ಸೋಲಾರ್ ಹಗರಣ: ಸರಿತಾ, ಬಿಜುಗೆ ಮೂರು ವರ್ಷ ಜೈಲು!

Posted By:
Subscribe to Oneindia Kannada

ತಿರುವನಂತಪುರಂ, ಡಿಸೆಂಬರ್ 17: ಕೇರಳದ ಬಹುಕೋಟಿ ಸೋಲಾರ್‌ ಹಗರಣದ ಪ್ರಮುಖ ಆರೋಪಿಗಳಾದ ಬಿಜು ರಾಧಾಕೃಷ್ಣನ್‌ ಹಾಗೂ ಸರಿತಾ ಎಸ್‌. ನಾಯರ್‌ ಅವರಿಗೆ ಕೊಚ್ಚಿಯ ಕೋರ್ಟ್ ನಿಂದ ಶಿಕ್ಷೆ ಪ್ರಕಟಿಸಲಾಗಿದೆ.

ಸರಿತಾ ಹಾಗೂ ಬಿಜು ಅವರಿಗೆ ಕೊಚ್ಚಿಯ ಪೆರುಂಬವೂರಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ 3 ವರ್ಷ ಜೈಲು ಶಿಕ್ಷೆ ಹಾಗೂ ತಲಾ₹10ಸಾವಿರ ದಂಡ ವಿಧಿಸಿದೆ. ಆದರೆ, ನಟಿ ಶಾಲು ಮೆನನ್ ಅವರನ್ನು ಖುಲಾಸೆಗೊಳಿಸಿದೆ. ಸರಿ ಸುಮಾರು 33 ಪ್ರಕರಣಗಳಿದ್ದು, ಇದು ಮೊದಲ ಆದೇಶವಾಗಿದೆ.

Solar Scam : Saritha S Nair and Biju convicted, Shalu Menon acquitted

ಸೋಲಾರ್‌ ವಿದ್ಯುತ್‌ ಯೋಜನೆಯಲ್ಲಿ ಪಾಲುದಾರಿಕೆ ಕೊಡಿಸುವುದಾಗಿ 40 ಲಕ್ಷ ರು ನೀಡಿ, ಉದ್ಯಮಿ ಪಿ ಸಜ್ಜದ್ ಅವರಿಗೆ ವಂಚನೆ ಮಾಡಿದ ಆರೋಪದಲ್ಲಿ ಇಬ್ಬರನ್ನು ದೋಷಿ ಎಂದು ಘೋಷಿಸಲಾಗಿದೆ.

ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್ ಅವರು ಪತ್ನಿ ಹತ್ಯೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಬಿಜು ಅವರ ತಾಯಿ ರಾಜಾಮ್ಮಲ್ ಅವರಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರು ದಂಡ ಹಾಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Solar Scam: A Kerala court on Friday sentenced Saritha Nair and Biju Radhakrishnan, prime accused in the sensational solar scam, to three years in jail and slapped a fine of Rs 10,000 each.
Please Wait while comments are loading...