8 ತಿಂಗಳ ಶಿಶು ಮೇಲೆ ಅತ್ಯಾಚಾರ: ಕಟು ಶಬ್ದಗಳಿಂದ ನಿಂದಿಸಿದ ಚೌಹಾಣ್
ಇಂದೋರ್, ಏಪ್ರಿಲ್ 21: ಮಧ್ಯಪ್ರದೇಶದ ಇಂದೋರ್ ನಲ್ಲಿ ನಿನ್ನೆ(ಏ.20) ನಡೆದ ಎಂಟು ತಿಂಗಳ ಹಸುಗೂಸಿನ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಈ ಹೀನಾತಿ ಹೀನ ಘಟನೆಯನ್ನು ಕಟು ಶಬ್ದಗಳಿಂದ ದ ಟೀಕಿಸಿದ್ದಾರೆ.
"ನನಗೆ ನಿಜಕ್ಕೂ ದಿಗ್ಭ್ರಮೆಯಾಗಿದೆ. ಈ ಸಮಾಜ ಎತ್ತ ಸಾಗುತ್ತಿದೆ ಎಂಬುದನ್ನು ವಿಮರ್ಶಿಸಬೇಕಾದ ಸಮಯ ಬಂದಿದೆ. ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಚೌಹಾಣ್ ಹೇಳಿದ್ದಾರೆ.'
ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮಧ್ಯಪ್ರದೇಶ ಬಾರ್ ಅಸೋಸಿಯೇಶನ್ ನ ವಕೀಲರು ಯಾವುದೇ ಅತ್ಯಾಚಾರ ಪ್ರಕರಣದಲ್ಲೂ ಆರೋಪಿಯ ಪರ ವಕಾಲತ್ತು ವಹಿಸಬಾರದೆಂಬ ನಿರ್ಧಾರ ಕೈಗೊಂಡಿದ್ದಾರೆ.

ನಿನ್ನೆ ತಂದೆ-ತಾಯಿಯ ಪಕ್ಕ ಮಲಗಿದ್ದ ಎಂಟು ತಿಂಗಳ ಹಸುಗೂಸನ್ನು ಕಾಮುಕನೊಬ್ಬ ಹೊತ್ತೊಯ್ದು, ಹತ್ತಿರದ ಅಂಗಡಿಯೊಂದರ ಬೇಸ್ ಮೆಂಟ್ ನಲ್ಲಿ ಅತ್ಯಾಚಾರ ಎಸಗಿದ್ದಲ್ಲದೆ, ಬರ್ಬರವಾಗಿ ಕೊಲೆ ಮಾಡಿದ್ದ. ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿಯನ್ನು ಪತ್ತೆಹಚ್ಚಿ, ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
12 ವರ್ಷ ವಯಸ್ಸನಿನೊಳಗಿ ಮಕ್ಕಳ ಮೇಲೆ ಅತ್ಯಾಚಾರ ಎಸಗುವ ಕಾಮುಕರಿಗೆ ಗಲ್ಲು ಶಿಕ್ಷೆ ನೀಡುವ ನಿರ್ಧಾರವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿರುವ ಹೊತ್ತಲ್ಲಿ ಇಂಥದೊಂದು ಘಟನೆಗೆ ಬೆಳಕಿಗೆ ಬಂದಿರುವುದು ಶೋಚನೀಯ!











Click it and Unblock the Notifications