ತೆಲಂಗಾಣ ರ್‍ಯಾಲಿಯಲ್ಲಿ 'ಭಾರತ ಮಾತೆ'ಯಾಗಿ ವಿಜೃಂಭಿಸಿದ ಸೋನಿಯಾ ಗಾಂಧಿ

ಹೈದರಾಬಾದ್ ಸೆಪ್ಟೆಂಬರ್ 18: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ತುಕ್ಕುಗುಡ ಪ್ರದೇಶದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಪಕ್ಷದ ಮುಖಂಡರ ಹೋರ್ಡಿಂಗ್‌ಗಳನ್ನು ಹಾಕಲಾಗಿದೆ. ಈ ಹೋರ್ಡಿಂಗ್‌ಗಳಲ್ಲಿ ಸೋನಿಯಾ ಗಾಂಧಿ ಅವರನ್ನು ಭಾರತ ಮಾತೆ ಎಂದು ತೋರಿಸಲಾಗಿದೆ.

ಕಾಂಗ್ರೆಸ್ ಭಾನುವಾರ (ಸೆಪ್ಟೆಂಬರ್ 17) ಸಾರ್ವಜನಿಕರ ರ್‍ಯಾಲಿ ನಡೆಸಿತು. ಇದರ ಪ್ರಯುಕ್ತ ಬೃಹತ್ ಗಾತ್ರದ ಹೋರ್ಡಿಂಗ್ಗಳನ್ನು ಹಾಕಲಾಗಿತ್ತು. ಇದರಲ್ಲಿ ಸೋನಿಯಾ ಗಾಂಧಿಯನ್ನು ಭಾರತ ಮಾತೆಯಂತೆ ಬಿಂಬಿಸಲಾಗಿದೆ.

Sonia Gandhi who flourished as Mother India in Telangana rally

ತೆಲಂಗಾಣ ವಿಧಾನಸಭೆ ಚುನಾವಣೆಗೆ ಗಡುವು ಸಮೀಪಿಸುತ್ತಿದೆ. ಸಂಸತ್ತಿನ ವಿಶೇಷ ಅಧಿವೇಶನಗಳಲ್ಲಿ ಒಂದು ರಾಷ್ಟ್ರ, ಒಂದು ಚುನಾವಣಾ ಮಸೂದೆಯನ್ನು ಮಂಡಿಸಿದರೆ, ರಾಜಕೀಯ ಮುಖವೇ ಬದಲಾಗುತ್ತದೆ. ಇದರ ನಡುವೆ 2024ರವರೆಗೆ ವಿಧಾನಸಭೆ ಚುನಾವಣೆ ಮುಂದೂಡುವ ಸಾಧ್ಯತೆ ಇಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಈ ಬೆಳವಣಿಗೆಗಳ ನಡುವೆ ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಸಮಿತಿಯು ತನ್ನ ಹಾದಿಯನ್ನು ಬದಲಾಯಿಸಿದೆ. ತೆಲಂಗಾಣದಲ್ಲಿ ಅಧಿಕಾರಕ್ಕೆ ಬರಲು ಕರ್ನಾಟಕ ಮಾದರಿಯ ಸೂತ್ರವನ್ನು ಮುನ್ನೆಲೆಗೆ ತರಲಾಗಿದೆ. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತಂದ ಯೋಜನೆಗಳನ್ನು ಇಲ್ಲಿಯೂ ಘೋಷಿಸಲಾಯಿತು. ಕಾಂಗ್ರೆಸ್ ಒಟ್ಟು ಆರು ಖಾತ್ರಿ ಯೋಜನೆಗಳನ್ನು ಜನರ ಮುಂದಿಟ್ಟಿದೆ. ಇದರಲ್ಲಿ ಪ್ರಮುಖವಾದದ್ದು ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಮಹಿಳೆಯರಿಗೆ ಆರ್ ಟಿಸಿ ಬಸ್ ಗಳಲ್ಲಿ ಉಚಿತ ಪ್ರಯಾಣವನ್ನು ಘೋಷಿಸಿದೆ. ತುಕ್ಕುಗುಡದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಖುದ್ದು ಸೋನಿಯಾ ಗಾಂಧಿ ಈ ಘೋಷಣೆ ಮಾಡಿದ್ದಾರೆ.

