ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking: ದಕ್ಷಿಣ ದೆಹಲಿ ಶಾಲೆಗೆ ಬಾಂಬ್ ಬೆದರಿಕೆ ಸಂದೇಶ

|
Google Oneindia Kannada News

ನವದೆಹಲಿ, ನವೆಂಬರ್ 28: ದೆಹಲಿಯಲ್ಲಿ ಇರುವ ಇಂಡಿಯನ್ ಪಬ್ಲಿಕ್ ಸ್ಕೂಲ್‌ಗೆ ಬಾಂಬ್ ಬೆದರಿಕೆಯನ್ನು ಹಾಕಲಾಗಿದೆ. ದೆಹಲಿಯ ದಕ್ಷಿಣ ಜಿಲ್ಲೆಯಲ್ಲಿರುವ ಇಂಡಿಯನ್ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಂಬ್ ಇರುವ ಕುರಿತು ಇಮೇಲ್ ಅನ್ನು ಕಳುಹಿಸಲಾಗಿದೆ.

ಬಾಂಬ್ ಬೆದರಿಕೆಗೆ ಸಂಬಂಧಿಸಿದಂತೆ ಈ-ಮೇಲ್ ಸಂದೇಶವನ್ನು ಕಳುಹಿಸುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಈಗಾಗಲೇ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಯು ದೌಡಾಯಿಸಿದೆ.

Breaking: ಮಂಗಳೂರು ಆಟೋ ಸ್ಪೋಟ ಪ್ರಕರಣ ಎನ್ಐಎಗೆ ಹಸ್ತಾಂತರBreaking: ಮಂಗಳೂರು ಆಟೋ ಸ್ಪೋಟ ಪ್ರಕರಣ ಎನ್ಐಎಗೆ ಹಸ್ತಾಂತರ

South Delhi’s Indian Public School receives Bomb Threat in Email; Disposal Squad At Spot

ಬಾಂಬ್ ನಿಷ್ಕ್ರೀಯ ದಳದ ಸಿಬ್ಬಂದಿಯ ಜೊತೆಗೆೆ ಪೊಲೀಸರು ಸಹ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಬಾಂಬ್ ಬೆದರಿಕೆಯ ಮೂಲ ಯಾವುದು ಎಂಬುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಸಂಬಂಧ ತನಿಖೆಯನ್ನು ಮುಂದುವರಿಸಲಾಗುತ್ತಿದೆ.

ಮಧ್ಯಾಹ್ನ 1.19 ಕ್ಕೆ ಇ-ಮೇಲ್ ಸಂದೇಶ:
ನವದೆಹಲಿಯ "ಸಾದಿಕ್ ನಗರದ ಇಂಡಿಯನ್ ಪಬ್ಲಿಕ್ ಸ್ಕೂಲ್‌ನ ಅಧಿಕೃತ ಖಾತೆಗೆ ಮಧ್ಯಾಹ್ನ 1.19 ಕ್ಕೆ ಇ-ಮೇಲ್ ಬಂದಿದೆ" ಎಂದು ಉಪ ಪೊಲೀಸ್ ಆಯುಕ್ತ (ದಕ್ಷಿಣ) ಚಂದನ್ ಚೌಧರಿ ತಿಳಿಸಿದ್ದಾರೆ.
ಪೊಲೀಸರಿಂದ ಕರೆ ಸ್ವೀಕರಿಸಿದ ಡಿಫೆನ್ಸ್ ಕಾಲೋನಿ ಪೊಲೀಸ್ ಠಾಣೆ ಸಿಬ್ಬಂದಿ, ಬಾಂಬ್ ಸ್ಕ್ವಾಡ್, ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಎಲ್ಲರೂ ಸ್ಥಳಕ್ಕೆ ಆಗಮಿಸಿದರು. ಶಾಲಾ ಆವರಣವನ್ನು ತೆರವು ಮಾಡಿದ ನಂತರ ವ್ಯಾಪಕ ಶೋಧ ನಡೆಸಲಾಗಿದೆ ಎಂದು ಅವರು ಹೇಳಿದರು. ಆದರೆ, ಯಾವುದೇ ಬಾಂಬ್ ಪತ್ತೆಯಾಗಿಲ್ಲ.
"ಬಾಂಬ್ ಸ್ಕ್ವಾಡ್ ಮತ್ತು ಸೈಬರ್ ತಜ್ಞರನ್ನು ತ್ವರಿತವಾಗಿ ಸಂಘಟಿಸಿದ ಪೊಲೀಸರಿಗೆ ನಾವು ಮಾಹಿತಿ ನೀಡಿದ ನಂತರ ನಾವು ಮಕ್ಕಳನ್ನು ಸ್ಥಳಾಂತರಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ನಮ್ಮ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಸುರಕ್ಷತಾ ಪ್ರೋಟೋಕಾಲ್‌ಗಳ ಪ್ರಕಾರ ಅನೇಕ ರಂಗಗಳಲ್ಲಿ ಕಾರ್ಯನಿರ್ವಹಿಸಲು ಯಾವುದೇ ಸಮಯ ಕಳೆದುಹೋಗಿಲ್ಲ, ಇದು ನಮ್ಮ ಪ್ರಮುಖ ಆದ್ಯತೆಯಾಗಿದೆ," ಎಂದು ಘಟನೆ ಕುರಿತು ಶಾಲಾ ಆಡಳಿತ ಮಂಡಳಿ ತಿಳಿಸಿದೆ.

English summary
South Delhi’s Indian Public School receives Bomb Threat in Email; Disposal Squad At Spot. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X