• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಸಿಕೆ ನೀತಿ ವಿರುದ್ದದ ರಾಹುಲ್‌ ಟ್ವೀಟ್‌ಗೆ ಕಬೀರದಾಸರ ಕಾವ್ಯದ ಮೂಲಕ ಸ್ಮೃತಿ ಇರಾನಿ ತಿರುಗೇಟು

|
Google Oneindia Kannada News

ನವದೆಹಲಿ, ಜೂ. 10: ಕೇಂದ್ರದ ಕೋವಿಡ್ -19 ಲಸಿಕೆ ನೀತಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚಿನ ಟೀಕೆಗಳಿಗೆ, ವಿಶೇಷವಾಗಿ ಆನ್‌ಲೈನ್ ನೋಂದಣಿಗೆ ಸಂಬಂಧಿಸಿದ ಟೀಕೆಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ತೀವ್ರ ಖಂಡನೆ ವ್ಯಕ್ತಪಡಿಸಿದ್ದಾರೆ.

''ವ್ಯಾಕ್ಸಿನೇಷನ್ ಕೇಂದ್ರಕ್ಕೆ ಕಾಲಿಡುವ ಪ್ರತಿಯೊಬ್ಬ ವ್ಯಕ್ತಿಗೂ ಲಸಿಕೆ ನೀಡಬೇಕು. ಇಂಟರ್ನೆಟ್ ಬಳಕೆಯ ಸೌಲಭ್ಯ ಇಲ್ಲದ ಜನರಿಗೂ ಜೀವಿಸುವ ಹಕ್ಕಿದೆ'' ಎಂದು ರಾಹುಲ್‌ ಗಾಂಧಿ ಹೇಳಿದ್ದರು.

ಕೊರೊನಾ ಲಸಿಕೆ ಕೊರತೆ ನಡುವೆ ಟ್ವಿಟ್ಟರ್ ನೀಲಿ ಗುರುತಿಗಾಗಿ ಕಾದಾಟ!ಕೊರೊನಾ ಲಸಿಕೆ ಕೊರತೆ ನಡುವೆ ಟ್ವಿಟ್ಟರ್ ನೀಲಿ ಗುರುತಿಗಾಗಿ ಕಾದಾಟ!

ಈ ಬಗ್ಗೆ ಟ್ವೀಟ್‌ ಮಾಡಿದ್ದ ರಾಹುಲ್‌ ಗಾಂಧಿ, ''ಲಸಿಕೆಗಾಗಿ ಆನ್‌ಲೈನ್ ನೋಂದಣಿ ಸಾಕಾಗುವುದಿಲ್ಲ. ಲಸಿಕೆ ಕೇಂದ್ರಕ್ಕೆ ಕಾಲಿಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆಯಬೇಕು. ಇಂಟರ್ನೆಟ್ ಸೌಲಭ್ಯ ಇಲ್ಲದವರಿಗೂ ಜೀವಿಸುವ ಹಕ್ಕಿದೆ'' ಎಂದಿದ್ದಾರೆ.

ಈ ಟ್ವೀಟ್‌ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ''ನೀವು ಅಕೇಶಿಯ ಮರಕ್ಕೆ ಬೀಜಗಳನ್ನು ಬಿತ್ತಿದ್ದೀರಿ, ಅದರಿಂದ ಮಾವಿನಹಣ್ಣನ್ನು ನಿರೀಕ್ಷಿಸಬೇಡಿ ಎಂದು ಕಬೀರದಾಸರು ಹೇಳಿದ್ದಾರೆ. ಅರ್ಥಮಾಡಿಕೊಳ್ಳುವವರಿಗೆ ಅರ್ಥವಾಗುತ್ತದೆ'' ಎಂದು ರಾಹುಲ್‌ ಗಾಂಧಿಗೆ ಟಾಂಗ್‌ ನೀಡಿದ್ದಾರೆ.

''ವಾಕ್-ಇನ್ ನೋಂದಣಿಗೆ ಕೇಂದ್ರ ಸರ್ಕಾರ ಈಗಾಗಲೇ ರಾಜ್ಯಗಳಿಗೆ ಅನುಮೋದನೆ ನೀಡಿದೆ. ಗೊಂದಲವನ್ನು ಹರಡಬೇಡಿ, ಅದನ್ನು ಸರಿಪಡಿಸಿ'' ಎಂದು ಕೂಡಾ ಮನವಿ ಮಾಡಿದ್ದಾರೆ. ಹಾಗೆಯೇ ವಾಕ್-ಇನ್ ನೋಂದಣಿಗಳ ಸುದ್ದಿ ವರದಿಗಳ ಸ್ಕ್ರೀನ್‌ಶಾಟ್‌ಗಳನ್ನೂ ಟ್ವೀಟ್‌ ಮಾಡಿದ್ದಾರೆ.

"ಇಂಟರ್ನೆಟ್ ಅಥವಾ ಸ್ಮಾರ್ಟ್ ಫೋನ್‌ಗಳ ಸೌಲಭ್ಯವಿಲ್ಲದ 18-44 ವಯಸ್ಸಿನ ಜನರು ಕೋವಿನ್ ಡಿಜಿಟಲ್ ಪ್ಲಾಟ್‌ಫಾರ್ಮ್‌ನಲ್ಲಿ ನೋಂದಾಯಿಸಲು ಇಂಟರ್ನೆಟ್ ಇಲ್ಲದೆಯೇ ವಾಕ್-ಇನ್ ಸಹಾಯ ಪಡೆಯಬಹುದು ಎಂದು ಕೇಂದ್ರವು ಕಳೆದ ತಿಂಗಳು ಅಧಿಸೂಚನೆ ಹೊರಡಿಸಿತ್ತು.

ಎಲ್ಲರಿಗೂ ಉಚಿತ ಲಸಿಕೆಗಾಗಿ ಧ್ವನಿಯೆತ್ತಲು ರಾಹುಲ್ ಗಾಂಧಿ ಕರೆ ಎಲ್ಲರಿಗೂ ಉಚಿತ ಲಸಿಕೆಗಾಗಿ ಧ್ವನಿಯೆತ್ತಲು ರಾಹುಲ್ ಗಾಂಧಿ ಕರೆ

ಈ ಹಿಂದೆ ಸಾಂಕ್ರಾಮಿಕ ಮತ್ತು ವ್ಯಾಕ್ಸಿನೇಷನ್ ನೀತಿಯನ್ನು ಕೇಂದ್ರವು ನಿಭಾಯಿಸುವುದರ ಬಗ್ಗೆ ತೀವ್ರವಾಗಿ ಟೀಕಿಸಿರುವ ರಾಹುಲ್ ಗಾಂಧಿ, ''ಲಸಿಕೆಗಳನ್ನು ಸುಲಭವಾಗಿ ದೊರೆಯುವಂತೆ ಸರ್ಕಾರ ವ್ಯವಸ್ಥೆ ಮಾಡಿದ್ದರೆ ಎರಡನೇ ಕೊರೊನಾ ಅಲೆಯು ಇಷ್ಟು ಮಾರಕವಾಗುತ್ತಿರಲಿಲ್ಲ'' ಎಂದು ಹೇಳಿದ್ದಾರೆ.

(ಒನ್‌ಇಂಡಿಯಾ ಸುದ್ದಿ)

English summary
Union Minister Smriti Irani Quotes Poet Kabirdas To criticize Congress leader Rahul Gandhi's Covid Vaccine Appeal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X