ಜಮ್ಮು ಮತ್ತು ಕಾಶ್ಮೀರದ ಕುಪ್ವಾರದಲ್ಲಿ ಮತ್ತೆ ಉಗ್ರರ ಆರ್ಭಟ: ಓರ್ವ ಯೋಧ ಹುತಾತ್ಮ
ಬೆಂಗಳೂರು, ಜುಲೈ. 27: ಗಡಿನಾಡಿನ ಕುಪ್ವಾರ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಉಗ್ರರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು, ಐವರು ಗಾಯಗೊಂಡಿದ್ದಾರೆ. ಗಾಯಗೊಂಡ ಯೋಧರನ್ನು ಶ್ರೀನಗರಕ್ಕೆ ಸ್ಥಳಾಂತರಿಸಲಾಗಿದ್ದು, ಉಗ್ರರ ವಿರುದ್ಧ ಕಾರ್ಯಾಚರಣೆ ಪ್ರಗತಿಯಲ್ಲಿದೆ.
ನಿನ್ನೆಯಷ್ಟೇ ಕಾರ್ಗಿಲ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಅವರ ನೀಚ ಪ್ಲ್ಯಾನ್‌ಗಳು ಎಂದಿಗೂ ಯಶಸ್ವಿಯಾಗುವುದಿಲ್ಲ ಮತ್ತು ಶತ್ರುಗಳಿಗೆ ಬಲವಾದ ಪ್ರತಿಕ್ರಿಯೆಯನ್ನು ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇದಾದ ಒಂದು ದಿನದ ನಂತರ ಶಂಕಿತ ಉಗ್ರರು ಒಳನುಸುಳಿದ್ದು, ಗುಂಡಿನ ಚಕಮಕಿ ನಡೆದಿದೆ.

ಕುಪ್ವಾರದ ಮಚಿಲ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಕುಮ್ಕಾರಿ ಪೋಸ್ಟ್ ಬಳಿ ಶನಿವಾರ ಬೆಳಗ್ಗೆ ಶಂಕಿತ ಉಗ್ರರ ಚಲನವಲನವನ್ನು ಭದ್ರತಾ ಪಡೆಗಳು ಪತ್ತೆ ಹಚ್ಚಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಭದ್ರತಾ ಪಡೆಗಳು ಉಗ್ರರಿಗೆ ಸವಾಲೆಸೆಯುತ್ತಿದ್ದಂತೆ ಗುಂಡಿನ ದಾಳಿ ನಡೆಸಿದ್ದು, ಗುಂಡಿನ ಚಕಮಕಿ ನಡೆದಿದೆ.
ಮೂಲಗಳ ಪ್ರಕಾರ ಉಗ್ರರು ನಡೆಸಿದ ಆರಂಭಿಕ ಗುಂಡಿನ ದಾಳಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆಸ್ಥಳಾಂತರಿಸಲಾಯಿತು. ಗಾಯಗೊಂಡ ಸೈನಿಕರನ್ನು ನಂತರ ಶ್ರೀನಗರದಲ್ಲಿರುವ ಸೇನೆಯ 92 ಮೂಲ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹಿರಿಯ ಪೊಲೀಸ್ ಅಧಿಕಾರಿ ಗಾಯಗೊಂಡಿರುವುದನ್ನು ದೃಢಪಡಿಸಿದ್ದಾರೆ.
"ಇದು ಪ್ರಾಥಮಿಕ ಮಾಹಿತಿ. ಗಡಿ ನಿಯಂತ್ರಣ ರೇಖೆಗೆ ಸಮೀಪದಲ್ಲಿರುವ ಕಾರಣ ಆ ಪ್ರದೇಶದಿಂದ ಮಾಹಿತಿ ಸಂಗ್ರಹಿಸಲು ಸಮಯ ತೆಗೆದುಕೊಳ್ಳುತ್ತದೆ'' ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವಿಟರ್ ಪೋಸ್ಟ್‌ನಲ್ಲಿ ಸೇನೆಯು, ಗುಂಡಿನ ಚಕಮಕಿಯಲ್ಲಿ ತನ್ನ ಇಬ್ಬರು ಸೈನಿಕರು ಗಾಯಗೊಂಡಿದ್ದಾರೆ. ಒಬ್ಬ ಉಗ್ರಗಾಮಿ ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿದೆ.
