ನೇಪಾಳದಂತೆ ಕರ್ನಾಟಕ & ಭಾರತದಲ್ಲೂ ಸದ್ದಿಲ್ಲದೆ ಸೋಷಿಯಲ್ ಮೀಡಿಯಾ ಅಭಿಯಾನ!
ನೇಪಾಳದಲ್ಲಿ ಮಹಾಕ್ರಾಂತಿ ಆಗಿರುವ ಬಗ್ಗೆ ಈಗ ನಿಮಗೆಲ್ಲರಿಗೂ ತಿಳಿದೇ ಇದೆ. ಇದೀಗ ನೇಪಾಳದಂತೆ ಕರ್ನಾಟಕ ಹಾಗೂ ಭಾರತದಲ್ಲೂ ಸೋಷಿಯಲ್ ಮೀಡಿಯಾ ಅಭಿಯಾನವೊಂದು ಶುರುವಾಗಿದೆ. ನೇಪಾಳದಲ್ಲಿ ಯುವ ಸಮೂಹ Gen Z Generation ನಿಂದ ಹೊಸ ಕ್ರಾಂತಿ ನಡೆಯಿತು. ಇದನ್ನು Gen Z ಅಭಿಯಾನ ಎಂದೇ ಕರೆಯಲಾಗುತ್ತದೆ. ಇದೇ ರೀತಿಯ ಅಭಿಯಾನವೊಂದು ಕರ್ನಾಟಕ ಹಾಗೂ ಭಾರತದಲ್ಲಿ ಸದ್ದಿಲ್ಲದೆ ಶುರುವಾಗಿದೆ. ಕರ್ನಾಟಕದ ರಾಜಕಾರಣಿಗಳು ದೇಶದಲ್ಲೇ ಶ್ರೀಮಂತರಿದ್ದಾರೆ ಎನ್ನುವ ವರದಿಯೊಂದು ಈಚೆಗೆ ಬಂದಿತ್ತು (ಶ್ರೀಮಂತ ಸಚಿವರಲ್ಲಿ / ಶಾಸಕರಲ್ಲಿ 8 ಜನ ಕರ್ನಾಟಕದವರು) ಇದೂ ಸಹ ಹೊಸ ಅಭಿಯಾನಕ್ಕೆ ಕಾರಣವಾಗಿದೆ.
ಹೌದು ನೇಪಾಳದಲ್ಲಿ ಕೇವಲ ಸೋಷಿಯಲ್ ಮೀಡಿಯಾ ಬ್ಯಾನ್ ಮಾತ್ರ ಕಾರಣಕ್ಕೆ ತೀವ್ರ ಪ್ರತಿಭಟನೆ ನಡೆದಿರಲಿಲ್ಲ. ಹಲವು ಕಾರಣಗಳಿಗೆ ನೇಪಾಳದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಅದಕ್ಕೂ ಮೊದಲು ಸೋಷಿಯಲ್ ಮೀಡಿಯಾದಲ್ಲಿ ಕೆಲವೊಂದು ಪ್ರಮುಖ ಅಭಿಯಾನಗಳು ನಡೆದಿದ್ದವು. ಅದರಲ್ಲಿ ರಾಜಕರಾಣಿಗಳ ಐಷಾರಾಮಿ ಜೀವನ ಹಾಗೂ ಅವರ ಮಕ್ಕಳ ಜೀವನದ ಬಗ್ಗೆಯೂ ಹೆಚ್ಚು ಚರ್ಚೆಗಳು ನಡೆದಿದ್ದವು. ಇದೂ ಸಹ ಅಲ್ಲಿ ಅಭಿಯಾನವ ಸ್ವರೂಪವನ್ನು ಪಡೆದುಕೊಂಡಿತ್ತು. ಇದೀಗ ಅದೇ ಮಾದರಿ ಕರ್ನಾಟಕ ಮತ್ತು ಭಾರತದಲ್ಲೂ ನಡೆದಿದೆ.

ನೇಪಾಳದಲ್ಲಿ ತೀವ್ರ ಪ್ರತಿಭಟನೆ ಶುರುವಾಗವುದಕ್ಕೂ ಮುಂಚೆ ಹಲವು ದಿನಗಳಿಂದ ಅಲ್ಲಿನ ಸೋಷಿಯಲ್ ಮೀಡಿಯಾದಲ್ಲಿ ನೇಪಾಳದ ರಾಜಕಾರಣಿಗಳ ಐಷಾರಾಮಿ ಜೀವನ ಹಾಗೂ ಅವರ ಮಕ್ಕಳು ಹೇಗೆ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ವಿಮಾನಗಳಲ್ಲಿ ಬಂದಿಳುಯುತ್ತಿದ್ದಾರೆ, ದುಬಾರಿ ಬ್ಯಾಗ್ ಮತ್ತು ಬಟ್ಟೆಗಳನ್ನು ಬಳಸುತ್ತಿದ್ದಾರೆ ಎನ್ನುವುದು ಚರ್ಚೆ ಆಗುತ್ತಿತ್ತು.
