ಸೋಲಾರ್ ಹಗರಣ ಆರೋಪಿ ಸರಿತಾ ನಗ್ನ ಚಿತ್ರ ಲೀಕ್?
ತಿರುವನಂತಪುರಂ, ಅ.14: ಸೋಲಾರ್ ಹಗರಣದ ಮುಖ್ಯ ಆರೋಪಿ ಸರಿತಾ ಎಸ್ ನಾಯರ್ ಅವರ ನಗ್ನ ಚಿತ್ರಗಳು ಪೋರ್ನ್ ವಿಡಿಯೋಗಳು ವ್ಯಾಟ್ಸಾಪ್ ನಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸರಿತಾ, ನಾನೇನು ಇದರಿಂದ ವಿಚಲಿತಳಾಗಿಲ್ಲ ಈ ರೀತಿ ಕುತಂತ್ರಕ್ಕೆ ನಾನು ಬಲಿಯಾಗಲಾರೆ ಎಂದಿದ್ದಾರೆ.
ಕೇರಳ ಸರ್ಕಾರವನ್ನೇ ಅಲುಗಾಡಿಸಿದ್ದ ಸೋಲಾರ್ ಹಗರಣದ ಪ್ರಮುಖ ಆರೋಪಿ ಸರಿತಾ ಸದ್ಯೆಕ್ಕೆ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದಾರೆ. ನಾನು ಆತ್ಮಹತ್ಯೆ ಮಾಡಿಕೊಳ್ಳಲಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ನಗ್ನ ಚಿತ್ರಗಳು ವಿಡಿಯೋಗಳು ಹರಿದಾಡುವಂತೆ ಮಾಡಿದ್ದಾರೆ. ನಾನು ಸಾಯುವುದಿಲ್ಲ ಕಾನೂನು ಪ್ರಕಾರ ಹೋರಾಟ ನಡೆಸುತ್ತೇನೆ ಎಂದಿದ್ದಾರೆ.

ಅದರೆ, ಸರಿತಾ ಅವರು ಇನ್ನೂ ವಿವಾದಿತ ಫೋಟೋಗಳನ್ನು ನೋಡಿಲ್ಲವಂತೆ. ನಗ್ನ ಚಿತ್ರಗಳನ್ನು ವಾಟ್ಸ್‌ಅಪ್‌ಗೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ.ನನಗೆ ಈಗಾಗಲೇ ಜೀವ ಬೆದರಿಕೆ ಇದೆ. ನಾನು ಸಾಯಲಿ ಎಂದು ಹಲವರು ಬಯಸಿದ್ದಾರೆ. ನಾನು ಸತ್ತರೆ ನನ್ನ ಜೊತೆಗೆ ಸತ್ಯ ಸಾಯಲಿದೆ. ನಾನು ಬಾಯ್ಬಿಟ್ಟರೆ ಅನೇಕ ಗಣ್ಯರ ಬದುಕು ಹಾಳಾಗುತ್ತದೆ ಎಂದು ಸರಿತಾ ಎರನಿಪಾಲಂ ಸೆಷನ್ಸ್ ಕೋರ್ಟ್ ಬಳಿ ಸುದ್ದಿಗಾರರಿಗೆ ಹೇಳಿದ್ದಾರೆ.['ಸೋಲಾರ್' ಸುಂದರಿಯರು]
ಕಳೆದ ವರ್ಷ ಸೋಲಾರ್ ಹಗರಣ ಮುಖ್ಯಮಂತ್ರಿ ಕುರ್ಚಿಯನ್ನೇ ಅಲ್ಲಾಡಿಸಿತ್ತು. ಸಿಎಂ ಕಚೇರಿ ಸಿಬ್ಬಂದಿಯಿಂದ ಹಿಡಿದು ಕ್ಯಾಬಿನೆಟ್ ನ ಅನೇಕ ಸಚಿವರು ಹಗರಣದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿತ್ತು. ನನ್ನ ಪ್ರಾಣಕ್ಕೆ ಅಪಾಯವಿದ್ದರೂ ಪೊಲೀಸರು ಭದ್ರತೆ ನೀಡಿಲ್ಲ, ನನ್ನದು ಎನ್ನಲಾದ ನಗ್ನಚಿತ್ರಗಳು ಹರಿದಾಡುತ್ತಿದ್ದರೂ ಸೈಬರ್ ಪೊಲೀಸರು ದೂರು ದಾಖಲಿಸಿಕೊಂಡಿಲ್ಲ ಏಕೆ? ಎಂದು ಸರಿತಾ ಆರೋಪಿಸಿದ್ದಾಳೆ.
ಸೋಲಾರ್ ಪ್ಯಾನೆಲ್ ಹಗರಣದಲ್ಲಿ ಉಮ್ಮನ್ ಚಾಂಡಿ ಅವರ ಕಾಂಗ್ರೆಸ್ ಸರ್ಕಾರದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾಬಿನೆಟ್ ಸಚಿವರು ಭಾಗಿಯಾಗಿರುವುದು ಪತ್ತೆಯಾಗಿತ್ತು. ಪ್ರಮುಖ ಆರೋಪಿ ಬಿಜು ರಾಧಾಕೃಷ್ಣನ್ ಜೊತೆ ಲಿವ್ ಇನ್ ಸಂಬಂಧದಲ್ಲಿದ್ದ ಗೆಳತಿ ಸರಿತಾ ನಾಯರ್ ಇಲ್ಲಿ ಕಾರ್ಪೊರೇಟ್ ಲಾಬಿಗಾರ್ತಿ ಪಾತ್ರವಹಿಸಿ ಊಮಾನ್ ಚಾಂಡಿ ಸರ್ಕಾರದ ಬಹುತೇಕ ಸಚಿವರು, ಶಾಸಕರನ್ನು ಬಲೆಗೆ ಬೀಸಿದ ಪೂರ್ಣ ಕಥೆ ಇಲ್ಲಿದೆ ಓದಿ












Click it and Unblock the Notifications