ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Breaking; 'ಎರಡು ಕತ್ತಿಗಳು ಮತ್ತು ಗುರಾಣಿ'ಯನ್ನು ಚಿಹ್ನೆಯಾಗಿ ಪಡೆದ ಏಕನಾಥ್ ಶಿಂಧೆ ಬಣ

|
Google Oneindia Kannada News

ಮುಂಬೈ, ಅ.11: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣವು ಮುಂಬರುವ ಅಂಧೇರಿ (ಪೂರ್ವ) ಉಪಚುನಾವಣೆಯ ಚಿಹ್ನೆಯಾಗಿ 'ಎರಡು ಕತ್ತಿಗಳು ಮತ್ತು ಗುರಾಣಿ'ಯನ್ನು ಸ್ವೀಕರಿಸಿದೆ ಎಂದು ಚುನಾವಣಾ ಆಯೋಗ ಮಂಗಳವಾರ ತಿಳಿಸಿದೆ.

ಚುನಾವಣಾ ಆಯೋಗವು ಈಗಾಗಲೇ ಅವರ ಗುಂಪಿಗೆ "ಬಾಳಾಸಾಹೆಬಂಚಿ ಶಿವಸೇನಾ" ಎಂಬ ಹೆಸರನ್ನು ನೀಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣ ಸೂಚಿಸಿದ "ಧಲ್ ತಲ್ವಾರ್" ಉಚಿತ ಚಿಹ್ನೆಗಳ ಪಟ್ಟಿಯಲ್ಲಿಲ್ಲ ಎಂದು ಆಯೋಗವು ತನ್ನ ಪತ್ರದಲ್ಲಿ ಹೇಳಿದೆ.

3 ಹೊಸ ಚುನಾವಣಾ ಚಿಹ್ನೆಗಳ ಪಟ್ಟಿ ಸಲ್ಲಿಸಲು ಏಕನಾಥ ಶಿಂಧೆ ಬಣಕ್ಕೆ ಸೂಚನೆ3 ಹೊಸ ಚುನಾವಣಾ ಚಿಹ್ನೆಗಳ ಪಟ್ಟಿ ಸಲ್ಲಿಸಲು ಏಕನಾಥ ಶಿಂಧೆ ಬಣಕ್ಕೆ ಸೂಚನೆ

"ಇದು 2004 ರಲ್ಲಿ ರಾಜ್ಯ ಪಕ್ಷವೆಂದು ಗುರುತಿಸಲಾಗಿದ್ದ 'ಪೀಪಲ್ಸ್ ಡೆಮಾಕ್ರಟಿಕ್ ಮೂವ್ಮೆಂಟ್' ನ ಹಿಂದಿನ ಕಾಯ್ದಿರಿಸಿದ ಚಿಹ್ನೆ 'ದೋ ತಲ್ವಾರಿನ್ ಔರ್ ಏಕ್ ಧಲ್ (ಎರಡು ಕತ್ತಿಗಳು ಮತ್ತು ಗುರಾಣಿ)' ಅನ್ನು ಹೋಲುತ್ತದೆ. ನಿಮ್ಮ ವಿನಂತಿಯನ್ನು ಸ್ವೀಕರಿಸಿದ ನಂತರ, ಆಯೋಗವು "ದೋ ತಲ್ವಾರಿನ್ ಔರ್ ಏಕ್ ಧಲ್ (ಎರಡು ಕತ್ತಿಗಳು ಮತ್ತು ಗುರಾಣಿ)" ಅನ್ನು ಉಚಿತ ಚಿಹ್ನೆ ಎಂದು ಘೋಷಿಸಲು ನಿರ್ಧರಿಸಿದ್ದು, ಚಿಹ್ನೆ ವಿವಾದದಲ್ಲಿ ಅಂತಿಮ ಆದೇಶವನ್ನು ಅಂಗೀಕರಿಸುವವರೆಗೆ ಅದನ್ನು ನಿಮಗೆ ಹಂಚುತ್ತದೆ" ಎಂದು ಚುನಾವಣಾ ಆಯೋಗದ ಅಧಿಸೂಚನೆ ಹೇಳಿದೆ.

Shindes Shiv Sena Faction Gets Two Swords And Shield As Symbol

ಕಳೆದ ವಾರ, ಚುನಾವಣಾ ಆಯೋಗವು ಉದ್ಧವ್ ಠಾಕ್ರೆ ಮತ್ತು ಏಕನಾಥ್ ಶಿಂಧೆ ಎರಡು ಸೇನಾ ಬಣಗಳ ನಡುವಿನ ವೈಷಮ್ಯದ ನಂತರ ಮಧ್ಯಂತರ ಅವಧಿಗೆ 'ಬಿಲ್ಲು ಮತ್ತು ಬಾಣ' ಚಿಹ್ನೆಯನ್ನು ಸ್ಥಗಿತಗೊಳಿಸಿತ್ತು. 'ಶಿವಸೇನೆ' ಎಂಬ ಹೆಸರನ್ನು ಬಳಸದಂತೆ ಎರಡು ಕಡೆಯವರಿಗೂ ಆದೇಶಿಸಿದೆ.

Shindes Shiv Sena Faction Gets Two Swords And Shield As Symbol

ಸೋಮವಾರ, ಚುನಾವಣಾ ಆಯೋಗವು ಉದ್ಧವ್ ಠಾಕ್ರೆ ಬಣಕ್ಕೆ ಪಕ್ಷದ ಹೆಸರಾಗಿ 'ಶಿವಸೇನಾ - ಉದ್ಧವ್ ಬಾಳಾಸಾಹೇಬ್ ಠಾಕ್ರೆ' ಮತ್ತು ಪಕ್ಷದ ಏಕನಾಥ್ ಶಿಂಧೆ ಗುಂಪಿನ ಹೆಸರು 'ಬಾಳಾಸಾಹೇಬಂಚಿ ಶಿವಸೇನೆ' (ಬಾಳಾಸಾಹೇಬ್ ಅವರ ಶಿವಸೇನೆ) ಎಂದು ನಿಗದಿಪಡಿಸಿದೆ. ಉದ್ಧವ್ ಠಾಕ್ರೆಯ ಶಿವಸೇನೆ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಪಕ್ಷದ ಚಿಹ್ನೆ ಮಶಾಲ್ (ಜ್ವಲಂತ ಜ್ಯೋತಿ) ಎಂದು ಆಯೋಗವು ನಿನ್ನೆ ತಿಳಿಸಿದೆ.

English summary
Eknath Shinde's Shiv sena faction Balasahebanchi Shiv Sena party gets two swords and a shield as its symbol from Election Commission of India. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X