ಅಲ್ಲದೇ ರಾಜಕಾರಣಿಗಳ ಮಕ್ಕಳು ಯಾವ ರೀತಿ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎನ್ನುವುದು ಚರ್ಚೆ ಆಗುತ್ತಿತ್ತು. ನೇಪಾಳದಲ್ಲಿ ಇತ್ತೀಚಿನ ವರ್ಷಗಳಲ್ಲಿ ಬಡತನವು ಹೆಚ್ಚಾಗಿದೆ. ನಿರುದ್ಯೋಗ ಪ್ರಮಾಣವು ಶೇ 19% ರಿಂದ 20 ಪ್ರತಿಶತ ಹೆಚ್ಚಳವಾಗಿದೆ. ಅಲ್ಲದೇ ನೇಪಾಳದ ಜನ ಉದ್ಯೋಗಕ್ಕಾಗಿ ಭಾರತ ಸೇರಿದಂತೆ ನೆರೆಯ ರಾಷ್ಟ್ರಗಳಿಗೆ ವಲಸೆ ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿತ್ತು.
ಈ ಎಲ್ಲಾ ವಿಷಯಗಳು ನೇಪಾಳದ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಅದೇ ಮಾದರಿಯ ಚರ್ಚೆ ಇದೀಗ ಕರ್ನಾಟಕ ಮತ್ತು ಭಾರತದಲ್ಲೂ ನಡೆದಿದೆ. ದೇಶದಲ್ಲಿ ಹಿಂದೂ ಮತ್ತು ಮುಸ್ಲಿಂ ಗಲಭೆ, ಕೋಮುಗಲಭೆ ಹಾಗೂ ಸಂಘರ್ಷಗಳು ಏರ್ಪಟ್ಟು ಎರಡೂ ಸಮುದಾಯಗಳ ನಡುವೆ ಗಲಾಟೆಗಳು ನಡೆದು, ಜಾತಿ - ಜಾತಿಗಳ ನಡುವೆ ಗಲಾಟೆ ನಡೆದು ಜನ ಸಾವನ್ನಪ್ಪುವಾಗ ಸಾಮಾನ್ಯ ಜನರು ಹಾಗೂ ರಾಜಕಾರಣಿಗಳ ಮಕ್ಕಳ ಜೀವನವನ್ನು ಹೋಲಿಕೆ ಮಾಡಿ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ.
एक तरफ़ भाजपा नेताओं के बच्चे मलाई खा रहे हैं, और हमारे देश के बच्चे डंडे खा रहे हैं !
— Neha Yadav🦋 (@nehayadavjnp) September 13, 2025
: प्रशांत भूषण, वरिष्ठ वकील
उनके बच्चे vs आपके बच्चे https://t.co/xtMzDPrm2C
ಕರ್ನಾಟಕ ಮಾತ್ರವಲ್ಲ ರಾಷ್ಟ್ರೀಯ ಮಟ್ಟದಲ್ಲೂ ಈ ಬೆಳವಣಿಗೆ ನಡೆದಿದೆ. ಭಾರತದ ರಾಜಕಾರಣಿಗಳ ಐಷಾರಾಮಿ ಜೀವನ ಹಾಗೂ ಜನ ಸಾಮಾನ್ಯರ ಜೀವನ ಹೇಗಿದೆ, ರಾಜಕಾರಣಿಗಳ ಮಕ್ಕಳು ಹೇಗೆ ಬ್ಯೂಸಿನೆಸ್ ಮಾಡುತ್ತಿದ್ದಾರೆ ಹಾಗೂ ಯಾವ ದೇಶದಲ್ಲಿ ಏನು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ರಾಜಕಾರಣಿಗಳ ಮಕ್ಕಳು ಯಾರೂ ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿಲ್ಲ. ಯಾರೂ ಸಹ ಕೇಸರಿ ಶಾಲು ಅಥವಾ ಯಾವುದೇ ಪಕ್ಷದ ಶಾಲು ಹಾಕಿಕೊಂಡು ಬೀದಿಗೆ ಇಳಿದು ಪ್ರತಿಭಟನೆ ಮಾಡುತ್ತಿಲ್ಲ. ಪೊಲೀಸರಿಂದ ಲಾಠಿಏಟು ತಿನ್ನುತ್ತಿಲ್ಲ ಎನ್ನುವ ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
-
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
Viral Video: ಕಡಿಮೆ ಹಣದಲ್ಲಿ ಬದುಕೋದು ಹೇಗೆ ? ಬೆಂಗಳೂರು ಇಂಟರ್ನ್ ಹೇಳಿದ ಟ್ರಿಕ್ಗಳು -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Kannada Vs Hindi: ಭಾಷಾ ಶಿಕ್ಷಣ–ಸಮಸ್ಯೆ ಇರುವುದು ಫೈನ್ ಟ್ಯೂನಿಂಗ್ನಲ್ಲಿ: ರಾಜಾರಾಂ ತಲ್ಲೂರು ಬರಹ -
Vasudhendra: ಬರಹಗಾರ ವಸುಧೇಂದ್ರಗೆ ಹಿಂಗೇ ಮಾಡಿದ್ರೆ ನಿಮ್ ಪುಸ್ತಕ ಓದೋಕು ಯಾರು ಸಿಗಲ್ಲ ಎಂದ ನೆಟ್ಟಿಗರು -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
Viral Post: ವಿಮಾನದ ಸೀಟುಗಳ ತುಂಬಾ ಕಸದ ರಾಶಿ: ಪ್ರಯಾಣಿಕರ 'ಸಿವಿಕ್ ಸೆನ್ಸ್' ಪ್ರಶ್ನಿಸಿದ ಮಹಿಳೆ -
Siddaramaiah: ಶಿಸ್ತು, ಪ್ರಾಮಾಣಿಕತೆ ಮತ್ತು ಮಾನವೀಯತೆ ಪೊಲೀಸ್ ಸೇವೆಯ ಆಧಾರ: ಸಿದ್ದರಾಮಯ್ಯ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ











Click it and Unblock the Notifications