ಶಿವರಾಜ್ ಸಿಂಗ್ ಚೌಹಾಣ್ ದು ರಾಜಕೀಯ ನಾಟಕ: ಕಾಂಗ್ರೆಸ್
ನವದೆಹಲಿ, ಜೂನ್ 10: ಮಧ್ಯಪ್ರದೇಶದಲ್ಲಿ ಒಂದು ವಾರದಿಂದ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿದಂತೆ, ರೈತರು ಶಾಂತಿ ಕಾಯ್ದುಕೊಳ್ಳಿ ಎಂದು ಅನಿರ್ದಿಷ್ಟಾವಧಿ ಉಪವಾಸ ಕೈಗೊಂಡಿರುವ ಶಿವರಾಜ್ ಸಿಂಗ್ ಚೌಹಾಣ್ ಅವರದು ರಾಜಕೀಯ ನಾಟಕ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.
ಇಂದು ನವದೆಹಲಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕ ಜೀತು ಪಟ್ವಾರಿ, 'ಮಧ್ಯಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಯ್ದುಕೊಳ್ಳುವುದನ್ನು ಬಿಟ್ಟು, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ಜವಾಬ್ದಾರಿ ಮರೆತು, ಜನರ ಸಿಂಪತಿ ಗಳಿಸುವುದಕ್ಕಾಗಿ ಉಪವಾಸದ ಗಿಮಿಕ್ ಮಾಡುತ್ತಿರುವುದು ಏಕೆ ?' ಎಂದು ಅವರು ಪ್ರಶ್ನಿಸಿದ್ದಾರೆ.

ಇಂಥ ಯಾವುದೇ ಘಟನೆ ಸಂಭವಿಸಿದರೂ ಬಿಜೆಪಿ ನಾಟಕ ಮಾಡುವುದರಲ್ಲಿಯೇ ಕಾಲಕಳೆಯುತ್ತದೆ ಎಂದು ಅವರು ವ್ಯಂಗ್ಯವಾಡಿದ್ದಾರೆ.
ಮಧ್ಯಪ್ರದೇಶದಲ್ಲಿ ಮುಗಿಲುಮುಟ್ಟಿರುವ ರೈತರ ಆಕ್ರೋಶ ತಣ್ಣಗಾಗಲಿ, ರೈತರು ತಮ್ಮೊಂದಿಗೆ ನೇರವಾಗಿ ಬಂದು ಈ ಬಗ್ಗೆ ಚರ್ಚಿಸಲಿ ಎಂದು ಸ್ವತಃ ಶಿವರಾಜ್ ಸಿಂಗ್ ಚೌಹಾಣ್, ಇಂದು ಬೆಳಗ್ಗೆಯಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.
ಸಾಲಮನ್ನಾ ಮತ್ತು ರೈತರ ಬೆಳೆಗೆ ಬೆಂಬಲ ಬೆಲೆ ನಿಗದಿಪಡಿಸುವ ಕುರಿತಂತೆ ಇಲ್ಲಿ ಹೊತ್ತಿಕೊಂಡಿರುವ ಹೋರಾಟದ ಕಿಚ್ಚು ಇದುವರೆಗೂ ಆರು ರೈತರನ್ನು ಬಲಿತೆಗೆದುಕೊಂಡಿದೆ.












Click it and Unblock the Notifications