ಕಾಂಗ್ರೆಸ್ ನಾಯಕ ಶಶಿ ತರೂರ್ 'ಕೈ'ಗೂ ಪೊರಕೆ ಬಂತು!

Subscribe to Oneindia Kannada

ತಿರುವನಂತಪುರ, ಅ.25: ಮೋದಿ ಹೊಗಳಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿ ಪಕ್ಷದ ವಕ್ತಾರ ಸ್ಥಾನ ಕಳೆದುಕೊಂಡಿದ್ದ ಕೇಂದ್ರದ ಮಾಜಿ ಸಚಿವ ಶಶಿ ತರೂರ್ ಶನಿವಾರ ಕೈಯಲ್ಲಿ ಪೊರಕೆ ಹಿಡಿದಿದ್ದಾರೆ!

ಆದರೆ ಅವರು ತನ್ನನ್ನು ವಕ್ತಾರ ಸ್ಥಾನದಿಂದ ಕಿತ್ತೆಸೆದ ಕಾಂಗ್ರೆಸ್ ಪಕ್ಷದ ವಿರುದ್ಧ ಪೊರಕೆ ಹಿಡಿದಿಲ್ಲ. ನರೇಂದ್ರ ಮೋದಿ ಅವರ ಸ್ವಚ್ಛ್ ಭಾರತ್ ಅಭಿಯಾನಕ್ಕೆ ಸಾಥ್ ನೀಡಲು ಕೈಗೆ ಪೊರಕೆ ತೆಗೆದುಕೊಂಡಿದ್ದಾರೆ. ನರೇಂದ್ರ ಮೋದಿ ನೀಡಿದ್ದ ಸವಾಲು ಸ್ವೀಕರಿಸಿದ ಶಶಿ ತರೂರ್ ಶನಿವಾರ ತಿರುವನಂತಪುರದ ಬೀಚ್ ವೊಂದನ್ನು ಸ್ವಚ್ಛ ಮಾಡಿದ್ದಾರೆ.[ಮೋದಿ ಹೊಗಳಿ ಹುದ್ದೆ ಕಳೆದುಕೊಂಡ ಶಶಿ ತರೂರ್]

shashi

ಒಬ್ಬ ರಾಜಕಾರಣಿಯಾಗಿ ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ಕಲ್ಪಿಸಿಕೊಳ್ಳಬೇಕೆ ವಿನಃ ಕ್ಷುಲ್ಲಕ ರಾಜಕಾರಣ ಮಾಡುತ್ತ ಕಾಲಹರಣ ಮಾಡುವುದಲ್ಲ. ಇದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದು ತರೂರ್ ಹೇಳಿದ್ದಾರೆ.[ಸುನಂದಾ ದೇಹದಲ್ಲಿತ್ತು ವಿಷದ ಅಂಶ]

ಕಸ ಕಡ್ಡಿಗಳಿಂದ ತುಂಬಿರುವ ವಿಜೀಂಜಮ್ ಸಮುದ್ರ ತೀರವನ್ನು ಸ್ಥಳೀಯರೊಂದಿಗೆ ಸೇರಿ ಸ್ವಚ್ಛ ಮಾಡುತ್ತೇನೆ ಎಂದು ತರೂರ್ ಶುಕ್ರವಾರ ಟ್ವೀಟ್ ಮಾಡಿದ್ದರು.ಸ್ವಚ್ಛ ಭಾರತ್ ಅಭಿಯಾನಕ್ಕೆ ಸಂಬಂಧಿಸಿ ಮೋದಿ, ಸಚಿನ್ ತೆಂಡುಲ್ಕರ್, ಅನಿಲ್ ಅಂಬಾನಿ, ಸಲ್ಮಾನ್ ಖಾನ್ ಮತ್ತು ಶಶಿ ತರೂರ್ ಗೆ ಸವಾಲು ಸ್ವೀಕರಿಸುವಂತೆ ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
This is a further boost to the Prime Minister Narendra Modi's Swachh Bharat campaign but the move could spell trouble for Congress MP Shashi Tharoor. The Congress leader took the PM's Clean India challenge.
Please Wait while comments are loading...