ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

12 ವರ್ಷಗಳಲ್ಲೇ ಈ ಬಾರಿ ನಿಧಾನಗತಿಯ ಮುಂಗಾರು

|
Google Oneindia Kannada News

ನವದೆಹಲಿ, ಜೂನ್ 20: 'ವಾಯು' ಚಂಡಮಾರುತದಿಂದಾಗಿ 12 ವರ್ಷಗಳಲ್ಲೇ ಈ ಬಾರಿ ನಿಧಾನಗತಿಯ ಮುಂಗಾರಾಗಿದೆ.

ಈಗ ಮುಂಗಾರು ದೇಶದ ಕೇವಲ ಶೇ. 10-15ರಷ್ಟು ಭಾಗವನ್ನು ಮಾತ್ರ ತಲುಪಿದೆ. ಇಷ್ಟೊತ್ತಿಗೆ ಮುಂಗಾರು ದೇಶವನ್ನೇ ಆವರಿಸಬೇಕಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ. ದೇಶದಲ್ಲಿ ಜೂನ್ 1ರಿಂದ ಇಲ್ಲಿಯವರೆಗೆ ದೇಶಾದ್ಯಂತ ಶೇ.44ರಷ್ಟು ಮಳೆಯಾಗಬೇಕಿತ್ತು. ಈಗ ಮುಂಗಾರು ಕೇರಳ, ಕರ್ನಾಟಕದ ಕೆಲವು ಭಾಗ, ತಮಿಳುನಾಡಿನಲ್ಲಿ ಮಳೆಯಾಗಿದೆ. ಮುಂಗಾರು ಪ್ರಬಲವಾಗಲು ಇನ್ನೂ ಒಂದು ವಾರ ಬೇಕಿದೆ.

2 ದಿನ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಅಲ್ಲಲ್ಲಿ ಸಾಧಾರಣ ಮಳೆ ಸಾಧ್ಯತೆ2 ದಿನ ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಅಲ್ಲಲ್ಲಿ ಸಾಧಾರಣ ಮಳೆ ಸಾಧ್ಯತೆ

ಇನ್ನು ಮೂರ್ನಾಲ್ಕು ದಿನಗಳಲ್ಲಿ ಮುಂಗಾರು ತಮಿಳುನಾಡನ್ನು ಆವರಿಸಲಿದೆ. ಅಲ್ಲಿಂದ ಕರ್ನಾಟಕ, ಕೊಂಕಣ ಹಾಗೂ ಗೋವಾ, ಆಂಧ್ರಪ್ರದೇಶ, ಬಂಗಾಳ, ಸಿಕ್ಕಿಂ, ಒಡಿಶಾದಲ್ಲಿ ಮಳೆಯಾಗಲಿದೆ. ಜೂನ್ 25 ರ ಹೊತ್ತಿಗೆ ಮಹಾರಾಷ್ಟ್ರ ಸೇರಿ ದೇಶಾದ್ಯಂತ ಮುಂಗಾರು ಪ್ರಬಲವಾಗಲಿದೆ.

Slowest progressing monsoon in a last 12 years

ಮಹಾರಾಷ್ಟ್ರ, ತಮಿಳುನಾಡಿನಲ್ಲಿ ನೀರಿನ ಕೊರತೆ ಎದುರಾಗಿದೆ, ಬರ ಪರಿಸ್ಥಿತಿ ಎದುರಿಸಲಾಗುತ್ತಿದೆ. ಸುತ್ತಮುತ್ತಲಿರುವ ಜಲಾಶಯಗಳಲ್ಲಿ ಶೇ.10ರಷ್ಟು ಮಾತ್ರ ನೀರಿನ ಸಂಗ್ರಹವಿದೆ.

2017ರಲ್ಲಿ ಮುಂಗಾರು ಜೂನ್ 18-20ರಕ್ಕೆ ಪ್ರವೇಶಿಸಿತ್ತು, 2013ರಲ್ಲಿ ಜೂನ್ 16ರೊಳಗೆ ಇಡೀ ಭಾರತವನ್ನೇ ಮುಂಗಾರು ಆವರಿಸಿಕೊಂಡಿತ್ತು. ವಾಯು ಚಂಡಮಾರುತದಿಂದ ಕೇವಲ ಗುಜರಾತ್ ನ ಕರಾವಳಿ ಭಾಗದಲ್ಲಿ ಮಾತ್ರ ಮಳೆಯಾಗಿತ್ತು. ಜೂನ್ 29ರ ಸುಮಾರಿಗೆ ದೆಹಲಿಯನ್ನು ತಲುಪಲಿದೆ. ಈ ಬಾರಿ ಸಾಮಾನ್ಯ ಮುಂಗಾರಾಗಿದ್ದು ಶೇ.96ರಷ್ಟು ಮಳೆಯಾಗಲಿದೆ.

ಪಶ್ಚಿಮ ಬಂಗಾಳ, ಸಿಕ್ಕಿಂ, ಒಡಿಶಾದಲ್ಲಿ ಮುಂದಿನ ಮೂರು ನಾಲ್ಕು ದಿನ ಮಳೆ ಮುಂದುವರೆಯಲಿದೆ. ಈ ತಿಂಗಳು ಅತಿ ಕಡಿಮೆ ಮಳೆಯಾಗಲಿದೆ.

English summary
Indian Meteorological Department data says Slowest progressing monsoon in a last 12 years, Monsoon reached just about 10-15 percent of the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X