ಸಂಸತ್‌ ಭವನದೊಳಗೆ ನುಗ್ಗಿದ ಇಬ್ಬರು ಸೇರಿ ನಾಲ್ವರ ಬಂಧನ, ತನಿಖೆಗೆ ಆದೇಶಿಸಿದ ಸ್ಪೀಕರ್‌ ಓ ಬಿರ್ಲಾ

ನವದೆಹಲಿ, ಡಿಸೆಂಬರ್‌ 13: ಸಂಸತ್‌ ದಾಳಿ ಘಟನೆ ನಡೆದ 22 ವರ್ಷಗಳ ಇದೇ ದಿನ ಲೋಕಸಭೆಯಲ್ಲಿ ಕಲಾಪ ನಡೆಯುವ ವೇಳೆ ಅನಿರೀಕ್ಷಿತವಾಗಿ ಒಳ ನುಗ್ಗಿದ ಇಬ್ಬರು ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ.

ಈ ಬಗ್ಗೆ ಲೋಕಸಭಾ ಸ್ಪೀಕರ್‌ ಓ ಬಿರ್ಲಾ ಮಾತನಾಡಿ, ಇಬ್ಬರನ್ನೂ ಬಂಧಿಸಲಾಗಿದ್ದು, ಅವರಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಂಸತ್ತಿನ ಹೊರಗಿದ್ದ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಶೂನ್ಯ ವೇಳೆಯಲ್ಲಿ ನಡೆದ ಘಟನೆಯ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದೆ. ದೆಹಲಿ ಪೊಲೀಸರಿಗೂ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಇದು ಕೇವಲ ಹೊಗೆ ಎಂದು ಕಂಡುಬಂದಿದ್ದು, ಹೊಗೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

Speaker Om Birla orders investigation into arrest of four including two who broke into Parliament House

ಬಂಧಿತರನ್ನು ಸಾಗರ್‌ ಶರ್ಮಾ, ಹರಿಯಾಣ ಮೂಲದ ನೀಲಂ ಕೌರ್‌, ಮನೋರಂಜನ್‌, ಅಮೋಲ್‌ ಶಿಂಧೆ ಎನ್ನಲಾಗಿದೆ. ಸಾಗರ್ ಶರ್ಮಾ ಮನೋರಂಜನ್‌ ಕನ್ನಡಿಗ ಎನ್ನಲಾಗಿದೆ. ಸಂಸತ್ತಿನ ಒಳಗೆ ಮೊದಲಿಗೆ ಇಬ್ಬರು ಘೋಷಣೆ ಕೂಗುತ್ತ ಒಳ ನುಗ್ಗಿದರು. ಅವರ ಕೈಯಲ್ಲಿ ಹಳದಿ ಹೊಗೆ ಸೂಸುವ ಬಾಟಲ್‌ಗಳು ಇದ್ದವು. ಬಳಿಕ ಸದನದ ಒಳಗೆ ಇಬ್ಬರು ಪ್ರತಿಭಟನೆ ನಡೆಸುತ್ತಿದ್ದರು. ಈ ಇಬ್ಬರನ್ನು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ.

ಬಂಧಿತರಲ್ಲಿ ಸಾಗರ್‌ ಶರ್ಮಾ ಎಂಬಾತ ಮೈಸೂರು ಕೊಡಗು ಸಂಸದ ಪ್ರತಾಪ್‌ ಸಿಂಹ ಹೆಸರಿನಲ್ಲಿ ಪಾಸ್‌ ಪಡೆದು ಹೋಗಿದ್ದ ಎನ್ನಲಾಗಿದೆ. ಸದನದ ಕಲಾಪಗಳು ನಡೆಯುತ್ತಿರುವಾಗ ಇಬ್ಬರೂ ಒಳನುಗ್ಗುವವರು ಸಂದರ್ಶಕರ ಗ್ಯಾಲರಿಯಲ್ಲಿದ್ದರು. ಲೋಕಸಭೆಯ ಗೇಟ್‌ನಲ್ಲಿ ಇನ್ನೂ ಇಬ್ಬರು ಪ್ರತಿಭಟನೆ ನಡೆಸುತ್ತಿದ್ದರು. ಎಲ್ಲಾ ನಾಲ್ವರು ಒಳನುಗ್ಗುವವರನ್ನು ಬಂಧಿಸಿ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಈ ಘಟನೆಯು 2001 ರ ಸಂಸತ್ ದಾಳಿಯ 22 ನೇ ವಾರ್ಷಿಕೋತ್ಸವದಂದೇ ನಡೆದಿದೆ.

