ಶೀಘ್ರದಲ್ಲೇ, ರೈಲು ಟಿಕೆಟ್ ಕೊಳ್ಳಲು ಆಧಾರ್ ಕಡ್ಡಾಯ!

Posted By:
Subscribe to Oneindia Kannada

ನವದೆಹಲಿ, ಸೆ. 14: ರೈಲು ಟಿಕೆಟ್ ಗಳನ್ನು ಕೊಳ್ಳಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸುವ ಬಗ್ಗೆ ಭಾರತೀಯ ರೈಲ್ವೆ ಇಲಾಖೆಯ ಹೊಸ ನೀತಿ ಸಿದ್ಧಪಡಿಸಿದೆ. ಈ ಹೊಸ ನೀತಿ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿದೆ.

ರೈಲು ಟಿಕೆಟ್‌ಗೆ ಆಧಾರ್ ಕಾರ್ಡ್ ಜೋಡಿಸುವ ಯೋಜನೆ ಜಾರಿಗೆ ಹದಿನೈದು ದಿನದೊಳಗೆ ಪ್ರಕ್ರಿಯೆಗೆ ಸರ್ಕಾರ ಅನುಮೋದನೆ ನೀಡಲಿದೆ ಎಂದು ರೈಲ್ವೆ ಇಲಾಖೆ ಮೂಲಗಳು ಹೇಳಿವೆ.

Soon, Aadhaar cards will be mandatory to book rail tickets

ಈ ಯೋಜನೆ ಅನುಷ್ಠಾನಗೊಂಡರೆ ಕಾಯ್ದಿರಿಸುವ ಹಾಗೂ ಕಾಯ್ದಿರಸಲಾಗದ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಾಗಲಿ ಅಥವಾ ರಿಸರ್ವೇಷನ್ ಟಿಕೆಟ್ ಕೌಂಟರ್‌ನಲ್ಲಾಗಲಿ ಆಧಾರ್ ಕಾರ್ಡ್ ಮಾಹಿತಿಯನ್ನು ನೀಡಿಯೇ ಪಡೆದುಕೊಳ್ಳಬೇಕಾಗುತ್ತದೆ.

ಈ ಯೋಜನೆಯಿಂದಾಗಿ ರೈಲ್ವೆ ಟಿಕೆಟ್ ಮೇಲೆ ರಿಯಾಯಿತಿ ಪಡೆಯಲು ಅನುಕೂಲವಾಗಲಿದೆ. ಸುಮಾರು 50 ಕ್ಕೂ ವಿಷಯಗಳಲ್ಲಿ ರಿಯಾಯಿತಿ ಸಿಗುತ್ತದೆ. ಜೊತೆಗೆ ಅಧಿಕೃತ ಬುಕ್ಕಿಂಗ್ ಸೆಂಟರ್ ನಿಂದ ಟಿಕೆಟ್ ಬುಕ್ ಆಗಿದ್ದಕ್ಕೆ ಖಾತ್ರಿ ಸಿಗಲಿದೆ.

ಇದಕ್ಕಿಂತ ಮುಖ್ಯವಾಗಿ ಆನ್ ಲೈನ್ ಬುಕ್ಕಿಂಗ್ ಮಾಡಿದವರಿಗೆ ಸಿಗುತ್ತಿದ್ದ ವಿಮೆಯ ಬಗ್ಗೆ ಇಲಾಖೆಗೆ ಪಾರದರ್ಶಕತೆ ಸಿಗಲಿದೆ ಎಂದು ಐಆರ್ ಸಿ ಟಿಸಿ ಚೇರ್ಮನ್ ಮೊನೊಚಾ ಹೇಳಿದರು.'

ಆಧಾರ್ ಆಧಾರಿತ ಟಿಕೆಟ್ ಬುಕ್ ಮಾಡುವ ಹಿರಿಯ ನಾಗರಿಕರಿಗೆ ರಿಯಾಯಿತಿ ದರವನ್ನು ಡಿಸೆಂಬರ್ ನಿಂದ ನೀಡುವ ಸಾಧ್ಯತೆಯಿದೆ. ಸದ್ಯ ಪುರುಷರ ಹಿರಿಯ ನಾಗರಿಕರಿಗೆ ಶೇ 40 ಹಾಗೂ ಮಹಿಳಾ ಹಿರಿಯ ನಾಗರಿಕರಿಗೆ ಶೇ 50 ರಷ್ಟು ರಿಯಾಯಿತಿ ಸಿಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Soon, Aadhaar cards will be mandatory to book rail tickets, according to a new IRCTC directive. The move, which is probably one of the biggest of its kind, to push for an Aadhaar card-based ecosystem in India, would eventually force more and more rail commuters to apply for one.
Please Wait while comments are loading...