ಕಾಶ್ಮೀರ ಪತ್ರಕರ್ತನ ಹತ್ಯೆ: ಸಿಸಿಟಿವಿಯಲ್ಲಿದೆ ಶಂಕಿತ ಆರೋಪಿಗಳ ಚಿತ್ರ!
ಶ್ರೀನಗರ, ಜೂನ್ 15: ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ನಡೆದ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆಗೆ ಸಂಬಂಧಿಸಿದಂತೆ ಸಿಸಿಟಿವಿ ಫೂಟೇಜ್ ನಲ್ಲಿ ಸಿಕ್ಕ ಶಂಕಿತ ಆರೋಪಿಗಳ ಚಿತ್ರವನ್ನು ಕಾಶ್ಮೀರಿ ಪೊಲೀಸರು ಬಿಡುಗಡೆ ಮಾಡಿದ್ದಾರೆ.
'ರೈಸಿಂಗ್ ಕಾಶ್ಮೀರ್' ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ ಅವರನ್ನು ನಿನ್ನೆ(ಜೂನ್ 14) ಅವರ ಕಚೇರಿಯ ಬಳಿಯೇ ಗುಂಡು ಹಾರಿಸಿ ಕೊಲ್ಲಲಾಗಿತ್ತು. ದಾಳಿಯ ಸಂದರ್ಭದಲ್ಲಿ ಅವರೊಂದಿಗಿದ್ದ ಅವರ ಭದ್ರತಾ ಸಿಬ್ಬಂದಿಯೂ ಗಾಯಗೊಂಡಿದ್ದರು.
General public is requested to identify the suspects in pictures involved in today’s terror attack at press enclave.#ShujaatBukhari @JmuKmrPolice @spvaid @DIGCKRSGR @PoliceSgr pic.twitter.com/3cXM0CC8BD
— Kashmir Zone Police (@KashmirPolice) June 14, 2018
ಘಟನೆಗೆ ದೇಶದೆಲ್ಲೆಡೆ ಖಂಡನೆ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸಿಸಿಟಿವಿ ಫೂಟೇಜ್ ನಲ್ಲಿದ್ದ ಶಂಕಿತ ಆರೋಪಿಗಳ ಚಿತ್ರವನ್ನು ಬಿಡುಗಡೆ ಮಾಡಿರುವ ಕಾಶ್ಮೀರ ಪೊಲೀಸರು, ಆರೋಪಿಗಳ ಗುರುತು ಸಿಕ್ಕಲ್ಲಿ ಮಾಹಿತಿ ನೀಡುವಂತೆ ಸ್ಥಳೀಯರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ಮೂವರಲ್ಲಿ ಫೆಬ್ರವರಿಯಲ್ಲಿ ನಾಪತ್ತೆಯಾಗಿದ್ದ ನವೀದ್ ಜಾತ್ ಸಹ ಇದ್ದಿರಬಹುದೆಂದು ಗುಪ್ತಚರ ಇಲಾಖೆ ಮಾಹಿತಿ ನೀಡಿತ್ತು.