ಈ ಘಟನೆಯು 2001 ರ ಸಂಸತ್ ದಾಳಿಯ 22 ನೇ ವಾರ್ಷಿಕೋತ್ಸವದಂದೇ ನಡೆದಿದೆ.ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ ಇದು ತುಂಬಾ ಗಂಭೀರವಾಗಿದೆ. ಇದು ಕೇವಲ ಲೋಕಸಭೆ ಮತ್ತು ರಾಜ್ಯಸಭೆಯ ಪ್ರಶ್ನೆಯಲ್ಲ, ಇಷ್ಟು ವಿಸ್ತಾರವಾದ ಭದ್ರತೆಯ ನಡುವೆಯೂ ಇಬ್ಬರು ವ್ಯಕ್ತಿಗಳು ಹೇಗೆ ಒಳಗೆ ಬಂದು ಭದ್ರತಾ ಲೋಪವನ್ನು ಉಂಟುಮಾಡಿದರು ಎಂಬುದರ ಕುರಿತ ಸಂಗತಿಯಾಗಿದೆ ಎಂದು ಹೇಳಿದರು.

ಇದಕ್ಕೆ ಉತ್ತರಿಸಿದ ಸ್ಪೀಕರ್‌ ಜಗದೀಪ್ ಧನಕರ್, ನನಗೆ ವಿಷಯ ತಿಳಿದ ಕ್ಷಣ, ನಾನು ಭದ್ರತಾ ನಿರ್ದೇಶಕರಿಗೆ ಕರೆ ಮಾಡಿದೆ. ನಾನು ಅವನಿಗೆ ವಿಷಯದ ಅಪಡೇಟ್‌ ನೀಡಲು ಹೇಳಿದೆ. ಈ ಸಮಯದಲ್ಲಿ ಅವರು ನನಗೆ ನೀಡಿದ ಅಪಡೇಟ್‌ ಅನ್ನು ನಾನು ಸದನದೊಂದಿಗೆ ಹಂಚಿಕೊಂಡಿದ್ದೇನೆ. ಇದು ಗಂಭೀರ ವಿಷಯವಾಗಿದೆ. ಆದರೆ ನಾವು ವಿವರಗಳಿಗಾಗಿ ಕಾಯೋಣ ಎಂದು ಹೇಳಿದ್ದಾರೆ.

ಸಂಸತ್ ದಾಳಿ ನೆನಪು:

2001ರಂದು ಡಿಸೆಂಬರ್‌ 13ರಂದು ಸಂಸತ್ ಮೇಲೆ ಐವರು ಭಯೋತ್ಪಾದಕರಿಂದ ಭಯೋತ್ಪಾದಕ ದಾಳಿಯಾಗಿತ್ತು. ದುಷ್ಕರ್ಮಿಗಳು ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗಳಿಗೆ ಸೇರಿದವರು ದಾಳಿ ಮಾಡಿದ್ದರು. ದಾಳಿಯಲ್ಲಿ ಆರು ದೆಹಲಿ ಪೊಲೀಸ್ ಸಿಬ್ಬಂದಿ, ಇಬ್ಬರು ಸಂಸತ್ ಭದ್ರತಾ ಸೇವಾ ಸಿಬ್ಬಂದಿ ಮತ್ತು ಒಬ್ಬ ತೋಟಗಾರ ಸಾವನ್ನಪ್ಪಿದ್ದನು. ಇದು ಭಾರತ ಮತ್ತು ಪಾಕಿಸ್ತಾನದ ನಡುವೆ ಕಂದಕ ಹೆಚ್ಚಲು ಕಾರಣವಾಯಿತು. ಸಂಸತ್ತಿನ ಹೊರಗೆ ಐವರು ಉಗ್ರರನ್ನು ಹತ್ಯೆ ಮಾಡಲಾಯಿತು.

ಕಾರಿನಲ್ಲಿ ಸಂಸತ್ ಭವನ ಪ್ರವೇಶಿಸಿದ್ದ ಉಗ್ರರು, ಏಕಾಏಕಿ ಸಂಸತ್ ಆವರಣದಲ್ಲಿ ಗುಂಡಿನ ಮಳೆಗರೆಯಲಾರಂಭಿಸಿದರು. ತಕ್ಷಣ ಸೈರನ್‌ ಹಾಕಲಾಯಿತು. ಕಟ್ಟಡದ ಎಲ್ಲಾ ಗೇಟ್‌ಗಳನ್ನು ಮುಚ್ಚಲಾಯಿತು. ಸುಮಾರು 30 ನಿಮಿಷಗಳ ಕಾಲ ಗುಂಡಿನ ಚಕಮಕಿ ನಡೆಯಿತು. ಈ ದಾಳಿಯನ್ನು ನಿಗ್ರಹಿಸುವಲ್ಲಿ ಯಶಸ್ವಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+