ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಯಾಚಿನ್‌ನಲ್ಲಿ ಮೊದಲ ಮಹಿಳಾ ಅಧಿಕಾರಿ ಕಾರ್ಯಾಚರಣೆ, ಯಾರವರು?

|
Google Oneindia Kannada News

ಶ್ರೀನಗರ, ಜನವರಿ 3: ಫೈರ್ ಅಂಡ್ ಫ್ಯೂರಿ ಕಾರ್ಪ್ಸ್ ಅಧಿಕಾರಿ ಕ್ಯಾಪ್ಟನ್ ಶಿವ ಚೌಹಾಣ್ ಅವರು ಸಿಯಾಚಿನ್ ಹಿಮನದಿಯಲ್ಲಿರುವ ಕುಮಾರ್ ಪ್ರದೇಶದ ಅತ್ಯುನ್ನತ ಯುದ್ಧಭೂಮಿಯಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.

ಸಿಯಾಚಿನ್‌ನಲ್ಲಿ 38 ವರ್ಷಗಳ ನಂತರ ಯೋಧನ ಅವಶೇಷ ಪತ್ತೆ!ಸಿಯಾಚಿನ್‌ನಲ್ಲಿ 38 ವರ್ಷಗಳ ನಂತರ ಯೋಧನ ಅವಶೇಷ ಪತ್ತೆ!

ಫೈರ್ ಅಂಡ್ ಫ್ಯೂರಿ ಸ್ಯಾಪರ್ಸ್‌ನ ಕ್ಯಾಪ್ಟನ್ ಶಿವ ಚೌಹಾಣ್ ಅವರು ವಿಶ್ವದ ಎತ್ತರದ ಯುದ್ಧಭೂಮಿಯಲ್ಲಿ ಕುಮಾರ್ ಪೋಸ್ಟ್‌ನಲ್ಲಿ ಕಾರ್ಯಾಚರಣೆಗೆ ನಿಯೋಜಿಸಲ್ಪಟ್ಟ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ ಎಂದು ಭಾರತೀಯ ಸೇನೆಯ ಫೈರ್ ಮತ್ತು ಫ್ಯೂರಿ ಕಾರ್ಪ್ಸ್‌ನ ಅಧಿಕೃತ ಖಾತೆ ಟ್ವೀಟ್ ಮಾಡಿದೆ.

Shiva Chauhan deplyoed as the first woman officer in Siachen

ಟ್ವಿಟ್ಟರ್ ಪೋಸ್ಟ್‌ನಲ್ಲಿ ಶಿವ ಚೌಹಾಣ್‌ ಅವರ ಸಾಧನೆ ಶ್ಲಾಘಿಸಿರುವ ಫೈರ್ ಮತ್ತು ಫ್ಯೂರಿ ಕಾರ್ಪ್ಸ್‌ 'ಬ್ರೇಕಿಂಗ್ ದಿ ಗ್ಲಾಸ್ ಸೀಲಿಂಗ್' ಎಂಬ ಶೀರ್ಷಿಕೆಯನ್ನು ನೀಡಿದೆ. ಕುಮಾರ್ ಪೋಸ್ಟ್‌ನಲ್ಲಿ ಪೋಸ್ಟ್ ಮಾಡುವ ಮೊದಲು ಶಿವ ಕಠಿಣ ತರಬೇತಿಯನ್ನು ಪಡೆಯಬೇಕಾಗಿತ್ತು. ಸಿಯಾಚಿನ್ ಗ್ಲೇಸಿಯರ್ ಭೂಮಿಯ ಮೇಲಿನ ಅತ್ಯಂತ ಎತ್ತರದ ಯುದ್ಧಭೂಮಿಯಾಗಿದ್ದು, 1984 ರಿಂದ ಭಾರತ ಮತ್ತು ಪಾಕಿಸ್ತಾನಗಳು ಮಧ್ಯಂತರವಾಗಿ ಹೋರಾಡುತ್ತಿವೆ.

ಎಂಟು ವಿಶೇಷ ಸಾಮರ್ಥ್ಯವುಳ್ಳ ಜನರ ತಂಡವು ಸೆಪ್ಟೆಂಬರ್ 2021ರಲ್ಲಿ ಸಿಯಾಚಿನ್ ಹಿಮನದಿಯಲ್ಲಿ 15,632 ಅಡಿ ಎತ್ತರದಲ್ಲಿರುವ ಕುಮಾರ್ ಪೋಸ್ಟ್ ಅನ್ನು ತಲುಪಿದಾಗ ವಿಶ್ವ ದಾಖಲೆಯನ್ನು ರಚಿಸಿತ್ತು. ಈ ತಂಡ ಉತ್ತರ ಸೇನೆ ಅಡಿಯಲ್ಲಿ ಕೆಲಸ ಮಾಡುತ್ತದೆ. ಈ ಕಾರ್ಪ್ಸ್ ಸಿಯಾಚಿನ್ ಹಿಮನದಿಯನ್ನು ಚೀನಾ ಮತ್ತು ಪಾಕಿಸ್ತಾನದಿಂದ ರಕ್ಷಿಸುತ್ತದೆ.

Shiva Chauhan deplyoed as the first woman officer in Siachen

1984 ರಿಂದ 2015 ರವರೆಗೆ ಸಿಯಾಚಿನ್‌ನಲ್ಲಿ ಹವಾಮಾನದಿಂದಾಗಿ 873 ಸೈನಿಕರು ಸಾವನ್ನಪ್ಪಿದ್ದಾರೆ. ಆದಾಗ್ಯೂ, ಇದು ಬಹಳ ಕಾರ್ಯತಂತ್ರವಾಗಿ ಬಹಳ ಮುಖ್ಯವಾದ ಕಾರಣ 3000 ಸೈನಿಕರು ಯಾವಾಗಲೂ ಅಲ್ಲಿ ನಿಯೋಜಿಸಲ್ಪಡುತ್ತಾರೆ. ಅಪಘಾತಗಳು ಮತ್ತು ಹಿಮಕುಸಿತಗಳಿಂದಾಗಿ ಬಹಳಷ್ಟು ಸೈನಿಕರು ಸಾವಿನಪ್ಪಿದ್ದಾರೆ.

ನಾಗ್ಪುರದ ತರಬೇತಿ ಕೇಂದ್ರಕ್ಕೆ ದಾಖಲಾದ ಮೊದಲ ಬ್ಯಾಚ್‌ನ ಅಗ್ನೀವೀರರುನಾಗ್ಪುರದ ತರಬೇತಿ ಕೇಂದ್ರಕ್ಕೆ ದಾಖಲಾದ ಮೊದಲ ಬ್ಯಾಚ್‌ನ ಅಗ್ನೀವೀರರು

ಸಿಯಾಚಿನ್‌ನಲ್ಲಿ ನಿಯೋಜಿಸಲಾದ ಸೈನಿಕರಿಗೆ ಭಾರತ ಸರ್ಕಾರ ಪ್ರತಿದಿನ ಸುಮಾರು 5 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ ಎಂದು ಆಜ್ ತಕ್ ವರದಿ ಮಾಡಿದೆ. ವರದಿಗಳ ಪ್ರಕಾರ, ಹಿಮನದಿಯಲ್ಲಿ ಒಟ್ಟು 2500 ಕ್ಕೂ ಹೆಚ್ಚು ಭಾರತ ಮತ್ತು ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ.

English summary
Fire and Fury Corps officer Captain Shiv Chauhan has become the first woman officer to be deployed on the highest battlefield in the Kumar region of the Siachen Glacier.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X