ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀನಾ ಬೋರಾ ಕೊಲೆ ಕೇಸ್: ಇಂದ್ರಾಣಿ, ಪೀಟರ್ ವಿರುದ್ಧ ಸಿಬಿಐ ಆರೋಪ ಪಟ್ಟಿ

ಎರಡು ವರ್ಷಗಳ ಹಿಂದೆ ಬಹಿರಂಗಗೊಂಡಿದ್ದ ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಯ ತಾಯಿ ಇಂದ್ರಾಣಿ ಸೇರಿದಂತೆ ಮೂವರ ಮೇಲೆ ಸಿಬಿಐ, ನ್ಯಾಯಾಲಯದಲ್ಲಿ ಆರೋಪ ಪಟ್ಟಿ ದಾಖಲಿಸಿದೆ.

|
Google Oneindia Kannada News

ನವದೆಹಲಿ, ಜನವರಿ 17: ಎರಡು ವರ್ಷಗಳ ಹಿಂದೆ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶೀನಾ ತಾಯಿ ಇಂದ್ರಾಣಿ ಮುಖರ್ಜಿಯಾ, ಅವರ ಪತಿ ಪೀಟರ್ ಮುಖರ್ಜಿಯಾ ಹಾಗೂ ಇಂದ್ರಾಣಿ ಮಾಜಿ ಪತಿ ಸಂಜೀವ್ ಖನ್ನಾ ವಿರುದ್ಧ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಆರೋಪ ಪಟ್ಟಿ ದಾಖಲಿಸಿದೆ.

ಇಂದ್ರಾಣಿ, ಪೀಟರ್ ಹಾಗೂ ಸಂಜೀವ್ ಅವರು ವಿರುದ್ಧ ಐಪಿಸಿ ಸೆಕ್ಷನ್ 120 (ಬಿ) (ಕ್ರಿಮಿನಲ್ ಸಂಚು), 364 (ಕಿಡ್ನಾಪ್), 302 (ಕೊಲೆ), 34 (ಉದ್ದೇಶ ಈಡೇರಿಕೆಗಾಗಿ ಸಾಂಘಿಕ ಪ್ರಯತ್ನ), 203 (ತನಿಖೆ ವೇಳೆ ಅಧಿಕಾರಿಗಳಿಗೆ ತಪ್ಪು ಮಾಹಿತಿ) ಆರೋಪಗಳನ್ನು ದಾಖಲಿಸಲಾಗಿದೆ.

ಚಿತ್ರದ ಕ್ಯಾಪ್ಷನ್ : ಇಂದ್ರಾಣಿ (ಎಡ), ಶೀನಾ ಬೋರಾ

ಇಂದ್ರಾಣಿ, ಸಂಜೀವ್ ವಿರುದ್ಧ ಐಪಿಸಿ ಸೆಕ್ಷನ್ 307 (ಕೊಲೆ ಪ್ರಯತ್ನ), 120 ಬಿ (ಕ್ರಿಮಿನಲ್ ಸಂಚು) ಆರೋಪಗಳನ್ನು ದಾಖಲಿಸಲಾಗಿದೆ. ಈ ಪ್ರಕರಣದ ವಿಚಾರಣೆ ಸಿಬಿಐ ನ್ಯಾಯಾಲಯದಲ್ಲಿ ಫೆ. 1ರಿಂದ ಆರಂಭಗೊಳ್ಳಲಿದೆ.

2012ರ ಏಪ್ರಿಲ್ 24ರಂದು ಇಂದ್ರಾಣಿ ಮಗಳು ಶೀನಾ (24 ವರ್ಷ) ಅವರ ಅಪಹರಣವಾಗಿತ್ತು. ಶೀನಾ, ಇಂದ್ರಾಣಿಗಿದ್ದ ಮೊದಲ ಸಂಬಂಧದಿಂದ ಜನಿಸಿದ ಪುತ್ರಿ ಎಂದು ಹೇಳಲಾಗಿದೆ. 2012ರಲ್ಲಿ ಆಕೆಯ ಅಪಹರಣ ಮಾಡಿದ್ದ ದುಷ್ಕರ್ಮಿಗಳು ಆಕೆಯ ದೇಹವನ್ನು ಮುಂಬೈ ನಗರದ ಬಳಿಯೇ ಇರುವ ರಾಯಗಢದ ದಟ್ಟ ಅರಣ್ಯ ಪ್ರದೇಶದಲ್ಲಿ ಸುಟ್ಟುಹಾಕಲಾಗಿತ್ತೆಂದು ಹೇಳಲಾಗಿದೆ. ಆದರೂ, ಈ ಕೊಲೆ ಪ್ರಕರಣ ಬೆಳಕಿಗೆ ಬಂದಿದ್ದು 2015ರಲ್ಲಿ. ಅಲ್ಲಿಯವರೆಗೂ ಶೀನಾ ಬೋರಾ ನಾಪತ್ತೆಯಾಗಿರುವ ಸುದ್ದಿ ಮಾತ್ರ ಪ್ರಚಲಿತವಾಗಿತ್ತು.

2015ರಲ್ಲಿ ಇಂದ್ರಾಣಿ ಮನೆಯ ಮಾಜಿ ಚಾಲಕನೊಬ್ಬ ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಕೊಲೆ ವಿಚಾರ ಬಾಯಿಬಿಟ್ಟಿದ್ದ. ಅಲ್ಲಿಂದ ಈ ಪ್ರಕರಣ ತಿರುವು ಪಡೆದುಕೊಂಡಿತ್ತು.

ವಿಚ್ಛೇದನ ಕೊಡಿ ಎಂದ ಇಂದ್ರಾಣಿ: ಏತನ್ಮಧ್ಯೆ, ಶೀನಾ ಬೋರಾ ಕೊಲೆಯ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ, ತಮ್ಮ ಪತಿ ಪೀಟರ್ ಮುಖರ್ಜಿಯಾ ಅವರಿಂದ ತಮಗೆ ವಿಚ್ಛೇದನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದ್ದಾರೆ.

English summary
Special Central Bureau of Investigation (CBI) on Tuesday framed charges against Indrani Mukerjea, her husband Peter Mukerjea and former husband Sanjeev Khanna in Sheena Bora murder case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X