ಡಿಜಿಟಲ್ ವ್ಯವಹಾರ ಉತ್ತೇಜನಕ್ಕೆ ಮತ್ತೆ ಪ್ರಚಾರಾಂದೋಲನ

ಬೆಂಗಳೂರು, ನವೆಂಬರ್ 8 : ಕೇಂದ್ರ ಸರ್ಕಾರ ಡಿಜಿಟಲ್ ಪೇಮೆಂಟ್ ಹೆಚ್ಚಿಸಲು ಜನವರಿಯಿಂದ ಮತ್ತೊಂದು ಸುತ್ತಿನ ಪ್ರಚಾರ ಕಾರ್ಯವನ್ನು ಆರಂಭಿಸಲಿದೆ. ಅಪನಗದೀಕರಣ ನಂತರ ಡಿಜಿಟಲ್ ಪೇಮೆಂಟ್‌ಗೆ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ.

ಜಾಹೀರಾತು ಮತ್ತು ದೃಶ್ಯ ಪ್ರಚಾರ ನಿರ್ದೇಶನಾಲಯ (ಡಿವಿಎಪಿ) ಪ್ರಚಾರ ಕಾರ್ಯ ಆರಂಭಿಸುವ ಕುರಿತು ಯೋಜನೆ ರೂಪಿಸುತ್ತಿದೆ. ಪ್ರಚಾರ ಕಾರ್ಯಕ್ಕೆ ಬಳಸುವ ಲಾಂಛನ ಮತ್ತು ಘೋಷವಾಕ್ಯವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ.

Since demonetisation, 933 crore electronic transactions have taken place

ಕೇಂದ್ರ ಸರ್ಕಾರದ ಪ್ರತಿ ಇಲಾಖೆಯು ಡಿಜಿಟಲ್ ಪೇಮೆಂಟ್ ಉತ್ತೇಜಿಸಲು ಯೋಜನೆಯನ್ನು ರೂಪಿಸಬೇಕು ಎಂಬ ಪ್ರಸ್ತಾವನೆ ಇದೆ. ಕಳೆದ ವರ್ಷದ ನವೆಂಬರ್ 8ರಂದು 500 ಮತ್ತು 1000 ರೂ. ನೋಟುಗಳನ್ನು ನಿಷೇಧ ಮಾಡಿದ ಬಳಿಕ ಕ್ಯಾಶ್ ಲೆಸ್ ವ್ಯವಹಾರಕ್ಕೆ ಆದ್ಯತೆ ನೀಡಲಾಗುತ್ತಿದೆ.

ನೋಟುಗಳ ನಿಷೇಧದ ಬಳಿಕ ಡಿಜಿಟಲ್ ವ್ಯವಹಾರದಲ್ಲಿ ಏರಿಕೆ ಕಂಡುಬಂದಿದೆ. ಆರ್‌ಬಿಐ ಹೇಳಿಕೆಯಂತೆ ದೇಶದಲ್ಲಿ 933 ಕೋಟಿ ಡಿಜಿಟಲ್ ವ್ಯವಹಾರ ನಡೆದಿದೆ. 2016ರ ನವೆಂಬರ್‌ ನಿಂದ 2017ರ ಸೆಪ್ಟೆಂಬರ್ ತನಕ 12.13 ಲಕ್ಷ ಕೋಟಿ ವ್ಯವಹಾರ ನಡೆದಿದೆ.

2016ರ ಡಿಸೆಂಬರ್‌ನಲ್ಲಿ 95.75 ಕೋಟಿ, 2017ರ ಮಾರ್ಚ್‌ನಲ್ಲಿ 1.49 ಕೋಟಿ, 2017ರ ಸೆಪ್ಟೆಂಬರ್‌ನಲ್ಲಿ 1.24 ಕೋಟಿ ಡಿಜಿಟಲ್ ವ್ಯವಹಾರಗಳು ನಡೆದಿವೆ. ಯುಪಿಐ ಆಧಾರಿತ ಪೇಮೆಂಟ್ ವ್ಯವಸ್ಥೆಯಲ್ಲೂ ಹೆಚ್ಚಳವಾಗಿದೆ.

ಮೊಬೈಲ್ ಬ್ಯಾಕಿಂಗ್ ಕ್ಷೇತ್ರದಲ್ಲಿಯೂ ಹೆಚ್ಚಿನ ಬದಲಾವಣೆಯಾಗಿದೆ. ಸೆಪ್ಟೆಂಬರ್‌ನಲ್ಲಿ 7.23 ಕೋಟಿಯಿಂದ 8.6 ಕೋಟಿಗೆ ವ್ಯವಹಾರ ಹೆಚ್ಚಳವಾಗಿದೆ. ನವೆಂಬರ್ 2016ರ ನಂತರ 1.12 ಲಕ್ಷ ಕೋಟಿಯಿಂದ 1.24 ಲಕ್ಷ ಕೋಟಿಗೆ ವ್ಯವಹಾರ ಹೆಚ್ಚಳವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+