ಯುಪಿಯಲ್ಲಿ ವಿಶೇಷ ನವರಾತ್ರಿ ಪೂಜೆ, ಪ್ರತಿ ಜಿಲ್ಲೆಗೆ ₹ 1 ಲಕ್ಷ ಅನುದಾನ
ಮಾರ್ಚ್ 10 ರಂದು ಜಿಲ್ಲಾಧಿಕಾರಿಗಳಿಗೆ ಹೊರಡಿಸಿದ ಸುತ್ತೋಲೆ ಪ್ರಕಾರ, ಮಾರ್ಚ್ 22 ರಂದು ಪ್ರಾರಂಭವಾಗುವ ಚೈತ್ರ ನವರಾತ್ರಿಯಲ್ಲಿ ಎಲ್ಲಾ ದೇವಾಲಯಗಳಲ್ಲಿ ಅಖಂಡ ರಾಮಾಯಣ ಮತ್ತು ದುರ್ಗಾ ಸಪ್ತಶತಿ ಪಠಣ ನಡೆಯಲಿದೆ.
ಲಕ್ನೋ, ಮಾರ್ಚ್ 14: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ನವರಾತ್ರಿಯ ಒಂಬತ್ತು ದಿನಗಳಲ್ಲಿ ದುರ್ಗಾ ಮಾತೆಯ ದೇವಾಲಯಗಳು ಮತ್ತು ಶಕ್ತಿಪೀಠಗಳಲ್ಲಿ ಭವ್ಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಿದ್ಧಪಡಿಸುವಂತೆ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.
ಮಾರ್ಚ್ 10 ರಂದು ಜಿಲ್ಲಾಧಿಕಾರಿಗಳಿಗೆ ಹೊರಡಿಸಿದ ಸುತ್ತೋಲೆ ಪ್ರಕಾರ, ಮಾರ್ಚ್ 22 ರಂದು ಪ್ರಾರಂಭವಾಗುವ ಚೈತ್ರ ನವರಾತ್ರಿಯಲ್ಲಿ ಎಲ್ಲಾ ದೇವಾಲಯಗಳಲ್ಲಿ ಅಖಂಡ ರಾಮಾಯಣ ಮತ್ತು ದುರ್ಗಾ ಸಪ್ತಶತಿ ಪಠಣ ನಡೆಯಲಿದೆ.

ಉತ್ತರಪ್ರದೇಶ ರಾಜ್ಯ ಸರ್ಕಾರದಿಂದ ಪ್ರತಿ ಜಿಲ್ಲೆಗೆ 1 ಲಕ್ಷ ರೂಪಾಯಿ ಅನುದಾನ ನೀಡಿ ಸಂಭ್ರಮಾಚರಣೆ ಹಮ್ಮಿಕೊಳ್ಳಲಾಗುವುದು. ಹಬ್ಬದ ಅಂಗವಾಗಿ ಸರ್ಕಾರಿ ಕಾರ್ಯಕ್ರಮಗಳು ನಡೆಯಲಿರುವ ದೇವಾಲಯಗಳ ಫೋಟೋಗಳು, ಭೌಗೋಳಿಕ ಸ್ಥಳಗಳು ಮತ್ತು ಅರ್ಚಕರ ವಿವರಗಳನ್ನು ರಾಜ್ಯದ ಅಧಿಕೃತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.
ಉತ್ಸವದ ಸಮಯದಲ್ಲಿ ಪ್ರದರ್ಶನ ನೀಡಲು ಕಲಾವಿದರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳ ಅಧ್ಯಕ್ಷತೆಯಲ್ಲಿ ಪ್ರತಿ ಜಿಲ್ಲೆಯಲ್ಲಿ ಸಮಿತಿಗಳನ್ನು ರಚಿಸಲಾಗುತ್ತದೆ. ಕಲಾವಿದರಿಗೆ ತಲಾ 1 ಲಕ್ಷ ರೂಪಾಯಿ ನೀಡಲಾಗುತ್ತದೆ. ಹೆಚ್ಚುವರಿಯಾಗಿ ಈ ಕಾರ್ಯಕ್ರಮಗಳನ್ನು ಆಯೋಜಿಸಲು ರಾಜ್ಯ ಮಟ್ಟದಲ್ಲಿ ಇಬ್ಬರು ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಈ ಘೋಷಣೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥರು, ಯೋಗಿ ಆದಿತ್ಯನಾಥ್ ಸರ್ಕಾರವು ಧರ್ಮವನ್ನು ವ್ಯಾಪಾರೀಕರಣಗೊಳಿಸುತ್ತಿದೆ ಎಂದು ಆರೋಪಿಸಿದ್ದಾರೆ. ಎಸ್‌ಪಿ ಸರ್ಕಾರದ ಅವಧಿಯಲ್ಲಿ ಅರ್ಚಕರಿಗೆ ಗೌರವಧನ ನೀಡಲಾಗಿದ್ದು, ಸಂದರ್ಶಕರಿಗೆ ಹಲವು ಸೌಲಭ್ಯಗಳು ಲಭ್ಯವಿದೆ. ಇಂದು ಬಿಜೆಪಿ ಸರ್ಕಾರ ಅರ್ಚಕರ ಗೌರವಧನವನ್ನಾಗಲಿ, ಸಾರ್ವಜನಿಕರಿಗೆ ಸೌಲಭ್ಯವನ್ನಾಗಲಿ ಹೆಚ್ಚಿಸದೆ ಹಣ ವಸೂಲಿಗೆ ಹೊಸ ದಾರಿಗಳನ್ನು ಹುಡುಕುತ್ತಿದೆ ಎಂದು ಅಖಿಲೇಶ್ ಯಾದವ್ ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಧರ್ಮವನ್ನು ವ್ಯಾಪಾರೀಕರಣ ಮಾಡುವ ಮೂಲಕ ನಂಬಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಹಬ್ಬಗಳ ದೃಷ್ಟಿಯಿಂದ ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಬೇಕು ಎಂದು ಸೂಚಿಸಿದ್ದರು.












Click it and Unblock the Notifications