"ನಿಯಂತ್ರಣ ರೇಖೆಯ ಕುಮ್ಕರಿಯಲ್ಲಿ ಫಾರ್ವರ್ಡ್ ಪೋಸ್ಟ್‌ನಲ್ಲಿ ಅಪರಿಚಿತ ವ್ಯಕ್ತಿಗಳೊಂದಿಗೆ ಗುಂಡಿನ ಚಕಮಕಿ ನಡೆದಿದೆ. ಒಬ್ಬ ಪಾಕಿಸ್ತಾನಿ ವ್ಯಕ್ತಿ ಸಾವನ್ನಪ್ಪಿದ್ದು, ನಮ್ಮ ಇಬ್ಬರು ಸೈನಿಕರು ಗಾಯಗೊಂಡಿದ್ದು, ಅವರನ್ನು ಸ್ಥಳಾಂತರಿಸಲಾಗಿದೆ. ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ" ಎಂದು ಸೇನೆಯ ಚಿನಾರ್ ಕಾರ್ಪ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
ಇನ್ನು, ಜುಲೈ 15 ರಂದು ದೋಡಾದ ದೇಸಾದಲ್ಲಿ ಆರ್ಮಿ ಕ್ಯಾಪ್ಟನ್ ಸೇರಿದಂತೆ ನಾಲ್ವರು ಸೈನಿಕರನ್ನು ಹತ್ಯೆಗೈದ ದಾಳಿಯ ಹಿಂದೆ ಮೂವರು ಉಗ್ರಗಾಮಿಗಳ ರೇಖಾಚಿತ್ರಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಈ ಉಗ್ರರು ದೋಡಾ ಮತ್ತು ದೇಸಾದ ಮೇಲ್ಭಾಗದಲ್ಲಿದ್ದಾರೆ. ಜುಲೈ 15 ರಂದು ಉರಾರ್ ಬಾಗಿಯಲ್ಲಿ ನಡೆದ ದಾಳಿಯಲ್ಲಿ ಭಾಗಿಯಾಗಿದ್ದಾರೆ. ಪೊಲೀಸರು ಪ್ರತಿ ಉಗ್ರರಿಗೆ 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ. ಮಾಹಿತಿ ನೀಡುವವರನ್ನು ಗೌಪ್ಯವಾಗಿಡಲಾಗುವುದು ಎಂದು ತಿಳಿಸಿದೆ.
ಈ ಕೆಳಗಿನ ಸಂಪರ್ಕ ಸಂಖ್ಯೆ(ಗಳು) ಎಸ್‌ಎಸ್‌ಪಿ ದೋಡಾ-9541904201, ಎಸ್‌ಪಿ ಎಚ್‌ಕ್ಯೂಆರ್‌ಎಸ್ ದೋಡಾ-9797649362, 9541904202, ಎಸ್‌ಪಿ ಒಪಿಎಸ್ 4319, ಎಸ್‌ಪಿ ಒಪಿಎಸ್ 4319, ಡಿವೈಎಸ್ಪಿ ದಾರ್ ದೊಡಾ-9541904205, ಡಿವೈ. SP HQRS ದೋಡಾ-9541904207, SHO PS ದೋಡಾ-9419163516, 9541904211, SHO PS DESSA-8082383906, IC PP ಬಾಗ್ಲಾ ಭಾರತ್-7051484314, 3950 ಪಿಸಿಆರ್.ಡಿ.ಆರ್ , 7298923100, 9469365174, 9103317361 ಭಯೋತ್ಪಾದಕರ ಉಪಸ್ಥಿತಿ / ಚಲನವಲನದ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ (ಜಿಲ್ಲಾ ದೋಡಾ) ಸಾರ್ವಜನಿಕರಿಗೆ ಮನವಿ ಮಾಡಿದೆ.












Click it and Unblock the Notifications