ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶುಜಾತ್ ಬುಖಾರಿ ಹತ್ಯೆ ಮಾಡಿದ ಮೂವರಲ್ಲಿ ಒಬ್ಬ ಪಾಕ್ ಪ್ರಜೆ!

By Gururaj
|
Google Oneindia Kannada News

ಶ್ರೀನಗರ, ಜೂನ್ 27 : ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಪತ್ರಕರ್ತ ಶುಜಾತ್ ಬುಖಾರಿ ಹತ್ಯೆ ಪ್ರಕರಣದ ಮೂವರು ಆರೋಪಿಗಳ ಗುರುತು ಪತ್ತೆಯಾಗಿದೆ. ಪ್ರಕರಣದ ಒಬ್ಬ ಆರೋಪಿ ಪಾಕಿಸ್ತಾನ ಮೂಲದವನಾಗಿದ್ದಾನೆ.

ಶ್ರೀನಗರದ 'ರೈಸಿಂಗ್ ಕಾಶ್ಮೀರ್' ಪತ್ರಿಕೆಯ ಸಂಪಾದಕ ಶುಜಾತ್ ಬುಖಾರಿ (50) ಅವರನ್ನು ಗುಂಡಿಟ್ಟು ಜೂನ್ 14ರಂದು ಹತ್ಯೆ ಮಾಡಲಾಗಿತ್ತು. ಹತ್ಯೆ ಮಾಡಿದ ಮೂವರು ಆರೋಪಿಗಳ ಗುರುತನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪತ್ರಕರ್ತ ಶುಜಾತ್ ಬುಖಾರಿ ಯಾರು? ಅವರನ್ನು ಕೊಂದಿದ್ದೇಕೆ?ಪತ್ರಕರ್ತ ಶುಜಾತ್ ಬುಖಾರಿ ಯಾರು? ಅವರನ್ನು ಕೊಂದಿದ್ದೇಕೆ?

ಹಂತಕರಲ್ಲಿ ಇಬ್ಬರು ಕಾಶ್ಮೀರದವರಾಗಿದ್ದಾರೆ. ಪಾಕಿಸ್ತಾನ ಮೂಲದ ನವೀದ್ ಜಟ್ ಸಹ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ನವೀದ್ ಪೊಲೀಸರ ವಶದಿಂದ ತಪ್ಪಿಸಿಕೊಂಡ ಆರೋಪಿಯಾಗಿದ್ದು, ಬಳಿಕ ಈ ಹತ್ಯೆಯಲ್ಲಿ ಪಾಲ್ಗೊಂಡಿದ್ದಾನೆ.

Shujaat Bukhari

ಶುಜಾತ್ ಬುಖಾರಿ ಕಾರಿನಲ್ಲಿ ಬರುತ್ತಿದ್ದಾಗ ಬೈಕ್‌ನಲ್ಲಿ ಬಂದ ಮೂವರು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಗುರುತನ್ನು ಪತ್ತೆ ಹಚ್ಚಲಾಗಿದೆ.

18 ವರ್ಷದಿಂದ ಪೊಲೀಸರ ರಕ್ಷಣೆಯಲ್ಲಿದ್ದ ಕಾಶ್ಮೀರದ ಪತ್ರಕರ್ತನ ಹತ್ಯೆ18 ವರ್ಷದಿಂದ ಪೊಲೀಸರ ರಕ್ಷಣೆಯಲ್ಲಿದ್ದ ಕಾಶ್ಮೀರದ ಪತ್ರಕರ್ತನ ಹತ್ಯೆ

ಶುಜಾತ್ ಬುಖಾರಿ ಅವರ ವಿರುದ್ಧ ಬ್ಲಾಗ್ ಬರೆದಿದ್ದ ವ್ಯಕ್ತಿಗಳು, ಇತರ ಪತ್ರಕರ್ತರನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗಿದೆ. ಕೆಲವು ದಿನಗಳ ಹಿಂದೆ ಇಬ್ಬರನ್ನು ಬಂಧಿಸಿ, ವಿಚಾರಣೆ ನಡೆಸಿ ಪೊಲೀಸರು ಬಿಡುಗಡೆ ಮಾಡಿದ್ದರು.

18 ವರ್ಷಗಳಿಂದ ಪೊಲೀಸ್ ಭದ್ರತೆಯಲ್ಲಿದ್ದ ಶುಜಾತ್ ಬುಖಾರಿಯನ್ನು ಬೈಕ್‌ನಲ್ಲಿ ಬಂದ ಮೂವರು ಹತ್ಯೆ ಮಾಡಿದ್ದರು. ಆರೋಪಿ ನವೀದ್ ಜಟ್ ಕಳೆದ ವರ್ಷ ಪೊಲೀಸರ ವಶದಿಂದ ತಪ್ಪಿಕೊಂಡಿದ್ದ.

English summary
Jammu and Kashmir police identified 3 accused who killed senior journalist Shujaat Bukhari. Two accused from South Kashmir and a Pakistani militant involved in murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X