ಥಿಗಳು ಅಮೆರಿಕದಲ್ಲಿ ಸುಲಭವಾಗಿ ಕೆಲಸ ಹುಡುಕಬಹುದು.

Special welcome for American president Joe Biden from Indian sand artist

ಉಕ್ರೇನ್ ಯುದ್ಧಕ್ಕೆ ಭಾರತದ ನೆರವು

ರಷ್ಯಾ & ಉಕ್ರೇನ್ ಮಧ್ಯೆ ಯುದ್ಧದ ಬಗ್ಗೆ ಭಾರತ ವಿಭಿನ್ನ ನಿಲುವು ತೆಗೆದುಕೊಂಡಿದೆ. ಉಕ್ರೇನ್ ಪರ ನಿಲ್ಲದೆ, ರಷ್ಯಾಗೆ ಬೆಂಬಲ ನೀಡದೆ ಯುದ್ಧ ಬೇಡವೆ ಬೇಡ ಅನ್ನುತ್ತಿದೆ. ಹಾಗೇ ಕಷ್ಟದಲ್ಲಿ ಇರುವ ಉಕ್ರೇನ್‌ಗೆ ಮಾನವೀಯ ನೆರವು ನೀಡಲು ಅಮೆರಿಕ ಅಧ್ಯಕ್ಷರು ಭಾರತದ ಬಳಿ ಬೇಡಿಕೆ ಇಡಬಹುದು. ಭಾರತ ಇದುವರೆಗೆ 100 ಟನ್‌ ಮಾನವೀಯ ನೆರವನ್ನು ಕಳುಹಿಸಿದೆ. ಅಗತ್ಯ ಔಷಧ, ವೈದ್ಯಕೀಯ ಉಪಕರಣ, ಆಹಾರ ಸೇರಿ ಉಕ್ರೇನ್ ಜನರಿಗೆ ಬೇಕಿರುವ ವಸ್ತುಗಳನ್ನು ತಲುಪಿಸಿದೆ. ಇದೀಗ ಅಮೆರಿಕ & ಭಾರತ ಒಟ್ಟಾಗಿ ಮಾನವೀಯ ನೆರವು ಕಳಿಸುವ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.

ನಮ್ಮ ಬೆಂಗಳೂರಿಗೂ ಸಖತ್ ಸುದ್ದಿ!

ಇದೆಲ್ಲಕ್ಕಿಂತಲೂ ಮುಖ್ಯವಾಗಿ ಬೆಂಗಳೂರಿನಲ್ಲಿ ನೂತನವಾಗಿ ಆರಂಭ ಆಗುತ್ತಿರುವ ಅಮೆರಿಕದ ರಾಯಭಾರ ಕಚೇರಿ ವಿಚಾರ ಕೂಡ ಚರ್ಚೆಗೆ ಬರಲಿದೆ ಅಂತಾ ಹೇಳಾಗುತ್ತಿದೆ. ಬೆಂಗಳೂರು & ಅಹಮದಾಬಾದ್‌ನಲ್ಲಿ ಅಮೆರಿಕದ ನೂತನ ರಾಯಭಾರ ಕಚೇರಿಗಳನ್ನು ಆರಂಭಿಸಲು ಸಿದ್ಧತೆ ನಡೆಯುತ್ತಿದೆ. ಹಾಗೇ ಭಾರತ ಕೂಡ ಅಮೆರಿಕದ ಸಿಯಾಟಲ್ ಸೇರಿದಂತೆ ಒಟ್ಟು 2 ಕಡೆ ಹೊಸ ರಾಯಭಾರ ಕಚೇರಿ ಶುರು ಮಾಡಲು ಸಿದ್ಧತೆ ನಡೆಸಿದೆ. ಈ ಕುರಿತು ಕೂಡ ಪ್ರಧಾನಿ ಮೋದಿ ಮತ್ತು ಜೋ ಬೈಡನ್ ಅವರ ನಡುವೆ ಚರ್ಚೆ ನಡೆಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+