ತೆಲಂಗಾಣದಲ್ಲಿ ಅಧಿಕಾರಕ್ಕೆ ಬಂದರೆ ರಾಜ್ಯಾದ್ಯಂತ ಮಹಿಳೆಯರಿಗೆ ಟಿಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸುವುದಾಗಿ ಹೇಳಿದರು. ಅಲ್ಲದೆ- ಮಹಾಲಕ್ಷ್ಮಿ ಯೋಜನೆಯಡಿ ತೆಲಂಗಾಣದ ಮಹಿಳೆಯರಿಗೆ ಮಾಸಿಕ 2,500 ರೂ.ಗಳ ಆರ್ಥಿಕ ನೆರವು ನೀಡಲಾಗುವುದು ಎಂದು ಸೋನಿಯಾ ಗಾಂಧಿ ಹೇಳಿದರು. ಗೃಹಲಕ್ಷ್ಮಿ ಹೆಸರಿನ ಈ ಯೋಜನೆ ಕರ್ನಾಟಕದಲ್ಲೂ ಜಾರಿಯಲ್ಲಿದೆ. ಅಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರತಿ ತಿಂಗಳು 2,000 ರೂಪಾಯಿ ನೀಡುತ್ತಿದೆ. 500 ರೂಪಾಯಿಗೆ ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿ ಸೋನಿಯಾ ಗಾಂಧಿ ಘೋಷಿಸಿದ್ದಾರೆ.

ಅಧಿಕಾರಕ್ಕೆ ಬಂದ ಕೂಡಲೇ ಗೃಹಜ್ಯೋತಿ ಯೋಜನೆ ಜಾರಿಗೊಳಿಸುವುದಾಗಿ ಸೋನಿಯಾ ಭರವಸೆ ನೀಡಿದ್ದಾರೆ. ಈ ಯೋಜನೆಯಡಿ ಗೃಹಬಳಕೆಯ ಗ್ರಾಹಕರಿಗೆ ಪ್ರತಿ ತಿಂಗಳು 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್‌ ಪೂರೈಕೆ ಮಾಡಲಾಗುವುದು ಎಂದರು. ಪ್ರಸ್ತುತ ಕರ್ನಾಟಕದಲ್ಲಿ ಇದೇ ರೀತಿಯ ಯೋಜನೆ ಜಾರಿಯಲ್ಲಿದ್ದು, 200 ಯೂನಿಟ್‌ಗಳಿಗೆ ಒಂದು ರೂಪಾಯಿಯೂ ಬಿಲ್ ನೀಡಲಾಗುವುದಿಲ್ಲ.

ಇಂದಿರಮ್ಮ ಮನೆಗಳ ಅಡಿಯಲ್ಲಿ ಸ್ವಂತ ಜಮೀನು ಹೊಂದಿರದ ಎಲ್ಲ ಮಹಿಳೆಯರಿಗೆ ಮನೆ ನಿರ್ಮಾಣಕ್ಕೆ ಐದು ಲಕ್ಷ ರೂಪಾಯಿ ಧನಸಹಾಯ ನೀಡಲಾಗುವುದು ಎಂದರು. ತೆಲಂಗಾಣ ಚಳವಳಿಯಲ್ಲಿ ಹೋರಾಡಿದ ಎಲ್ಲರಿಗೂ 250 ಚದರ ಅಡಿ ನಿವೇಶನ ನೀಡಲಾಗುವುದು ಎಂದರು. ವಿದ್ಯಾ ಭರೋಸಾ ಕಾರ್ಡ್ ಅಡಿಯಲ್ಲಿ ಐದು ಲಕ್ಷ ರೂಪಾಯಿಗಳವರೆಗೆ ಆರ್ಥಿಕ ನೆರವು ನೀಡುತ್ತದೆ.

ಇದೇ ವೇಳೆ ತುಕ್ಕುಗುಡ ಸಭಾಭವನದ ಕಟೌಟ್ ಆಕರ್ಷಕವಾಗಿದೆ. ಇದರಲ್ಲಿ ಸೋನಿಯಾ ಗಾಂಧಿ ಅವರನ್ನು ಭರತ ಮಾತೆ ಎಂದು ಬಿಂಬಿಸಲಾಗಿತ್ತು. ಭರತ ಮಾತೆಯ ಕಟೌಟ್ ಮೇಲೆ ಸೋನಿಯಾ ಗಾಂಧಿ ಮುಖ ಅಂಟಿಸಲಾಗಿದೆ. ಸಭಾಭವನದ ಸುತ್ತಮುತ್ತ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಮಲ್ಲು ಭಟ್ಟಿ ವಿಕ್ರಮಾರ್ಕ, ರೇವಂತ್ ರೆಡ್ಡಿ, ಉತ್ತಮ್ ಕುಮಾರ್ ರೆಡ್ಡಿ ಕಟೌಟ್, ಫ್ಲೆಕ್ಸ್, ಬ್ಯಾನರ್ ಗಳನ್ನು ವ್ಯಾಪಕವಾಗಿ ಹಾಕಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+