ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಕ್ಟೋಬರ್‌ 1ರಂದು ಶಿರಡಿ ವಿಮಾನ ನಿಲ್ದಾಣ ಲೋಕಾರ್ಪಣೆ

|
Google Oneindia Kannada News

ಶಿರಡಿ, ಸೆಪ್ಟೆಂಬರ್ 21 : ಶಿರಡಿ ಸಾಯಿಬಾಬಾ ದರ್ಶನಕ್ಕೆ ಹೋಗುವ ಭಕ್ತರಿಗೆ ಸಿಹಿ ಸುದ್ದಿ. ಅಕ್ಟೋಬರ್ 1ರಿಂದ ಶಿರಡಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಲಿದೆ. ಟ್ರೂ ಜೆಟ್ ಸೇರಿದಂತೆ ವಿವಿಧ ಕಂಪನಿಗಳು ಶಿರಡಿಗೆ ವಿಮಾನ ಸಂಪರ್ಕ ಕಲ್ಪಿಸಲು ಸಿದ್ಧವಾಗಿವೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋಬರ್ 1ರಂದು ಶಿರಡಿ ವಿಮಾನ ನಿಲ್ದಾಣವನ್ನು ಉದ್ಘಾಟನೆ ಮಾಡಲಿದ್ದಾರೆ. ಪ್ರತಿದಿನ 500 ಪ್ರಯಾಣಿಕರ ಆಗಮನ, ನಿರ್ಗಮನಕ್ಕೆ ವ್ಯವಸ್ಥೆ ಮಾಡಲಾಗಿದೆ. ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯವೂ ನಡೆಯುತ್ತಿದೆ.

'ಶಿರಡಿ ಸಾಯಿಬಾಬಾ ದೇವರಲ್ಲ; ಅವರನ್ನು ನಂಬಬೇಡಿ''ಶಿರಡಿ ಸಾಯಿಬಾಬಾ ದೇವರಲ್ಲ; ಅವರನ್ನು ನಂಬಬೇಡಿ'

Shirdi airport will begin operations from October 1, 2017

ಮುಂಬೈ, ದೆಹಲಿ, ಹೈದರಾಬಾದ್ ನಗರಗಳಿಗೆ ವಿಮಾನ ಹಾರಾಟ ಆರಂಭವಾಗಲಿದೆ. ಅಲೆಯನ್ಸ್ ಏರ್ ಮುಂಬೈ ಮತ್ತು ದೆಹಲಿಗೆ ವಿಮಾನ ಸಂಪರ್ಕ ಕಲ್ಪಿಸಲಿದೆ. ಟ್ರೂ ಜೆಟ್ ಹೈದರಾಬಾದ್‌ಗೆ ಹಾರಾಟ ನಡೆಸಲಿದೆ. ಇಂಡಿಗೋ ಸಹ ವಿಮಾನಯಾನ ಸೇವೆ ಆರಂಭಿಸಲು ಅರ್ಜಿ ಸಲ್ಲಿಸಿದೆ.

ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ ಉದ್ಘಾಟನೆ

ಶಿರಡಿ ವಿಮಾನ ನಿಲ್ದಾಣ 3,200 ಕಿ.ಮೀ ರನ್‌ ವೇ ಹೊಂದಿದೆ. ವಿಮಾನ ನಿಲ್ದಾಣದ ರನ್ ವೇ ವಿಸ್ತರಣಾ ಕಾರ್ಯವೂ ನಡೆಯುತ್ತಿದೆ. ರಾತ್ರಿ ವಿಮಾನಗಳ ಹಾರಾಟಕ್ಕೆ ಇನ್ನೂ ಒಪ್ಪಿಗೆ ಸಿಕ್ಕಿಲ್ಲ. ಕೆಲವು ತಿಂಗಳುಗಳಲ್ಲಿ ಒಪ್ಪಿಗೆ ಸಿಗುವ ಸಾಧ್ಯತೆ ಇದೆ.

ಶಿರಡಿ ಸಾಯಿಬಾಬಾ ದೇವಾಲಯ ವಿಮಾನ ನಿಲ್ದಾಣದಿಂದ 14 ಕಿ.ಮೀ.ದೂರದಲ್ಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣದಿಂದ ದೇವಾಲಯಕ್ಕೆ ತೆರಳಲು ಬಸ್ ವ್ಯವಸ್ಥೆ ಮಾಡಲು ಮಹಾರಾಷ್ಟ್ರ ಸರ್ಕಾರ ಸಿದ್ಧತೆ ನಡೆಸಿದೆ. ಟ್ಯಾಕ್ಸಿ ಸೇವೆಲೂ ಲಭ್ಯವಾಗಲಿದೆ.

ಮಂಗಳೂರು : ರನ್ ವೇ ವಿಸ್ತರಣೆಗೆ ಭೂಮಿಯೇ ಅಡ್ಡಿಮಂಗಳೂರು : ರನ್ ವೇ ವಿಸ್ತರಣೆಗೆ ಭೂಮಿಯೇ ಅಡ್ಡಿ

ಅಲೆಯನ್ಸ್ ಏರ್, ಟ್ರೂ ಜೆಟ್, ಇಂಡಿಗೋ ಹೊರತುಪಡಿಸಿ ಬೇರೆ ಯಾವುದೇ ಕಂಪನಿಗಳು ವಿಮಾನ ಸಂಪರ್ಕ ಕಲ್ಪಿಸಲು ಮುಂದೆ ಬಂದಿಲ್ಲ. ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದ ಬಳಿಕ ಬೇರೆ ಕಂಪನಿಗಳು ವಿಮಾನ ಹಾರಾಟ ನಡೆಸಲು ಆಸಕ್ತಿ ವಹಿಸುವ ಸಾಧ್ಯತೆ ಇದೆ.

English summary
Shirdi new airport will begin operations from October 1, 2017. The Sri Saibaba International Airport will be inaugurated by president Ram Nath Kovind. The state has planned services for Mumbai, Delhi and Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X