ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ 'ಫಿರ್ ಮೋದಿ' ಟ್ರೆಂಡಿಂಗ್
ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ 'ಫಿರ್ ಮೋದಿ' ಟ್ರೆಂಡಿಂಗ್
Recommended Video

ಹದಿನೇಳನೇ ಲೋಕಸಭೆಗೆ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ. ಹದಿನಾರನೇ ಲೋಕಸಭೆಗೆ ಒಂಬತ್ತು ಹಂತದಲ್ಲಿ ಚುನಾವಣೆ ನಡೆದಿದ್ದರೆ, ಈ ಬಾರಿ ಏಳು ಹಂತದಲ್ಲಿ ಚುನಾವಣೆ ನಡೆಯಲಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 18 ಮತ್ತು 23ರಂದು ನಡೆಯಲಿದೆ. ತಕ್ಷಣದಿಂದಲೇ ಜಾರಿಗೆ ಬರುವಂತೆ ಆಯೋಗ ನೀತಿ ಸಂಹಿತೆ ಜಾರಿಗೆ ತಂದಿದೆ.
ಚುನಾವಣಾ ಆಯೋಗ ದಿನಾಂಕ ಘೋಷಿಸುತ್ತಿದ್ದಂತೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಸಾಲುಸಾಲು ಟ್ವೀಟ್ ಮಾಡಿದ್ದು, ಎಲ್ಲಾ ಅಭ್ಯರ್ಥಿಗಳಿಗೆ ಶುಭ ಕೋರಿದ್ದಾರೆ.
ಇದರ ಜೊತೆಗೆ, ತಮ್ಮ ಸರಕಾರದ ಸಾಧನೆಯನ್ನೂ ಮೋದಿ ಟ್ವೀಟ್ ಮಾಡಿದ್ದಾರೆ. ಈ ನಡುವೆ, 'ಫಿರ್ ಏಕ್ ಬಾರ್ ಮೋದಿ ಸರಕಾರ್' ಹ್ಯಾಷ್ ಟ್ಯಾಗ್ ಟ್ವಿಟ್ಟರ್ ಟ್ರೆಂಡಿಂಗ್ ನಲ್ಲಿದೆ. ಅದರ ಕೆಲವು ಸ್ಯಾಂಪಲ್ ಮುಂದಿದೆ.

ಫಿರ್ ಏಕ್ ಬಾರ್ ಮೋದಿ ಸರಕಾರ್' ಹ್ಯಾಷ್ ಟ್ಯಾಗ್
'ಫಿರ್ ಏಕ್ ಬಾರ್ ಮೋದಿ ಸರಕಾರ್' ಹ್ಯಾಷ್ ಟ್ಯಾಗ್ ಹಾಕಿ, ಬಿಜೆಪಿಯ ಮುಖಂಡರು ಟ್ವೀಟ್ ಮಾಡುತ್ತಿದ್ದು, ಪ್ರಜಾಪ್ರಭುತ್ವದ ಮಹಾಕುಂಭ್ ಆರಂಭವಾಗಿದೆ ಎಂದು ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಟ್ವೀಟ್ ಮಾಡಿದ್ದರೆ, ನೂರಮೂವತ್ತು ಕೋಟಿ ಜನರು ಬಿಜೆಪಿಗೆ ಆಶೀರ್ವಾದ ಮಾಡಬೇಕೆಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮನವಿ ಮಾಡಿದ್ದಾರೆ.

