ಸಾಮಾಜಿಕ ಜಾಲತಾಣದಲ್ಲಿ ಮೂಡಿದ 'ವಿವೇಕ ಪ್ರಭೆ'
ಬೆಂಗಳೂರು, ಜ, 12: ಜನವರಿ 12 ಸ್ವಾಮಿ ವಿವೇಕಾನಂದರ ಜನ್ಮದಿನ. 1893 ರ ಷಿಕಾಕೊ ಸಮ್ಮೇಳನದಲ್ಲಿ ವಿಶ್ವಕ್ಕೆ ಮತ್ತೊಮ್ಮೆ ಭಾರತೀಯ ಪರಂಪರೆ ಪರಿಚಯ ಮಾಡಿಕೊಟ್ಟ ಯೋಗಿಯ ಜನ್ಮದಿನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದಿದೆ.
ಫೇಸ್ ಬುಕ್ ಮತ್ತು ಟ್ವಿಟ್ಟರ್ ಗಳಲ್ಲಿ ಯುವಕರು ತಮ್ಮ ಅಭಿಪ್ರಾಯಗಳನ್ನು ಹರಿಯಬಿಟ್ಟಿದ್ದಾರೆ. ಯುವಕರ ದಿನಾಚರಣೆ ಹಿನ್ನೆಲೆಯಲ್ಲಿ ದೇಶ ಎದುರಿಸುತ್ತಿರುವ ಸಮಸ್ಯೆಗಳು , ಅದಕ್ಕೆ ಕಂಡುಕೊಳ್ಳಬೇಕಾದ ಉತ್ತರ, ವಿವೇಕಾನಂದರ ನೀತಿ ಅಳವಡಿಸಿಕೊಳ್ಳುವ ಬಗೆ ಈ ರೀತಿ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರ ಆದರ್ಶ ತಮಗೆ ಸ್ಫೂರ್ತಿ ಎಂದು ಟ್ವಿಟ್ ಮಾಡಿರುವುದಲ್ಲದೇ ಪ್ರತಿಮೆಗೆ ನಮಿಸುತ್ತಿರುವ ಫೋಟೋ ಹಾಕಿದ್ದಾರೆ. ಸಂಸದ ರಾಜೀವ್ ಚಂದ್ರಶೇಖರ್, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಅನೇಕರು ಟ್ವೀಟ್ ಮಾಡಿದ್ದಾರೆ. ವಿವೇಕಾನಂದರ ಷಿಕಾಗೋ ಭಾಷಣದ ಸಾಲುಗಳು, ಫೋಟೋಗಳು, ರಾಮಕೃಷ್ಣ ಪರಮಹಂಸರೊಂದಿಗಿನ ಚಿತ್ರಗಳನ್ನು ನೋಡಬಹುದಾಗಿದೆ.
स्वामी विवेकानंद को उनकी जयंती पर शत् शत् नमन pic.twitter.com/uIM6tgSG3k
— Narendra Modi (@narendramodi) January 12, 2015 ವಿವೇಕಾನಂದರ ಜನ್ಮದಿನಕ್ಕೆ ಕೆಲ ದಿನಗಳ ಹಿಂದಯೇ ಫೇಸ್ ಬುಕ್ ನಲ್ಲಿ ಅಭಿಯಾನಗಳು ಆರಂಭವಾಗಿವೆ. ಇಂದಿನಿಂದಲೇ ಚಿಕ್ಕ ಚಿಕ್ಕ ಒಳ್ಳೆ ಕೆಲಸ ಆರಂಭಿಸೋಣ ಎಂಬ 'ಉತ್ತಮನಾಗು ಉಪಕಾರಿಯಾಗು' ಅಭಿಯಾನ, ಸ್ವಚ್ಛತೆಗೆ ಆದ್ಯತೆ ನೀಡಿ ಎಂಬ ಧ್ಯೇಯ ವಾಕ್ಯ ಇಟ್ಟುಕೊಂಡಿರುವ 'ಲೆಟ್ ಅಸ್ ಡೂ ಅವರ್ ಬಿಟ್' ಯುವಕರ ಭಾಗವಹಿಸುವಿಕೆಗೆ ಪ್ರೇರಣೆ ನೀಡಿವೆ.
Take risks in your #life If you win, you can lead,if you loose, you can guide #swamivivekananda #bethankful #thankgod pic.twitter.com/70HgGNbuag
— Lifelessons (@AshikaShandil) September 19, 2014 ಟ್ವಿಟ್ ಗಳಲ್ಲಿ ವ್ಯಕ್ತವಾದ ವಿವೇಕಪ್ರಭೆ
* ದಿನಕ್ಕೆ ಒಮ್ಮೆಯಾದರೂ ನಿಮ್ಮ ಜತೆ ನೀವೇ ಮಾತನಾಡಿಕೊಳ್ಳಿ, ಇಲ್ಲವಾದರೆ ಜಗತ್ತಿನ ಅತ್ಯುತ್ತಮ ವ್ಯಕ್ತಿಯೊಂದಿಗಿನ ಸಂಭಾಷಣೆ ಕಳೆದುಕೊಳ್ಳುತ್ತೀರಿ.
* ನಿಮ್ಮ ಸ್ವಾರ್ಥಕ್ಕೆ ಮಾಡುವ ಕೆಲಸ ಎಂದಿಗೂ ಧರ್ಮವಾಗಲ್ಲ
* ನಿನ್ನ ಆತ್ಮಕ್ಕಿಂತ ದೊಡ್ಡ ಗುರು ಬೇರೊಂದಿಲ್ಲ
On his birth anniversary, I bow to Swami Vivekananda. He is a personal inspiration, whose thoughts & ideals have influenced me deeply.
— Narendra Modi (@narendramodi) January 12, 2015 * ಶಕ್ತಿಯೇ ಜೀವನ, ನಿರಾಸಕ್ತಿಯೇ ಮರಣ
* ನಿಮಗೆ ಸಹಾಯ ಮಾಡಿದವರನ್ನು ಮರೆಯಬೇಡ, ತಿರಸ್ಕರಿಸುವವರಿಗೆ ಕೆಟ್ಟದ್ದು ಬಯಸಬೇಡ, ನಂಬಿಕೆ ಇಟ್ಟವರಿಗೆ ಮೋಸ ಮಾಡಬೇಡ
* ಅರ್ಥವಿಲ್ಲದೇ ಬೇರೆಯವರನ್ನು ದೂಷಿಸುವುದು ನಮ್ಮನ್ನು ನಾವು ದೂಷಿಸಿಕೊಂಡಂತೆ
* ಸಮಯ ಮತ್ತು ಅವಕಾಶ ನಿನ್ನ ಹುಡುಕಿಕೊಂಡು ಬರಲ್ಲ, ಅದನ್ನು ನೀನು ಹಿಂಬಾಲಿಸಬೇಕಾಗುತ್ತದೆ.
This is the time of ur life when ur full of zeal to work & to achieve. #NationalYouthDay #SwamiVivekananda
— Vijay Kumar Singh (@Gen_VKSingh) January 12, 2015 











Click it and Unblock the Notifications