ಕಮಲಕ್ಕೆ ಮುನ್ನೂರು ಸೀಟ್, ಆಮ್ ಆದ್ಮಿ ಪಕ್ಷಕ್ಕೆ ಮುನ್ನೂರು ಓಟ್
ಬಿಜೆಪಿ ಮತ್ತೆ ಅಧಿಕಾರಕ್ಕೆ, 300-320 seats for BJP. 300-325 votes for AAP, 15181 ಚದರಡಿಯ ಮನೆಯಲ್ಲಿ ಸೋನಿಯಾ ಗಾಂಧಿ ನೆಲೆಸಿದ್ದಾರೆ. ರಾಹುಲ್ ಗಾಂಧಿಯ ತಾಯಿ, ದೇಶದ ಶ್ರೀಮಂತ ರಾಜಕಾರಣಿ, ಅವರ ಬಾವ ವಾಣಿಜ್ಯೋದ್ಯಮಿ, ಅವರು ಬೇಲ್ ನಲ್ಲಿದ್ದಾರೆ, ಮೋದಿಯವರನ್ನು ಚೋರ್ ಎನ್ನುವುದು ಹಾಸ್ಯಾಸ್ಪದ ಅಲ್ಲವೇ ಎಂದು ಬಿಜೆಪಿ ಮುಖಂಡ ಅರವಿಂದ್ ಲಿಂಬಾವಳಿ ಹೇಳಿದ್ದಾರೆ.

ಅಭಿವೃದ್ದಿಗಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು
ಭಾರತಕ್ಕೆ ಸುಭದ್ರ ಸರಕಾರ ಬೇಕಿದೆ, 91 ಕೋಟಿ ಜನರಿಗೆ ಮತದಾನದ ಹಕ್ಕಿದೆ, ಹೊಸ ಮತ್ತು ಅಭಿವೃದ್ದಿಗಾಗಿ ಮೋದಿ ಮತ್ತೆ ಪ್ರಧಾನಿಯಾಗಬೇಕು. ಕಳೆದ ಬಾರಿ ಕೇವಲ ಹತ್ತು ಪರ್ಸೆಂಟ್ ಜನರಿಗೆ ಮೋದಿ ಬಗ್ಗೆ ಗೊತ್ತಿತ್ತು, ಈ ಬಾರಿ ಮೋದಿಯವರನ್ನು ಸಂಪೂರ್ಣವಾಗಿ ಅರಿತಿದ್ದೇವೆ, ಫಿರ್ ಸೆ ಮೋದಿ ಎನ್ನುವ ಟ್ವೀಟ್.
|
ನಿಮಗೆ ಹದಿನೈದು ಲಕ್ಷ ಬಂದಿದ್ದಕ್ಕಾ, ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಿದ್ದಕ್ಕಾ
ಯಾಕೆ ಈ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗುತ್ತಿದೆ? ನಿಮಗೆ ಹದಿನೈದು ಲಕ್ಷ ಬಂದಿದ್ದಕ್ಕಾ, ಎರಡು ಕೋಟಿ ಉದ್ಯೋಗ ಸೃಷ್ಟಿಯಾಗಿದ್ದಕ್ಕಾ, ರೈತರ ವರಮಾನ ಹೆಚ್ಚಾಗಿದ್ದಕ್ಕಾ, ರಾಮ ಮಂದಿರ ನಿರ್ಮಾಣ ಆಗಿದ್ದಕ್ಕಾ, ಗಂಗಾ ನದಿ ಕ್ಲೀನ್ ಆಗಿದ್ದಕ್ಕಾ ಎಂದು ಪ್ರಶ್ನಿಸುವ ಟ್ವೀಟ್

ಕಾಂಗ್ರೆಸ್ ಪಕ್ಷವನ್ನು ತಮಾಷೆಯಾಡುವ ಟ್ವೀಟ್
ಮೇ 23ರಂದು ಶ್ರದ್ದಾಂಜಲಿ ಸಭೆ ಎಂದು ಕಾಂಗ್ರೆಸ್ ಪಕ್ಷವನ್ನು ತಮಾಷೆಯಾಡುವ ಟ್ವೀಟ್. ಸ್ಥಳ - ಟೆನ್, ಜನಪಥ್, ದಿನಾಂಕ - ಮೇ 23, ಮುಖ್ಯ ಅತಿಥಿ - ಇಮ್ರಾನ್ ಖಾನ್, ಭಾಷಣಕಾರರು - ಸಿದ್ದು, ಮಣಿಶಂಕರ್ ಐಯ್ಯರ್, ದಿಗ್ವಿಜಯ್ ಸಿಂಗ್, ಬರ್ಖಾ ದತ್, ರಾಜದೀಪ್ ಸರ್ದೇಸಾಯಿ.












Click it and Unblock the Notifications